settings icon
share icon
ಪ್ರಶ್ನೆ

ಸ್ತ್ರೀ ಸಭಾಪಾಲಕರು/ಬೊಧಕರು? ಸೇವೆಯಲ್ಲಿರುವ ಸ್ತ್ರೀಯರನ್ನು ಕುರಿತು ಸತ್ಯವೇದವು ಏನು ಹೇಳುತ್ತದೆ?

ಉತ್ತರ


ಸ್ತ್ರೀ ಸಭಾಪಾಲಕರು/ಬೋಧಕರು ಸೇವೆ ಮಾಡುವ ಸಮಸ್ಯೆಯನ್ನು ಕುರಿತು ಇಂದು ಸಭೆಯಲ್ಲಿ ಬಿಸಿ ಚರ್ಚೆಯಾಗುವ ಸಮಸ್ಯೆಗಿಂತ ಹೆಚ್ಚಾಗಿ ಬಹುಶಃ ಬೇರೆ ಯಾವುದೂ ಇಲ್ಲ. ಇದರ ಪರಿಣಾಮವಾಗಿ, ಈ ಸಮಸ್ಯೆಯನ್ನು ಪುರುಷ ಮತ್ತು ಸ್ತ್ರೀಯಂತೆ ನೋಡದಿರುವದು ಬಹಳ ಪ್ರಾಮುಖ್ಯವಾಗಿದೆ. ಸ್ತ್ರೀಯರು ಸಭಾಪಾಲಕರಾಗಿ ಸೇವೆ ಮಾಡಬಾರದೆಂದು ಮತ್ತು ಸತ್ಯವೇದವು ಸ್ತ್ರೀಯರ ಸೇವೆಯನ್ನು ಕುರಿತು ನಿರ್ಬಂಧಗಳನ್ನು ಹಾಕುತ್ತದೆಂದು ನಂಬುವ ಸ್ತ್ರೀಯರಿದ್ದಾರೆ ಮತ್ತು ಸ್ತ್ರೀಯರು ಸಭಾಪಾಲಕರಾಗಿ ಸೇವೆ ಮಾಡಬಹುದೆಂದು ಮತ್ತು ಸತ್ಯವೇದದಲ್ಲಿ ಸ್ತ್ರೀಯರ ಸೇವೆಯನ್ನು ಕುರಿತು ಯಾವುದೇ ನಿರ್ಬಂಧಗಳಿಲ್ಲವೆಂದು ನಂಬುವ ಪುರುಷರಿದ್ದಾರೆ. ಇದು ಕಟ್ಟಭಿಮಾನ ಅಥವಾ ಪಕ್ಷಪಾತದ ಸಮಸ್ಯೆಯಲ್ಲ. ಇದು ಒಂದು ಸತ್ಯವೇದಾನುಸಾರದ ಅನುವಾದದ ಸಮಸ್ಯೆಯಾಗಿದೆ.

“ಸ್ತ್ರೀಯರು ಮೌನವಾಗಿದ್ದು ಪೂರ್ಣವಿಧೇಯರಾಗಿ ಉಪದೇಶವನ್ನು ಕೇಳಬೇಕು. ಉಪದೇಶಮಾಡುವದಕ್ಕಾಗಲಿ ಪುರುಷರ ಮೇಲೆ ಅಧಿಕಾರ ನಡೆಸುವದಕ್ಕಾಗಲಿ ಸ್ತ್ರೀಯರಿಗೆ ನಾನು ಅಧಿಕಾರ ಕೊಟ್ಟಿಲ್ಲ; ಅವರು ಮೌನವಾಗಿರಬೇಕು” ಎಂದು ದೇವರ ವಾಕ್ಯವು ಹೇಳುತ್ತದೆ (1 ತಿಮೋಥೆ 2:11-12). ಸಭೆಯಲ್ಲಿ ದೇವರು ಸ್ತ್ರೀ ಮತ್ತು ಪುರುಷರಿಗೆ ಬೇರೆ ಬೇರೆ ಪಾತ್ರಗಳನ್ನು ನಿಗಧಿಪಡಿಸುತ್ತಾನೆ. ಇದು ಮಾನವನು ಉಂಟುಮಾಡಲ್ಪಟ್ಟ ವಿಧಾನ ಮತ್ತು ಪಾಪವು ಲೋಕಕ್ಕೆ ಪ್ರವೇಶ ಮಾಡಿದ ವಿಧಾನದ ಒಂದು ಫಲವಾಗಿದೆ (1 ತಿಮೋಥೆ 2:13-14). ಸ್ತ್ರೀಯರು ಭೋಧಿಸುವ ಪಾತ್ರಗಳಲ್ಲಿ ಸೇವೆ ಮಾಡುವದನ್ನು ಮತ್ತು/ಅಥವಾ ಮನುಷ್ಯನ ಮೇಲೆ ಆತ್ಮಿಕ ಅಧಿಕಾರ ಹೊಂದುವದನ್ನು ದೇವರು ಅಪೊಸ್ತಲನಾದ ಪೌಲನ ಮೂಲಕ ನಿರ್ಬಂಧಿಸುತ್ತಾನೆ. ಅವರಿಗೆ ಬೋಧನೆ ಮಾಡುವದನ್ನು, ಅವರಿಗೆ ಬಹಿರಂಗವಾಗಿ ಉಪದೇಶ ಮಾಡುವದನ್ನು ಮತ್ತು ಅವರ ಮೇಲೆ ಆತ್ಮಿಕ ಅಧಿಕಾರ ಅಭ್ಯಾಸ ಮಾಡುವದನ್ನು ಖಂಡಿತವಾಗಿ ಒಳಗೊಂಡಂತೆ, ಇದು ಸ್ತ್ರೀಯರು ಪುರುಷರ ಮೇಲೆ ಸಭಾಪಾಲಕರಾಗಿ ಸೇವೆ ಮಾಡುವದರಿಂದ ಪ್ರತಿರೋಧಿಸುತ್ತದೆ.

ಸಭಾಪಾಲಕರ ಸೇವೆಯಲ್ಲಿ ಸ್ತ್ರೀಯ ಈ ಅವಲೋಕನವನ್ನು ಕುರಿತು ಅನೇಕ ಆಕ್ಷೇಪಣೆಗಳಿವೆ. ಸಾಮಾನ್ಯವಾದವು ಯಾವದೆಂದರೆ ಮೊದಲನೆಯ ಶತಮಾನದಲ್ಲಿ ಸ್ತ್ರೀಯರು ಸಾಂಕೇತಿಕವಾಗಿ ಅನಕ್ಷರಸ್ಥರಾಗಿರುವ ಕಾರಣದಿಂದ ಸ್ತ್ರೀಯರು ಉಪದೇಶ ಮಾಡುವದನ್ನು ನಿರ್ಬಂಧಿಸುತ್ತಿದ್ದರು. ಹೇಗಾದರೂ, 1 ತಿಮೋಥೆ 2:11-14ರಲ್ಲಿ ಶಿಕ್ಷಣದ ವಿದ್ಯಮಾನದ ಬಗ್ಗೆ ಎಲ್ಲೂ ಹೇಳಲಿಲ್ಲ. ವಿದ್ಯಾಭ್ಯಾಸವು ಸೇವೆಗೆ ಅರ್ಹತೆಯಾಗಿದ್ದರೆ, ಆಗ ಯೇಸು ಕ್ರಿಸ್ತನ ಶಿಷ್ಯರಲ್ಲಿ ಹೆಚ್ಚಿನವರು ಅರ್ಹರಾಗುತ್ತಿರಲಿಲ್ಲ. ಪೌಲನು ಪುರುಷರಿಗೆ ಉಪದೇಶ ಮಾಡಲು ಎಫೆಸ ಸಭೆಯಲ್ಲಿರುವ ಸ್ತ್ರೀಯರನ್ನು ಮಾತ್ರ ನಿರ್ಬಂಧಿಸುವದು ಎರಡನೆಯ ಸಾಮಾನ್ಯ ನಿರ್ಬಂಧವಾಗಿತ್ತು. (1 ತಿಮೋಥೆ ಪತ್ರಿಕೆಯು ಎಫೆಸ ಸಭೆಗೆ ಸಭಾಪಾಲಕನಾಗಿದ್ದ ತಿಮೋಥೆಯನಿಗೆ ಬರೆಯಲ್ಪಟ್ಟಿದೆ). ಎಫೆಸ ಪಟ್ಟಣವು ಅದರ ದೇವಾಲಯವಾಗಿದ್ದ ಅರ್ಟೆಮಿಸ್ ಗೆ ಪ್ರಸಿದ್ಧವಾಗಿತ್ತು ಮತ್ತು ಅದರ ಶಾಖೆಯಾಗಿದ್ದ ಪೆಗಾನಿಸಮ್ ನಲ್ಲಿ ಸ್ತ್ರೀಯರು ಅಧಿಕಾರದಲ್ಲಿದ್ದರು - ಆದುದರಿಂದ, ಪೌಲನು ಎಫೆಸ ಪಟ್ಟಣದ ಸ್ತ್ರೀಯರಿಂದ - ನಡೆಸಲ್ಪಡುವ ಸಂಪ್ರದಾಯದ ವಿಗ್ರಹಾರಾಧಕರ ವಿರುದ್ಧ ಮಾತ್ರ ಪ್ರತಿಕ್ರಿಯಿಸಿದನು. ಹೇಗಾದರೂ, 1 ತಿಮೋಥೆಯ ಪುಸ್ತಕದಲ್ಲಿ ಅಟೆರ್ಮಿಸ್ ಕುರಿತು ಎಲ್ಲೂ ಹೇಳಲಿಲ್ಲ ಅಥವಾ 1 ತಿಮೋಥೆ 2:11-12 ರ ಪ್ರತಿಕ್ರಿಯೆಯಲ್ಲಿ ಪೌಲನು ಅಟೆರ್ಮಿಸ್ ಆರಾಧಕರ ಮಟ್ಟದ ಅಭ್ಯಾಸವನ್ನು ಒಂದು ಕಾರಣದಂತೆ ಎಲ್ಲೂ ಹೇಳಲಿಲ್ಲ.

ಪೌಲನು ಸಾಮಾನ್ಯವಾಗಿ ಪುರುಷ ಮತ್ತು ಸ್ತ್ರೀಯರನ್ನು ಕುರಿತಾಗಿ ಅಲ್ಲದೆ ಗಂಡ ಮತ್ತು ಹೆಂಡತಿಯರನ್ನು ಮಾತ್ರ ಹೇಳುತ್ತಿರುವದು ಮೂರನೆಯ ನಿರ್ಬಂಧನೆಯಾಗಿದೆ. 1 ತಿಮೋಥೆ 2 ರಲ್ಲಿ “ಪುರುಷ” ಮತ್ತು “ಸ್ತ್ರೀ” ಯ ಗ್ರೀಕ್ ಪದಗಳು ಗಂಡ ಮತ್ತು ಹೆಂಡತಿಗೆ ಹೇಳಲ್ಪಟ್ಟಿವೆ; ಹೇಗಾದರೂ, ಪದಗಳ ಮೂಲ ಅರ್ಥವು ಅದಕ್ಕಿಂತ ವಿಶಾಲವಾಗಿದೆ. ಇನ್ನೂ ಹೆಚ್ಚಾಗಿ, ಅದೇ ಗ್ರೀಕ್ ಪದಗಳನ್ನು 8-10 ವಚನಗಳಲ್ಲಿ ಉಪಯೋಗಿಸಲಾಗಿವೆ. ಕೇವಲ ಗಂಡಂದಿರು ಮಾತ್ರ ಯಾವುದೇ ಕೋಪ ಮತ್ತು ವಿರೋಧವಿಲ್ಲದೆ ಪ್ರಾರ್ಥನೆಯಲ್ಲಿ ಪರಿಶುದ್ಧ ಕೈಗಳನ್ನು ಎತ್ತಬೇಕೋ (ವ.8)? ಕೇವಲ ಹೆಂಡತಿಯರು ಮಾತ್ರ ಆಡಂಬರವಿಲ್ಲದೆ ಬಟ್ಟೆಗಳನ್ನು ಧರಿಸಬೇಕೋ. ಒಳ್ಳೆಯ ಕೆಲಸಗಳನ್ನು ಮಾಡಬೇಕೋ ಮತ್ತು ದೇವರನ್ನು ಆರಾಧಿಸಬೇಕೋ (9-10)? ಖಂಡಿತವಾಗಿಯೂ ಇಲ್ಲ. 8-10 ನೇಯ ವಚನಗಳು ಗಂಡ ಮತ್ತು ಹೆಂಡತಿಯರಿಗೆ ಮಾತ್ರವಲ್ಲದೇ ಎಲ್ಲಾ ಸ್ತ್ರೀ ಮತ್ತು ಪುರುಷರಿಗೆ ಸ್ಪಷ್ಟವಾಗಿ ಹೇಳಲ್ಪಟ್ಟಿದೆ. ವನಚ 11-14 ರಲ್ಲಿ ಗಂಡ ಮತ್ತು ಹೆಂಡತಿಯರಿಗೆ ಪ್ರತ್ಯೇಕವಾಗಿ ಸೂಚಿಸುವದು ಈ ಸಂದರ್ಭದಲ್ಲಿ ಯಾವುದೂ ಇಲ್ಲ.

ಸತ್ಯವೇದದಲ್ಲಿ ನಾಯಕತ್ವದ ಸ್ಥಾನವನ್ನು ಹೊಂದಿದ್ದ ಸ್ತ್ರೀಯರು, ವಿಶೇಷವಾಗಿ ಹಳೆಯ ಒಡಂಬಡಿಕೆಯಲ್ಲಿರುವ ಮಿರಿಯಾಮಳು, ದೆಬೋರಳು ಮತ್ತು ಹುಲ್ದಳಿಗೆ ಸಂಬಧದಲ್ಲಿ ಸಭಾಪಾಲಕರ ಸೇವೆಯ ಸ್ತ್ರೀಯರಿಗೆ ಈ ಅರ್ಥ ವಿವರಣೆಯು ಇನ್ನೂ ಒಂದು ನಿರ್ಬಂಧವಾಗಿದೆ. ಈ ಸ್ತ್ರೀಯರು ದೇವರಿಗೆ ಆತನ ವಿಶೇಷ ಸೇವೆಗಾಗಿ ಆರಿಸಿಕೊಂಡದ್ದು ನಿಜವಾಗಿದೆ ಮತ್ತು ಅವರು ನಂಬಿಕೆ, ಧೈರ್ಯ ಮತ್ತು ನಾಯಕತ್ವದಲ್ಲಿ ಮಾದರಿಯಂತೆ ನಿಂತಿದ್ದರು. ಹೇಗಾದರೂ, ಹಳೆಯ ಒಡಂಬಡಿಕೆಯಲ್ಲಿನ ಸ್ತ್ರೀಯರ ಅಧಿಕಾರವು ಸಭೆಯಲ್ಲಿರುವ ಸಭಾಪಾಲಕರ ಸಮಸ್ಯೆಯ ವಿಷಯಕ್ಕೆ ಸಂಬಂಧಪಟ್ಟಿರುವದಿಲ್ಲ. ಹೊಸ ಒಡಂಬಡಿಕೆಯ ಪತ್ರಿಕೆಗಳು ದೇವರ ಜನರಿಗೆ-ಸಭೆಗೆ-ಕ್ರಿಸ್ತ ದೇಹಕ್ಕೆ ಹೊಸ ನಿದರ್ಶನವನ್ನು ಕೊಡುತ್ತದೆ ಮತ್ತು ಆ ನಿದರ್ಶನವು ಇಸ್ರಾಯೇಲ್ ದೇಶಕ್ಕಲ್ಲದೇ ಅಥವಾ ಯಾವುದೇ ಹಳೆಯ ಒಡಂಬಡಿಕೆಯ ಮೂಲ ಸ್ವಭಾವಕ್ಕಲ್ಲದೆ, ಸಭೆಯ ಒಂದು ಏಕಮಾತ್ರ ಅಧಿಕಾರದ ವ್ಯವಸ್ಥೆಯನ್ನು ಅಂಥರ್ಗತ ಮಾಡುತ್ತದೆ.

ಹೊಸ ಒಡಂಬಡಿಕೆಯಲ್ಲಿ ಪೊಯಿಬೆ ಮತ್ತು ಪ್ರಿಸ್ಕಿಲ್ಲರನ್ನು ಉಪಯೋಗಿಸಿ ಅದೇ ವಿಧವಾದ ಚರ್ಚೆಗಳು ಮಾಡಲ್ಪಟ್ಟಿವೆ. ಅಪೊಸ್ತಲರ ಕೃತ್ಯಗಳು 18ರಲ್ಲಿ ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಕ್ರಿಸ್ತನಿಗಾಗಿ ನಂಬಿಗಸ್ತಿಕೆಯ ಸೇವಕರಾಗಿ ತೋರಿಸಲ್ಪಟ್ಟಿದ್ದಾರೆ. ಪ್ರಿಸ್ಕಿಲ್ಲಳ ಹೆಸರು ಮೊದಲು ಹೇಳಲ್ಪಟ್ಟಿದೆ, ಬಹುಶಃ ಅವಳು ಸೇವೆಯಲ್ಲಿ ತನ್ನ ಗಂಡನಿಗಿಂತ ಹೆಚ್ಚು ಪ್ರಾಮುಖ್ಯವಾಗಿದ್ದಳೆಂದು ಸೂಚಿಸುತ್ತದೆ. ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಯೇಸು ಕ್ರಿಸ್ತನ ಸುವಾರ್ತೆಯನ್ನು ಅಪೊಲ್ಲೋಸನಿಗೆ ಬೋಧಿಸಿದರೋ? ಹೌದು, ಅವರ ಮನೆಯಲ್ಲಿ “ದೇವರ ಮಾರ್ಗವನ್ನು ಹೆಚ್ಚು ಸಮರ್ಪಕವಾಗಿ ಅವರು ವಿವರಿಸಿದರು” (ಅಪೊಸ್ತಲರ ಕೃತ್ಯಗಳು 18:26). ಪ್ರಿಸ್ಕಿಲ್ಲಳು ಒಂದು ಸಭೆಗೆ ಸಭಾಪಾಲನೆ ಮಾಡಿದ್ದಾಳೆ ಅಥವಾ ಬಹಿರಂಗವಾಗಿ ಕಲಿಸಿದ್ದಾಳೆ ಅಥವಾ ಒಂದು ಪರಿಶುದ್ಧ ಗುಂಪಿನ ಆತ್ಮಿಕ ನಾಯಕಳಾಗಿದ್ದಳೆಂದು ಸತ್ಯವೇದವು ಎಂದಾದರೂ ಹೇಳಿದೆಯೋ? ಇಲ್ಲ. ನಮಗೆ ತಿಳಿದ ಮಟ್ಟಿಗೆ, ಪ್ರಿಸ್ಕಿಲ್ಲಳು 1 ತಿಮೋಥೆ 2:11-14 ರ ಅಸಮಂಜಸತೆಯ ಸೇವೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಲಿಲ್ಲ.

ರೋಮಾ 16:1 ರಲ್ಲಿ ಪೊಯಿಬೆಯು ಸಭೆಯಲ್ಲಿ ಒಬ್ಬ “ಸಭಾ ಹಿರಿಯಳು” (ಅಥವಾ ಸಭಾ ಸೇವಕಳು) ಎಂದು ಕರೆಯಲ್ಪಟ್ಟಳು ಮತ್ತು ಇದು ಪೌಲನಿಂದ ವಿಶೇಷವಾಗಿ ಶಿಫಾರಸು ಮಾಡಲಾಗಿದೆ. ಆದರೆ ಪ್ರಿಸ್ಕಲ್ಲಳ ವಿಷಯದ ಹಾಗೆ, ಪೊಯಿಬೆಯು ಸಭೆಯಲ್ಲಿ ಪುರುಷರಿಗೆ ಸಭಾಪಾಲಕಳಾಗಿದ್ದಳು ಅಥವಾ ಬೋಧಕಳಾಗಿದ್ದಳೆಂದು ಸೂಚಿಸಲು ಸತ್ಯವೇದದಲ್ಲಿ ಯಾವುದೇ ಆಧಾರವಿಲ್ಲ. “ಬೋಧಿಸಲು ಸಮರ್ಥರಾಗಿರುವವರು” ಇದು ಡೀಕನ್ ರಿಗಲ್ಲದೆ, ಆದರೆ ಸಭಾ ಹಿರಿಯರಿಗೆ ಒಂದು ಅರ್ಹತೆಯಂತೆ ಕೊಡಲ್ಪಟ್ಟಿದೆ (1 ತಿಮೋಥೆ 3:1-13; ತೀತ 1:6-9).

1 ತಿಮೋಥೆ 2:11-14 ರ ರಚನಾವಿನ್ಯಾಸವು ಸ್ತ್ರೀಯರು ಯಾಕೆ ಬಹುಮಟ್ಟಿಗೆ ಸ್ಪಷ್ಟವಾಗಿ ಸಭಾಪಾಲಕರಾಗಿರಲು ಸಾಧ್ಯವಿಲ್ಲವೆಂದು ಕಾರಣವನ್ನು ಕೊಡುತ್ತದೆ. ವಚನ 11-12 ರಲ್ಲಿ ಪೌಲನ ಹೇಳಿಕೆಗೆ “ಕಾರಣವನ್ನು” ಕೊಡಲು, ವಚನ 13 ಯಾಕಂದರೆ ಎಂಬ ಪದದಿಂದ ಆರಂಭವಾಗುತ್ತದೆ. ಸ್ತ್ರೀಯರು ಯಾಕೆ ಉಪದೇಶ ಮಾಡಬಾರದು ಅಥವಾ ಪುರುಷನ ಮೇಲೆ ಯಾಕೆ ಅಧಿಕಾರವನ್ನು ಹೊಂದಬಾರದು? ಯಾಕೆಂದರೆ “ಆದಾಮನು ಮೊದಲು, ನಂತರ ಹವ್ವಳು ಸೃಷ್ಟಿಸಲ್ಪಟ್ಟಳು ಮತ್ತು ಆದಾಮನು ವಂಚನೆಗೆ ಒಳಗಾದವನಲ್ಲ; ವಂಚನೆಗೆ ಒಳಗಾದವಳು ಸ್ತ್ರೀಯಾಗಿದ್ದಳು” (ವಚನ 13-14). ದೇವರು ಮೊದಲು ಅದಾಮನನ್ನು ಉಂಟುಮಾಡಿದನು, ನಂತರ ಆದಾಮನಿಗೆ “ಸಹಾಯಕಿ”ಯಾಗಿರುವಂತೆ ಹವ್ವಳನ್ನು ಉಂಟುಮಾಡಿದನು. ಸೃಷ್ಟಿಯ ನಿಯಮವು ಕುಟುಂಬದಲ್ಲಿ (ಎಫೆಸ 5:22-23) ಮತ್ತು ಸಭೆಯಲ್ಲಿ ಸಾರ್ವತ್ರಿಕ ಅನ್ವಯವನ್ನು ಹೊಂದಿದೆ.

ಸ್ತ್ರೀಯರು ಸಭಾಪಾಲಕರಾಗಿ ಸೇವೆ ಮಾಡದಿರಲು ಅಥವಾ ಪುರುಷರ ಮೇಲೆ ಆತ್ಮಿಕ ಅಧಿಕಾರವನ್ನು ಹೊಂದದಿರುವಂತೆ ಒಂದು ಕಾರಣದ ಹಾಗೆ ಹವ್ವಳು ವಂಚಿಸಲ್ಪಟ್ಟದ್ದು ಸಹ 1 ತಿಮೋಥೆ 2:14ರಲ್ಲಿ ಕೊಟ್ಟಿರುವದು ನಿಜವಾಗಿದೆ. ಸ್ತ್ರೀಯರು ಸುಲಭವಾಗಿ ವಂಚಿಸಲ್ಪಡುವರು ಅಥವಾ ಅವರು ಪುರುಷರಿಗಿಂತ ಹೆಚ್ಚು ವಂಚಿಸಲ್ಪಡುವರು ಎಂದರ್ಥವಲ್ಲ. ಒಂದು ವೇಳೆ ಎಲ್ಲಾ ಸ್ತ್ರೀಯರು ಬಹಳ ಸುಲಭವಾಗಿ ವಂಚಿಸಲ್ಪಡುವದಾದರೆ, ಮಕ್ಕಳಿಗೆ ಉಪದೇಶ ಮಾಡಲು ಅವರನ್ನು ಯಾಕೆ ಅನುಮತಿಸಬೇಕು (ಸುಲಭವಾಗಿ ವಂಚಿಸಲ್ಪಟ್ಟವರು) ಮತ್ತು ಬೇರೆ ಸ್ತ್ರೀಯರು (ಬಹಳ ಸುಲಭವಾಗಿ ವಂಚಿಸಲ್ಪಡಬಹುದು)? ಈ ವಾಕ್ಯಭಾಗವು ಹವ್ವಳು ವಂಚಿಸಲ್ಪಟ್ಟಿರುವ ಕಾರಣದಿಂದ ಸ್ತ್ರೀಯರು ಪುರುಷರಿಗೆ ಉಪದೇಶ ಮಾಡಬಾರದು ಅಥವಾ ಪುರುಷರ ಮೇಲೆ ಆತ್ಮಿಕ ಅಧಿಕಾರವನ್ನು ಹೊಂದಬಾರದೆಂದು ನಿಜವಾಗಿ ಹೇಳುತ್ತದೆ. ಸಭೆಯಲ್ಲಿ ಪ್ರಾಥಮಿಕ ಬೋಧನೆಯ ಅಧಿಕಾರವನ್ನು ಪುರುಷರಿಗೆ ಕೊಡಲು ದೇವರು ಆರಿಸಿಕೊಂಡಿದ್ದಾರೆ.

ಅನೇಕ ಸ್ತ್ರೀಯರು ಅಥಿತಿಸತ್ಕಾರ, ಕರುಣೆ, ಉಪದೇಶ, ಸುವಾರ್ತಾ ಸೇವೆ ಮತ್ತು ಸಹಾಯ ಮಾಡುವ ವರಗಳಲ್ಲಿ ಅತ್ಯುತ್ತಮರಾಗಿದ್ದಾರೆ. ಸ್ಥಳೀಯ ಸಭೆಯ ಹೆಚ್ಚು ಸೇವೆಯು ಸ್ತ್ರೀಯರ ಮೇಲೆ ಆಧಾರವಾಗಿದೆ. ಸಭೆಯಲ್ಲಿರುವ ಸ್ತ್ರೀಯರು ಪುರುಷರ ಮೇಲೆ ಆತ್ಮಿಕ ಉಪದೇಶವನ್ನು ಹೊರತುಪಡಿಸಿ, ಬಹಿರಂಗವಾಗಿ ಪ್ರಾರ್ಥಿಸಲು ಅಥವಾ ಪ್ರವಾದನೆ ಮಾಡಲು ನಿರ್ಬಂಧಿಸಲ್ಪಡಲಿಲ್ಲ (1 ಕೊರಿಂಥ 11:5). ಸ್ತ್ರೀಯರು ಪವಿತ್ರಾತ್ಮನ ವರಗಳನ್ನು ಉಪಯೋಗಿಸದಿರುವಂತೆ ಸತ್ಯವೇದದಲ್ಲಿ ಎಲ್ಲಿಯೂ ನಿರ್ಬಂಧಿಸಲ್ಪಟ್ಟಿಲ್ಲ (1 ಕೊರಿಂಥ 12). ಸ್ತ್ರೀಯುರು, ಪುರುಷರ ಹಾಗೆ, ಪವಿತ್ರಾತ್ಮನ ಫಲಗಳನ್ನು ಕೊಡಲು, ಬೇರೆಯವರಿಗೆ ಸೇವೆಮಾಡಲು (ಗಲಾತ್ಯ 5:22-23) ಮತ್ತು ಕಳೆದು ಹೋದವರಿಗೆ ಸುವಾರ್ತೆಯನ್ನು ಸಾರಲು ಕರೆಯಲ್ಪಟ್ಟಿದ್ದಾರೆ (ಮತ್ತಾಯ 28:18-20; ಅಪೊಸ್ತಲರ ಕೃತ್ಯಗಳು 1:8; 1 ಪೇತ್ರ 3:15).

ಸಭೆಯಲ್ಲಿ ಆತ್ಮಿಕ ಉಪದೇಶದ ಅಧಿಕಾರದ ಸ್ಥಾನದಲ್ಲಿ ದೇವರು ಪುರುಷರನ್ನು ಮಾತ್ರ ನೇಮಿಸಿದ್ದಾರೆ. ಇದು ಪುರುಷರು ಅವಶ್ಯವಾಗಿ ಉತ್ತಮವಾದ ಬೋಧಕರು ಅಥವಾ ಸ್ತ್ರೀಯರು ಕಡಿಮೆ ಬುದ್ಧಿಯುಳ್ಳವರು ಅಥವಾ ಕೆಳದರ್ಜೆಯವರು ಎಂಬುದು ಕಾರಣವಲ್ಲ (ಈ ವಿಷಯವಲ್ಲ). ಇದನ್ನು ಕೇವಲ ಸಭೆಯ ಕಾರ್ಯಭಾರ ಮಾಡಲು ದೇವರು ರಚನೆ ಮಾಡಿದ್ದಾರೆ. ಅವರ ಜೀವಿತ ಮತ್ತು ಮಾತುಗಳಿಂದ ಪುರುಷರು ಆತ್ಮಿಕ ನಾಯಕತ್ವದಲ್ಲಿ ಮಾದರಿಯಾಗಿ ಇಡಲ್ಪಡಲಿಲ್ಲ. ಸ್ತ್ರೀಯರು ಕಡಿಮೆ ಅಧಿಕಾರದ ಪಾತ್ರವನ್ನು ತೆಗೆದುಕೊಳ್ಳಬೇಕು (ತೀತನು 2:3-5). ಸ್ತ್ರೀಯರು ಮಕ್ಕಳಿಗೆ ಉಪದೇಶ ಮಾಡುವದನ್ನು ಸತ್ಯವೇದವು ಸಹ ನಿರ್ಬಂಧಿಸುವದಿಲ್ಲ. ಪುರುಷರ ಮೇಲೆ ಆತ್ಮಿಕ ಅಧಿಕಾರ ನಡೆಸುವದು ಅಥವಾ ಉಪದೇಶ ಮಾಡುವ ಚಟುವಟಿಕೆಯನ್ನು ಮಾತ್ರ ನಿರ್ಬಂಧಿಸಲಾಗಿದೆ. ಇದು ಸ್ತ್ರೀಯರು ಪುರುಷರಿಗೆ ಸಭಾಪಾಲಕರ ಹಾಗೆ ಸೇವೆ ಮಾಡುವದನ್ನು ಪ್ರತಿರೋಧಿಸುತ್ತದೆ. ಇದು ಯಾವುದೇ ಕಾರಣದಿಂದ ಸ್ತ್ರೀಯು ಕಡಿಮೆ ಪ್ರಾಮುಖ್ಯವೆಂದು ಹೇಳಿವದಿಲ್ಲ, ಆದರೆ ಬದಲಾಗಿ ದೇವರ ಯೋಜನೆಯ ಒಪ್ಪಂದದೊಂದಿಗೆ ಮತ್ತು ಅವರಿಗೆ ಆತನ ವರಗಳಿಂದ ಸೇವೆಯ ಕೆಂದ್ರೀಕರಣವನ್ನು ಹೆಚ್ಚಾಗಿ ಕೊಡುತ್ತದೆ.

English



ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ಸ್ತ್ರೀ ಸಭಾಪಾಲಕರು/ಬೊಧಕರು? ಸೇವೆಯಲ್ಲಿರುವ ಸ್ತ್ರೀಯರನ್ನು ಕುರಿತು ಸತ್ಯವೇದವು ಏನು ಹೇಳುತ್ತದೆ?
Facebook icon Twitter icon Pinterest icon Email icon
© Copyright Got Questions Ministries