settings icon
share icon
ಪ್ರಶ್ನೆ

ಮುಷ್ಟಿಮೈಥುನ – ಸತ್ಯವೇದದ ಪ್ರಕಾರ ಪಾಪವೋ?

ಉತ್ತರ


ಮುಷ್ಟಿಮೈಥುನದ ಹೇಳಿಕೆ ಅಥವಾ ಮುಷ್ಟಿಮೈಥುನ ಪಾಪವೋ ಅಥವಾ ಇಲ್ಲವೋ ಎಂದು ಸತ್ಯವೇದವು ಎಂದಿಗೂ ಸ್ಪಷ್ಟವಾಗಿ ಹೇಳುವದಿಲ್ಲ. ಆದಿಕಾಂಡ 38:9-10ರಲ್ಲಿ ಓನಾನನ ಕಥೆಯಲ್ಲಿ ಮುಷ್ಟಿಮೈಥುನವನ್ನು ಕುರಿತು ವಾಕ್ಯವು ಹೆಚ್ಚಾಗಿ ಸೂಚಿಸುತ್ತದೆ. ನೆಲದ ಮೇಲೆ “ನಿಮ್ಮ ಬೀಜವನ್ನು ಚೆಲ್ಲುವದು” ಪಾಪವೆಂದು ಕೆಲವರು ಈ ವಾಕ್ಯಭಾಗದ ಅರ್ಥವನ್ನು ಹೇಳುತ್ತಾರೆ. ಹೇಗಿದ್ದರೂ, ವಾಕ್ಯಭಾಗವು ಇದನ್ನೇ ಸಂಕ್ಷಿಪ್ತವಾಗಿ ಹೇಳುತ್ತಿಲ್ಲ. ಓನಾನನನ್ನು “ತನ್ನ ಬೀಜವನ್ನು ಚೆಲ್ಲಿದರಿಂದ” ದೇವರು ಅವನಿಗೆ ಖಂಡಿಸಲಿಲ್ಲ, ಆದರೆ ತನ್ನ ಅಣ್ಣನಿಗೆ ಸಂತಾನವನ್ನು ಕೊಡಲು ತನ್ನ ಕರ್ತವ್ಯವನ್ನು ನೆರವೇರಿಸಲು ನಿರಾಕರಿಸಿದಕ್ಕಾಗಿ ಖಂಡಿಸಿದನು. ಈ ವಾಕ್ಯಭಾಗವು ಮುಷ್ಟಿಮೈಥುನವನ್ನು ಕುರಿತಾಗಿರುವದಲ್ಲ, ಆದರೆ ಇದು ಕುಟುಂಬ ಕರ್ತವ್ಯ ಪೂರೈಸುವದನ್ನು ಕುರಿತಾಗಿದೆ. ಮುಷ್ಟಿಮೈಥುನವು ಪಾಪವೆಂದು ಮತ್ತಾಯ 5:27-30 ಆಧಾರವಾಗಿ ಎರಡನೆಯ ವಾಕ್ಯಭಾಗವನ್ನು ಕೆಲವೊಮ್ಮೆ ಉಪಯೋಗಿಸಲಾಗಿದೆ. ಶಾರೀರದಾಶೆಯ ಆಲೋಚನೆಗಳಿಗೆ ವಿರುದ್ಧವಾಗಿ ಯೇಸು ಮಾತನಾಡಿ ಹೀಗೆ ಹೇಳಿದನು, “ನಿನ್ನ ಬಲಗೈ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಡಿದು ಬಿಸಾಟುಬಿಡು.” ಈ ವಾಕ್ಯಭಾಗ ಮತ್ತು ಮುಷ್ಟಿಮೈಥುನದ ನಡುವೆ ಸಮಾಂತರಗಳು ಇರುವದರಿಂದ, ಯೇಸು ಪರೋಕ್ಷವಾಗಿ ಸೂಚಿಸಿದಂತ ಮುಷ್ಟಿಮೈಥುನವು ಭಿನ್ನವಾಗಿದೆ.

ಮುಷ್ಟಿಮೈಥುನವು ಪಾಪವೆಂದು ಸ್ಪಷ್ಟವಾಗಿ ಸತ್ಯವೇದವು ಎಲ್ಲೂ ಹೇಳದೆ ಇರುವದರಿಂದ, ಮುಷ್ಟಿಮೈಥುನಕ್ಕೆ ನಡೆಸುವ ಕ್ರಿಯೆಗಳು ಪಾಪಕರವೆಂದು ಹೇಳಬಹುದಾದ ಪ್ರಶ್ನೆಯೇ ಇಲ್ಲ. ಮುಷ್ಟಿಮೈಥುನವು ಯಾವಾಗಲೂ ಕೇವಲ ಶಾರೀರಿಕ ದುರಾಶೆಗಳು, ಲೈಂಗಿಕ ಉದ್ದೀಪನ, ಮತ್ತು/ಅಥವಾ ಅಶ್ಲೀಲ ಚಿತ್ರಗಳ ಪರಿಣಾಮವಾಗಿದೆ. ಶರೀರದಾಶೆ, ಅನೈತಿಕ ಆಲೋಚನೆಗಳು ಮತ್ತು ಅಶ್ಲೀಲ ಚಿತ್ರಗಳನ್ನು ತೊರೆದು ಬಿಟ್ಟು ಜಯಸಾಧಿಸಿದರೆ, ಮುಷ್ಟಿಮೈಥುನವು ಸಮಸ್ಯೆಯಾಗಿರುವದಿಲ್ಲ. ಅನೇಕ ಜನರು ಮುಷ್ಟಿಮೈಥುನವನ್ನು ಕುರಿತಾದ ಅಪರಾಧದ ಭಾವನೆಗಳಿಂದ ಹೋರಾಡುತ್ತಿರುತ್ತಾರೆ, ವಾಸ್ತವವಾಗಿ, ಈ ಕೃತ್ಯಕ್ಕೆ ನಡೆಸುವ ಕಾರ್ಯಗಳು ಹೆಚ್ಚು ಪಶ್ಚಾತ್ತಾಪಕ್ಕೆ ಯೋಗ್ಯವಾಗಿವೆ.

ಮುಷ್ಟಿಮೈಥುನದ ಸಮಸ್ಯೆಗೆ ಸತ್ಯವೇದದ ಕೆಲವು ತತ್ವಗಳನ್ನು ಅನ್ವಯಿಸಬಹುದು. ಎಫೆಸ 5:3 ಹೀಗೆ ಹೇಳುತ್ತದೆ, 3 “ಜಾರತ್ವ ಯಾವ ವಿಧವಾದ ಬಂಡುತನ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು; ಇವುಗಳಿಗೆ ದೂರವಾಗಿರುವದೇ ದೇವಜನರಿಗೆ ಯೋಗ್ಯವಾದದ್ದು.” ಈ ನಿರ್ಧಿಷ್ಟವಾದ ಪರೀಕ್ಷೆಯನ್ನು ಮುಷ್ಟಿಮೈಥುನವು ಹೇಗೆ ಸಫಲತೆ ಹೊಂದುತ್ತದೆ ಎಂದು ನೋಡುವುದು ಕಷ್ಟಕರವಾಗಿದೆ. ಸತ್ಯವೇದವು ನಮಗೆ ಬೋಧಿಸುವದೇನಂದರೆ, “ಹೀಗಿರಲಾಗಿ ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ” (1 ಕೊರಿಂಥ 10:31). ನೀವು ಯಾವುದಕ್ಕಾದರು ದೇವರಿಗೆ ಮಹಿಮೆ ಕೊಡದಿದ್ದರೆ, ನೀವು ಅದನ್ನು ಮಾಡಬಾರದು. ಒಂದು ಕೃತ್ಯವು ದೇವರನ್ನು ಮೆಚ್ಚಿಸುತ್ತಿದೆ ಎಂದು ಒಬ್ಬ ವ್ಯಕ್ತಿಗೆ ಸಂಪೂರ್ತಿಯಾಗಿ ಮನವರಿಕೆಯಾಗದಿದ್ದರೆ, ಆಗ ಅದು ಪಾಪವಾಗಿದೆ: “ಯಾವದಕ್ಕೆ ನಂಬಿಕೆಯು ಆಧಾರವಿಲ್ಲವೋ ಅದು ಪಾಪ” (ರೋಮಾ 14:23). ಮತ್ತಷ್ಟು, ನಮ್ಮ ದೇಹಗಳನ್ನು ವಿಮೋಚಿಸಲಾಗಿ ದೇವರಿಗೆ ಸೇರಿದವುಗಳಾಗಿವೆ ಎಂದು ನಾವು ನೆನಪಿಡಬೇಕಾಗಿದೆ. “ದೇವರಿಂದ ದೊರಕಿ ನಿಮ್ಮೊಳಗೆ ನೆಲೆಗೊಂಡಿರುವ ಪವಿತ್ರಾತ್ಮನಿಗೆ ನಿಮ್ಮ ದೇಹವು ಗರ್ಭಗುಡಿಯಾಗಿದೆಂಬದು ನಿಮಗೆ ತಿಳಿಯದೊ? ನೀವು ನಿಮ್ಮ ಸ್ವಂತ ಸೊತ್ತಲ್ಲ; ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು; ಆದಕಾರಣ ನಿಮ್ಮ ದೇಹದಲ್ಲಿ ದೇವರ ಪ್ರಭಾವವನ್ನು ಪ್ರಕಾಶಪಡಿಸಿರಿ ” (1 ಕೊರಿಂಥ 6:19-20). ನಮ್ಮ ದೇಹಗಳಿಂದ ನಾವು ಮಾಡುವದನ್ನು ಕುರಿತು ಈ ದೊಡ್ಡ ಸತ್ಯವು ನಿಜವಾದ ಫಲವನ್ನು ಕೊಡಬೇಕು. ಈ ಮೂಲತತ್ವಗಳ ಬೆಳಕಿನಲ್ಲಿ, ಸತ್ಯವೇದಾನುಸಾರವಾಗಿ ಮುಷ್ಟಿಮೈಥುನವು ಪಾಪವಾಗಿದೆ. ಸ್ಪಷ್ಟವಾಗಿ, ಮುಷ್ಟಿಮೈಥುನವು ದೇವರನ್ನು ಮಹಿಮೆಪಡಿಸುವದಿಲ್ಲ; ಅದು ಅನೈತಿಕತೆಯ ಕಾಣುವಿಕೆಯನ್ನು ತಪ್ಪಿಸುವದಿಲ್ಲ, ಅಥವಾ ದೇವರು ನಮ್ಮ ದೇಹಗಳ ಮೇಲೆ ಯಜಮಾನತ್ವವನ್ನು ಹೊಂದಿದ್ದಾನೆ ಎಂಬುದಕ್ಕೆ ಪರೀಕ್ಷೆಯಲ್ಲಿ ಸಫಲಹೊಂದುವದಿಲ್ಲ.

English



ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ಮುಷ್ಟಿಮೈಥುನ – ಸತ್ಯವೇದದ ಪ್ರಕಾರ ಪಾಪವೋ?
Facebook icon Twitter icon Pinterest icon Email icon
© Copyright Got Questions Ministries