ಯೇಸುವು ದೇವರೇ? ಯೇಸುವು ಎಂದಾದರು ತಾನು ದೇವರೆಂದು ಸಾರಿಕೊಂಡನೇ?ಪ್ರಶ್ನೆ: ಯೇಸುವು ದೇವರೇ? ಯೇಸುವು ಎಂದಾದರು ತಾನು ದೇವರೆಂದು ಸಾರಿಕೊಂಡನೇ?

ಉತ್ತರ:
“ನಾನು ದೇವರು”, ಎಂಬ ಇದೇ ಪದಗಳನ್ನು ಯೇಸುವು ಹೇಳಿದುದು ಬೈಬಲ್ನಲ್ಲಿ ಎಂದೂ ದಾಖಲಾಗಿಲ್ಲ. ಆದರೆ ಅದರರ್ಥ ಅವನು ತಾನು ದೇವರೆಂದು ಸಾರಿಲ್ಲವೆಂದು ಅಲ್ಲ. ಉದಾಹರಣೆಗೆ ಜಾನ್ 10:30 ನಲ್ಲಿ ಯೇಸುವಿನ ಮಾತುಗಳನ್ನು ತೆಗೆದುಕೊಳ್ಳಿ “ನಾನು ಮತ್ತು ತಂದೆಯು ಒಂದೇ ಆಗಿದ್ದೇವೆ”. ಮೊದಲ ನೋಟಕ್ಕೆ ಇದು ದೇವರಾಗಿರುವುದಾಗಿ ಸಾರಿದಂತೆ ಕಾಣುವುದಿಲ್ಲ. ಆದರೆ, ಅವನ ಹೇಳಿಕೆಗೆ ಯಹೂದಿಯ ಪ್ರತಿಕ್ರಿಯೆಯನ್ನು ನೋಡಿ, “ ನಾವು ಈ ಯಾವುದಕ್ಕಾಗಿಯೂ ಕಲ್ಲು ತೂರುತ್ತಿಲ್ಲ, ಜ್ಯೂಗಳು ಉತ್ತರಿಸುತ್ತಾ ಹೇಳಿದರು, ದೈವದ್ರೋಹಕ್ಕಾಗಿ, ಏಕೆಂದರೆ ಕೇವಲವಾದ ಮನುಷ್ಯ, ದೇವರೆಂದು ಸಾರಿಕೊಳ್ಳುತ್ತಿರುವುದರಿಂದ” (ಜಾನ್ 10:33). ಯೇಸುವಿನ ಹೇಳಿಕೆಯನ್ನು ಯಹೂದಿಗಳು ದೇವರೆಂದು ಸಾರಿಕೊಳ್ಳುತ್ತಿರುವುದಾಗಿ ಅರ್ಥ ಮಾಡಿಕೊಂಡರು. ಈ ಕೆಳಗಿನ ಶ್ಲೋಕಗಳಲ್ಲಿ, ಯೇಸುವು ಯಹೂದಿಗಳನ್ನು ಕುರಿತು “ನಾನು ದೇವರೆಂದು ಸಾರಿಕೊಳ್ಳಲಿಲ್ಲ” ಎಂದು ಹೇಳುತ್ತಾ ಸರಿಪಡಿಸಲಿಲ್ಲ. “ನಾನು ಮತ್ತು ತಂದೆ ಒಂದೇ ಆಗಿದ್ದೇವೆ” ಎಂದು ಸಾರಿಕೊಳ್ಳುವ ಮೂಲಕ ಯೇಸುವು ನಿಜಕ್ಕೂ ತಾನು ದೇವರೆಂದು ಹೇಳಿದ ಎಂದು ಸೂಚಿಸುತ್ತದೆ 10:30). ಜಾನ್ 8:58 ಇನ್ನೊಂದು ಉದಾಹರಣೆ. ಯೇಸುವು ಸಾರಿದ, "ನಾನು ನಿಮಗೆ ನಿಜವನ್ನು ಹೇಳುತ್ತೇನೆ, ಅಬ್ರಹಾಂಗೂ ಮೊದಲು ಹುಟ್ಟಿದ್ದು, ನನ್ನ ಇರುವಿಕೆ! ಮತ್ತೆ, ಪ್ರತಿಕ್ರಿಯಿಸುತ್ತಾ, ಜ್ಯೂಗಳು ಯೇಸುವಿಗೆ ಕಲ್ಲು ತೂರಲು ಪ್ರಯತ್ನಿಸುತ್ತಾ ಕಲ್ಲುಗಳನ್ನು ತೆಗೆದುಕೊಳ್ಳುತ್ತಾರೆ, 8:59). ಅವರು ದೈವದ್ರೋಹವೆಂದು ಪರಿಗಣಿಸಿದ ದೇವರೆಂದು ಸಾರಿಕೊಳ್ಳುವುದನ್ನು ಯೇಸುವು ಮಾಡಲಿಲ್ಲವಾದರೆ ಯಹೂದಿಗಳು ಯೇಸುವಿಗೆ ಏಕೆ ಕಲ್ಲು ತೂರುತ್ತಿದ್ದರು?

ಜಾನ್ 1:1 ಹೇಳುತ್ತಾನೆ “ಮಾತೇ ದೇವರಾಗಿತ್ತು.” ಜಾನ್ 1:14 ಹೇಳುತ್ತಾರೆ “ಮಾತೇ ಮಾಂಸಮಯವಾಯಿತು.” ಇದು ಯೇಸುವು ಮಾಂಸಮಯವಾದ ಶರೀರದಲ್ಲಿರುವ ದೇವರು ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಕಾಯ್ದೆ 20:28 ನಮಗೆ ಹೇಳುತ್ತದೆ, "...ತನ್ನದೇ ರಕ್ತದಿಂದ ಕೊಂಡಂತಹ ದೇವರ ಇಗರ್ಜಿಯ ಕುರುಬರಾಗಿರಿ." ತನ್ನದೇ ರಕ್ತದಿಂದ ಇಗರ್ಜಿಯನ್ನು ಯಾರು ಕೊಂಡರು? ಯೇಸು ಕ್ರಿಸ್ತನು. ಕಾಯ್ದೆ 20:28 ದೇವರು ತನ್ನದೇ ರಕ್ತದಿಂದ ಇಗರ್ಜಿಯನ್ನು ಖರೀದಿಸಿದನು ಎಂದು ಘೋಷಿಸುತ್ತದೆ. ಆದ್ದರಿಂದ, ಯೇಸುವು ದೇವರು!

ಶಿಷ್ಯನಾದ ಥಾಮಸ್ ಯೇಸುವನ್ನು ಕುರಿತು ಘೋಷಿಸಿದನು, “ಅಧೀಶ ಮತ್ತು ನನ್ನ ದೇವರು”. (ಜಾನ್ 20:28). ಯೇಸುವು ಅವನನ್ನು ಸರಿಪಡಿಸಲಿಲ್ಲ. ಟಿಟಸ್ 2:13 ನಮ್ಮ ದೇವರು ಮತ್ತು ಉದ್ಧಾರಕನಾದ - ಯೇಸು ಕ್ರಿಸ್ತನ ಬರುವಿಕೆಗೆ ಕಾಯಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. (ಇದನ್ನೂ ನೋಡಿ 2 ಪೀಟರ್ 1:1). ಇದರಲ್ಲಿ ಹೀಬ್ರೂಸ್ 1:8, ಯೇಸುವಿನ ಬಗ್ಗೆ ತಂದೆಯು ಘೋಷಿಸುತ್ತಾನೆ, " ಆದರೆ ಮಗನ ಬಗ್ಗೆ ಅವನು ಹೇಳುತ್ತಾನೆ, "ನಿನ್ನ ಸಿಂಹಾಸನ, ಓ ದೇವರೇ, ಎಂದೆಂದಿಗೂ ಇರುತ್ತದೆ ಮತ್ತು ಧರ್ಮಶೀಲತೆಯು ನಿನ್ನ ಸಾಮ್ರಾಜ್ಯದ ರಾಜದಂಡವಾಗುತ್ತದೆ.”

ದಿವ್ಯಜ್ಞಾನವನ್ನು ನೀಡುತ್ತಾ, ಒಬ್ಬ ದೇವದೂತ ಯೇಸುವಿನ ದೂತನಾದ ಜಾನ್ ಗೆ ದೇವರನ್ನು ಮಾತ್ರ ಪೂಜಿಸಲು ಸೂಚಿಸಿದನು. (ಪ್ರಕರಣ 19:10). ಪವಿತ್ರ ಬೈಬಲಿನಲ್ಲಿ ಹಲವು ಬಾರಿ ಯೇಸುವು ಪೂಜೆಯನ್ನು ಸ್ವೀಕರಿಸುತ್ತಾನೆ. (ಮ್ಯಾಥ್ಯೂ 2:11; 14:33; 28:9,17; ಲ್ಯೂಕ್ 24:52; ಜಾನ್ 9:38). ಅವನನ್ನು ಪೂಜಿಸಿದುದಕ್ಕೆ ಅವನು ಎಂದೂ ಜನರನ್ನು ಗದರಿಸುವುದಿಲ್ಲ. ಯೇಸುವು ದೇವರಲ್ಲವಾಗಿದ್ದರೆ, ದಿವ್ಯಜ್ಞಾನ ಬೋಧನೆಯಲ್ಲಿ ದೇವದೂತನ ಹಾಗೆ, ಅವನು ಜನರಿಗೆ ತನ್ನನ್ನು ಪೂಜೆ ಮಾಡದಿರುವಂತೆ ಹೇಳುತ್ತಿದ್ದನು. ಯೇಸುವಿನ ದೈವತ್ವದ ಪರವಾಗಿ ವಾದಿಸುವ ಹಲವು ಇತರ ಶ್ಲೋಕಗಳು ಮತ್ತು ಉದ್ಧೃತ ಭಾಗಗಳು ಪವಿತ್ರ ಬೈಬಲಿನಲ್ಲಿವೆ.

ಯೇಸುವು ದೇವರಾಗಿರಲೇಬೇಕೆಂಬುದಕ್ಕೆ ಎಲ್ಲಕ್ಕಿಂತ ಮುಖ್ಯವಾದ ಕಾರಣವೆಂದರೆ, ಅವನು ದೇವರಲ್ಲವಾಗಿದ್ದಿದ್ದರೆ, ಇಡೀ ಜಗತ್ತಿನ ಪಾಪಗಳ ದಂಡ ತೆರಲು ಅವನ ಮರಣವು ಸಾಕಾಗುತ್ತಿರಲಿಲ್ಲ. (1 ಜಾನ್ 2:2). ಕೇವಲ ದೇವರಿಗೆ ಮಾತ್ರ ಅಂತಹ ಅನಂತವಾದ ದಂಡ ತೆರಲು ಸಾಧ್ಯವಾಯಿತು. ಜಗತ್ತಿನ ಪಾಪಗಳನ್ನು ದೇವರಿಗೆ ಮಾತ್ರ ತೆಗೆದುಕೊಳ್ಳಲು ಸಾಧ್ಯವಾಯಿತು. (2 ಕರಿಂತಿಯನ್ಸ್ 5:21), ಮರಣ ಹೊಂದು, ಮತ್ತು ಪುನರುಜ್ಜೀವಿತನಾಗು – ಪಾಪ ಮತ್ತು ಮರಣದ ಮೇಲೆ ಅವನ ವಿಜಯವನ್ನು ರುಜುವಾತು ಪಡಿಸುತ್ತಾ.


ಕನ್ನಡ ಹೋಮ್ ಪೇಜ್ ಗೆ ಹಿಂದಿರುಗಿ


ಯೇಸುವು ದೇವರೇ? ಯೇಸುವು ಎಂದಾದರು ತಾನು ದೇವರೆಂದು ಸಾರಿಕೊಂಡನೇ?