ದೇವರಿದ್ದಾನೆಯೇ? ದೇವರ ಇರುವಿಕೆಗೆ ಸಾಕ್ಷ್ಯಾಧಾರವಿದೆಯೇ?ಪ್ರಶ್ನೆ: ದೇವರಿದ್ದಾನೆಯೇ? ದೇವರ ಇರುವಿಕೆಗೆ ಸಾಕ್ಷ್ಯಾಧಾರವಿದೆಯೇ?

ಉತ್ತರ:
ದೇವರಿದ್ದಾನೆಯೇ? ಈ ವಿವಾದಕ್ಕೆ ಇಷ್ಟೊಂದು ಗಮನ ನೀಡಲಾಗಿರುವುದು ಬಹಳ ಆಸಕ್ತಿಕರ. ಪ್ರಪಂಚದ 90% ಜನರು ಈಗ ದೇವರ ಅಥವಾ ಯಾವುದೋ ಮಹತ್ತರವಾದ ಶಕ್ತಿಯ ಅಸ್ತಿತ್ವವನ್ನು ನಂಬುತ್ತಾರೆ ಎಂದು ಇತ್ತೀಚಿನ ಸರ್ವೆ ನಮಗೆ ತಿಳಿಸುತ್ತದೆ. ಆದರೂ ಏಕೋ ಏನೋ ದೇವರು ನಿಜಕ್ಕೂ ಇದ್ದಾನೆಂದು ರುಜುವಾತುಪಡಿಸುವುದು, ದೇವರಿದ್ದಾನೆಂದು ನಂಬುವವರ ಜವಾಬ್ದಾರಿಯಾಗಿಬಿಟ್ಟಿದೆ. ಇದು ಅದಲು- ಬದಲು ದಿಶೆಯಲಾಗಿದ್ದಿದ್ದರೆ ಹೆಚ್ಚು ತಾರ್ಕಿಕವಾಗಿರುತ್ತಿತ್ತು.

ಆದರೆ ದೇವರ ಇರುವಿಕೆಯನ್ನು ರುಜುವಾತು ಪಡಿಸಲಾಗಲೀ ಅಥವಾ ನಿರಾಕರಿಸಲಾಗಲೀ ಸಾಧ್ಯವಿಲ್ಲ. ದೇವರಿದ್ದಾನೆ ಎಂಬ ವಾಸ್ತವತೆಯನ್ನು ನಾವು ಶ್ರದ್ಧೆಯಿಂದ ಒಪ್ಪಬೇಕು ಎಂಬುದಾಗಿ ಬೈಬಲ್ ಸಹ ಹೇಳುತ್ತದೆ. “ಮತ್ತು ಶ್ರದ್ಧಾರಹಿತರಾಗಿ ದೇವರನ್ನು ಮೆಚ್ಚಿಸಲು ಅಸಾಧ್ಯ ಏಕೆಂದರೆ ಅವನ ಬಳಿಗೆ ಯಾರೇ ಬಂದರೂ ಅವನಿದ್ದಾನೆ ಮತ್ತು ಅವನನ್ನು ಹೃತ್ಪೂರ್ವಕವಾಗಿ ಬೇಡುವವರನ್ನು ಹರಸುತ್ತಾನೆ ಎಂದು ನಂಬಬೇಕು” (ಹೀಬ್ರೂಸ್ 11:6). ದೇವರು ಹಾಗೆ ಆಶಿಸಿದ್ದರೆ, ಅವನು ಸುಮ್ಮನೆ ಪ್ರತ್ಯಕ್ಷನಾಗಬಹುದಿತ್ತು ಮತ್ತು ಅವನಿದ್ದಾನೆ ಎಂದು ಇಡೀ ಜಗತ್ತಿಗೆ ರುಜುವಾತುಪಡಿಸಬಹುದಿತ್ತು. ಆದರೆ ಅವನು ಹಾಗೆ ಮಾಡಿದ್ದಿದ್ದರೆ, ಆಗ ಶ್ರದ್ಧೆಯ ಅವಶ್ಯಕತೆಯೇ ಇರುತ್ತಿರಲಿಲ್ಲ. “ ಆಗ ಯೇಸುವು ಅವನಿಗೆ ಹೇಳಿದರು, ನೀನು ನನ್ನನ್ನು ನೋಡಿರುವೆಯಾದ್ದರಿಂದ ನಿನಗೆ ನಂಬಿಕೆ ಇದೆ. ಯಾರು ನೋಡದೇ ಇದ್ದರೂ ನಂಬಿದ್ದಾರೋ ಅವರೇ ಧನ್ಯರು" (ಜಾನ್ 20:29).

ಹೀಗೆ ಹೇಳಿದ ಮಾತ್ರಕ್ಕೆ, ದೇವರ ಅಸ್ತಿತ್ವಕ್ಕೆ ರುಜುವಾತು ಇಲ್ಲವೆಂದೇನೂ ಅರ್ಥವಲ್ಲ. ಬೈಬಲ್ ಹೇಳುತ್ತದೆ, “ಸ್ವರ್ಗಗಳು ದೇವರ ಮಹಿಮೆಯನ್ನು ಘೋಷಿಸುತ್ತವೆ; ಆಕಾಶಗಳು ಅವನ ಕೈಗಳ ಕಾರ್ಯವನ್ನು ಸಾರುತ್ತವೆ. ದಿನ ದಿನವೂ ಅವುಗಳು ಮಾತುಗಳ ಧಾರೆ ಹರಿಸುತ್ತವೆ. ನಿಶೆ ನಿಶೆಯೂ ಅವುಗಳು ಜ್ಞಾನವನ್ನು ಪ್ರದರ್ಶಿಸುತ್ತವೆ. ಅವುಗಳ ಧ್ವನಿ ಕೇಳದ ಮಾತು ಅಥವಾ ಭಾಷೆಯಿಲ್ಲ . ಅವುಗಳ ಧ್ವನಿ ಇಡೀ ಭೂಮಿಯೊಳಗೆ ಪ್ರವೇಶಿಸುತ್ತದೆ, ಅವುಗಳ ಮಾತು ಜಗತ್ತಿನ ತುದಿಯನ್ನು ಮುಟ್ಟುತ್ತದೆ.” (ಸಾಮ್ 19:1-4). ತಾರೆಗಳನ್ನು ವೀಕ್ಷಿಸುವಾಗ, ಬ್ರಹ್ಮಾಂಡದ ವಿಸ್ತಾರವನ್ನು ಅರ್ಥ ಮಾಡಿಕೊಳ್ಳುವಾಗ, ಪ್ರಕೃತಿಯ ಅದ್ಭುತಗಳನ್ನು ಗಮನಿಸಿದಾಗ, ಸೂರ್ಯಾಸ್ತದ ಸೌಂದರ್ಯವನ್ನು ನೋಡಿದಾಗ – ಈ ವಿಷಯಗಳೆಲ್ಲವೂ ಒಬ್ಬ ಸೃಷ್ಟಿಕರ್ತ ದೇವನನ್ನು ಸೂಚಿಸುತ್ತವೆ. ಇಷ್ಟು ಸಾಕಾಗದಿದ್ದರೆ, ನಮ್ಮದೇ ಹೃದಯದಲ್ಲಿ ದೇವರ ಅಸ್ತಿತ್ವಕ್ಕೆ ರುಜುವಾತಿದೆ. ಇಕ್ಲೀಸಿಯಾಸ್ಟೀಸ್ 3:11 ನಮಗೆ ತಿಳಿಸಿ, “…ಮನುಷ್ಯರ ಹೃದಯದಲ್ಲಿ ಸಹ ಅವನು ಶಾಶ್ವತತೆಯನ್ನು ಇಟ್ಟಿದ್ದಾನೆ.…”. ಈ ಜೀವನವನ್ನು ಮೀರಿದ ಯಾವುದೋ ಒಂದು ಇದೆ ಅಥವಾ ಈ ಜಗತ್ತನ್ನು ಮೀರಿದ ಯಾರೋ ಇಬ್ಬರಿದ್ದಾರೆ ಎಂಬುದನ್ನು ಗುರುತಿಸುವ ಏನೋ ಒಂದು ಅರಿವು ನಮ್ಮೊಳಗೆ ಆಳದಲ್ಲಿದೆ. ಈ ಅರಿವನ್ನು ನಾವು ಬೌದ್ಧಿಕವಾಗಿ ಅಲ್ಲಗಳೆಯಬಹುದು, ಆಗಲೂ ಸಹ ನಮ್ಮಲಿ ನಮ್ಮ ಮೂಲಕ ದೇವರ ಅಸ್ತಿತ್ವ ಇದ್ದೇ ಇದೆ. ಇವೆಲ್ಲದರ ಹೊರತಾಗಿಯೂ, ಕೆಲವರು ದೇವರ ಅಸ್ತಿತ್ವವನ್ನು ಅಲ್ಲಗಳೆಯುತ್ತಾರೆ ಎಂದು ಬೈಬಲ್ ಎಚ್ಚರಿಸುತ್ತದೆ, “ಮೂರ್ಖನಾದವನು ಮನಸ್ಸಿನಲ್ಲೇ ಹೇಳಿಕೊಳ್ಳುತ್ತಾನೆ, ‘ದೇವರಿಲ್ಲ’ ಎಂದು“. (ಸಾಮ್ 14:1). ಸಂಪುರ್ಣ ಚರಿತ್ರೆಯಲ್ಲಿ, ಎಲ್ಲಾ ಸಂಸ್ಕೃತಿಗಳಲ್ಲಿ, ಎಲ್ಲಾ ನಾಗರೀಕತೆಗಳಲ್ಲಿ, ಎಲ್ಲಾ ಭೂಖಂಡಗಳಲ್ಲಿ 98% ಜನರಿಗೆ ಯಾವುದೋ ಒಂದು ರೀತಿಯ ದೇವರ ಅಸ್ತಿತ್ವದಲ್ಲಿ ಶ್ರದ್ಧೆಯಿದೆ, ಈ ಶ್ರದ್ಧೆಗೆ ಕಾರಣವಾದ ಯಾವುದೋ ಒಂದು (ಯಾರೋ ಒಬ್ಬರು) ಇರಲೇಬೇಕು.

ದೇವರ ಅಸ್ತಿತ್ವದ ಕುರಿತಾಗಿರುವ ಬೈಬಲ್ ಆಧಾರಿತ ವಾದಗಳ ಜೊತೆ ತಾರ್ಕಿಕವಾದ ವಾದಗಳೂ ಇವೆ. ಮೊದಲನೆಯದಾಗಿ, ಮೂಲತತ್ತ್ವಶಾಸ್ತ್ರದ ವಾದವಿದೆ. ಬಹಳ ಜನಪ್ರಿಯವಾದ ಮೂಲತತ್ವಶಾಸ್ತ್ರದ ವಾದವು ದೇವರ ಅಸ್ತಿತ್ವವನ್ನು ರುಜುವಾತುಪಡಿಸಲು ದೇವರು ಎಂಬ ಕಲ್ಪನೆಯನ್ನು ಬಳಸಿಕೊಳ್ಳುತ್ತದೆ. “ಯಾವುದಕ್ಕಿಂತ ಹೆಚ್ಚಿನದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲವೋ ಅದು” ಎಂಬುದಾಗಿ ದೇವರನ್ನು ಕುರಿತ ವ್ಯಾಖ್ಯಾನದಿಂದ ಅದು ಪ್ರಾರಂಭವಾಗುತ್ತದೆ. ನಂತರ ಅಸ್ತಿತ್ವದಲ್ಲಿ ಇರುವುದು, ಅಸ್ತಿತ್ವದಲ್ಲಿ ಇಲ್ಲದಿರುವುದಕ್ಕಿಂತ ಹೆಚ್ಚಿನದು ಎಂಬುದಾಗಿ ವಾದಿಸಲಾಗುತ್ತದೆ, ಆದ್ದರಿಂದ ಅತಿ ಹೆಚ್ಚಿನ ಕಲ್ಪಿತವಾದುದು ಅಸ್ತಿತ್ವದಲ್ಲಿ ಇರಬೇಕು. ದೇವರು ಇರಲಿಲ್ಲವಾದರೆ, ಅತಿ ಹೆಚ್ಚಿನ ಕಲ್ಪಿತವಾದದ್ದು ದೇವರಾಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅದು ದೇವರ ಕುರಿತ ವ್ಯಾಖ್ಯಾನಕ್ಕೇ ವಿರೋಧಾಭಾಸವನ್ನುಂಟು ಮಾಡುತ್ತದೆ. ಮೂಲ ಸಂಕಲ್ಪ ಸಿದ್ಧಾಂತ ಎರಡನೆಯದು. ಮೂಲ ಸಂಕಲ್ಪ ಸಿದ್ಧಾಂತದ ವಾದವೇನೆಂದರೆ ಬ್ರಹ್ಮಾಂಡವು ಇಂತಹ ಅಚ್ಚರಿಯನ್ನುಂಟು ಮಾಡುವ ಸೃಷ್ಟಿ ವಿನ್ಯಾಸವನ್ನು ಪ್ರಸ್ತುತ ಪಡಿಸತ್ತಿರುವ ಹಿನ್ನೆಲೆಯಲ್ಲಿ ಒಬ್ಬ ದೈವೀ ವಿನ್ಯಾಸಕಾರರು ಇರಬೇಕು ಎಂದು. ಉದಾಹರಣೆಗೆ,ಭೂಮಿಯು ಸೂರ್ಯನಿಂದ ಕೇವಲ ಕೆಲವೇ ನೂರು ಮೈಲಿಗಳಷ್ಟ ಸಮೀಪವಾಗಿದ್ದಿದ್ದರೆ ಅಥವಾ ದೂರವಾಗಿದ್ದಿದ್ದರೆ, ಈಗಿನಷ್ಟು ಜೀವನವನ್ನು ಬೆಂಬಲಿಸಲು ಸಮರ್ಥವಾಗಿರುತ್ತಿರಲಿಲ್ಲ. ನಮ್ಮ ವಾತಾವರಣದಲ್ಲಿರುವ ಶಕ್ತಿಗಳು ಶೇಕಡ ಕೆಲವು ಅಂಶದಷ್ಟು ಬದಲಾದರೂ,ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳು ಸಾವನ್ನಪ್ಪುತ್ತವೆ. 10243 ಅಣುಗಳಲ್ಲಿ ಪ್ರೊಟೀನ್ ಅಣುವಾಗುವ ಸಾಧ್ಯತೆಗಳು ಅವಕಾಶದ ಆಧಾರದ ಮೇಲೆ 1 ಅಣುವಿಗೆ ಮಾತ್ರ (ಅಂದರೆ 10ರ ನಂತರ 243 0ಗಳು). ಒಂದು ಏಕೈಕ ಜೀವಕೋಶವು ಮಿಲಿಯನ್ ಗಟ್ಟಳೆ ಪ್ರೊಟೀನ್ ಅಣುಗಳನ್ನು ಒಳಗೊಂಡಿರುತ್ತದೆ.

ದೇವರ ಅಸ್ತಿತ್ವದ ಕುರಿತಾದ ಮೂರನೆಯ ತಾರ್ಕಿಕ ವಾದವನ್ನು ವಿಶ್ವಶಾಸ್ತ್ರಕ್ಕೆ ಸಂಬಂಧಪಟ್ಟ ವಾದ ಎಂದು ಕರೆಯುತ್ತಾರೆ. ಪ್ರತಿಯೊಂದು ಕಾರ್ಯವೂ ಒಂದು ಕಾರಣವನ್ನು ಹೊಂದಿರಬೇಕು. ಈ ಪ್ರಪಂಚ ಮತ್ತು ಅದರಲ್ಲಿರುವ ಎಲ್ಲವೂ ಒಂದು ಕಾರ್ಯ. ಎಲ್ಲವೂ ಅಸ್ತಿತ್ವಕ್ಕೆ ಬರಲು ಕಾರಣವಾದ ಯಾವುದೋ ಒಂದು ಇರಬೇಕು. ಕೊನೆಯದಾಗಿ, ಎಲ್ಲವೂ ಅಸ್ತಿತ್ವಕ್ಕೆ ಬರಲು ಒಂದು ಕಾರಣವಾದ ಯಾವುದೋ “ಕಾರಣವೇ ಇಲ್ಲದ್ದು” ಇರಬೇಕು. ಆ "ಕಾರಣವೇ ಇಲ್ಲದ” ಯಾವುದೋ ಒಂದೇ, ದೇವರು.

ನಾಲ್ಕನೆಯ ವಾದವನ್ನು ನೈತಿಕ ವಾದವೆಂದು ಕರೆಯಲಾಗುತ್ತದೆ. ಚರಿತ್ರೆಯಲ್ಲಿನ ಪ್ರತಿ ಸಂಸ್ಕೃತಿಯೂ ಕೆಲವು ರೀತಿಯ ವಿಧಿನಿಯಮಗಳನ್ನು ಹೊಂದಿದೆ. ಪ್ರತಿಯೊಬ್ಬರೂ ಸರಿ, ತಪ್ಪುಗಳ ಅರಿವನ್ನು ಹೊಂದಿರುತ್ತಾರೆ. ಕೊಲೆ, ಸುಳ್ಳು, ಕಳ್ಳತನ ಮತ್ತು ಅನೈತಿಕತೆಯನ್ನು ಬಹುಮಟ್ಟಿಗೆ ಸಾರ್ವತ್ರಿಕವಾಗಿ ನಿರಾಕರಿಸಲಾಗಿದೆ. ಈ ತಪ್ಪು ಸರಿಗಳ ಅರಿವು ಪವಿತ್ರವಾದ ದೇವರಿಂದಲ್ಲದೆ ಬೇರೆಲ್ಲಿಂದ ಬಂದಿತು?

ಇವೆಲ್ಲವುಗಳ ಹೊರತಾಗಿಯೂ, ಸ್ಪಷ್ಟ ಮತ್ತು ನಿರಾಕರಿಸಲಾರದ ಜ್ಞಾನವನ್ನು ಜನರು ತಿರಸ್ಕರಿಸುತ್ತಾರೆ ಮತ್ತು ಅದರ ಬದಲಿಗೆ ಸುಳ್ಳನ್ನು ನಂಬುತ್ತಾರೆ ಎಂದು ಬೈಬಲ್ ನಮಗೆ ಹೇಳುತ್ತದೆ. ರೋಮನ್ಸ್ 1:25 ಘೋಷಿಸುತ್ತದೆ, “ಅವರು ದೇವರ ಸತ್ಯವನ್ನು ಒಂದು ಸುಳ್ಳಿಗೆ ಬದಲಿಸಿಕೊಂಡರು, ಮತ್ತು ಎಂದೆಂದೂ ಸ್ತುತಿಸಲ್ಪಡುವ - ಸೃಷ್ಟಿಕರ್ತನ ಬದಲಿಗೆ ಸೃಷ್ಟಿಯಾದ ವಸ್ತುಗಳನ್ನು ಪೂಜಿಸಿದರು ಮತ್ತು ಸೇವೆಗೈದರು. ಆಮೇನ್.” ದೇವರನ್ನು ನಂಬದಿರುವುದಕ್ಕೆ ಜನರಿಗೆ ಕ್ಷಮೆಯಿಲ್ಲವೆಂದೂ ಸಹ ಬೈಬಲ್ ಸಾರುತ್ತದೆ, “ ಪ್ರಪಂಚದ ಸೃಷ್ಟಿಯಾದಂದಿನಿಂದ ದೇವರ ಅಗೋಚರ ಗುಣಗಳು – ಅವನ ಶಾಶ್ವತವಾದ ಶಕ್ತಿ – ಮತ್ತು ದೈವೀ ಸ್ವಭಾವ—ಸ್ಪಷ್ಟವಾಗಿ ಕಂಡುಬಂದಿವೆ, ಪ್ರಕಟಗೊಂಡುದರ ಮೂಲಕ ಅರ್ಥವಾಗುವಂತಹುದಾದ್ದರಿಂದ ಜನರಿಗೆ ಕ್ಷಮೆಯಿಲ್ಲ” (ರೋಮನ್ಸ್ 1:20).

ಜನರು ಇದು “ಅವೈಜ್ಞಾನಿಕ” ಅಥವಾ “ ರುಜುವಾತು ಇಲ್ಲದ ಕಾರಣ” ದೇವರಲ್ಲಿ ಶ್ರದ್ಧೆ ಹೊಂದುವುದಿಲ್ಲವಾಗಿ ದಾವೆ ಹೂಡುತ್ತಾರೆ. ನಿಜವಾದ ಕಾರಣವೇನೆಂದರೆ, ಒಮ್ಮೆ ಜನರು ದೇವರಿದ್ದಾನೆಂದು ಒಪ್ಪಿಕೊಂಡರೆ, ಅವರು ದೇವರಿಗೆ ಬದ್ಧರು ಮತ್ತು ಅವನಿಂದ ಕ್ಷಮೆಯ ಅವ್ಶ್ಯಕತೆಯಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. (ರೋಮನ್ಸ್ 3:23; 6:23). ದೇವರಿದ್ದರೆ, ನಮ್ಮ ಕಾರ್ಯಗಳ ಕುರಿತಾಗಿ ಅವನಿಗೆ ಉತ್ತರಿಸಬೇಕಾಗುತ್ತದೆ. ದೇವರಿಲ್ಲದಿದ್ದರೆ, ನಮ್ಮನು ಕುರಿತ ದೇವರ ನಿರ್ಧಾರದ ಚಿಂತೆಯಿಲ್ಲದೆಯೇ ನಾವು ಬಯಸಿದ್ದೆಲ್ಲವನ್ನು ಮಾಡಬಹುದು. ಆದ್ದರಿಂದ ವಿಕಾಸವಾದವನ್ನು ಗಟ್ಟಿಯಾಗಿ ಹಿಡಿದಿರುವ ನಮ್ಮ ಸಮಾಜದಲ್ಲಿನ ಬಹಳ ಜನರು, ಇದನ್ನು ಜನರಿಗೆ ಸೃಷ್ತಿಕರ್ತನಲ್ಲಿನ ನಂಬಿಕೆಗೆ ಪರ್ಯಾಯವನ್ನಾಗಿ ನೀಡುತ್ತಾರೆ. ದೇವರಿದ್ದಾನೆ ಮತ್ತು ಕೊನೆಯದಾಗಿ ಎಲ್ಲರೂ ಅವನು ಇದ್ದಾನೆ ಎಂದು ತಿಳಿದಿರುತ್ತಾರೆ. ಕೆಲವರು ಅವನ ಅಸ್ತಿತ್ವವನ್ನು ಅಲ್ಲಗಳೆಯಲು ಮಾಡುವ ಆಕ್ರಮಣಕಾರೀ ಪ್ರಯತ್ನವೇ ವಾಸ್ತವದಲ್ಲಿ ಅವನ ಅಸ್ತಿತ್ವಕ್ಕೆ ಮಾಡುವ ವಾದ.

ದೇವರ ಅಸ್ತಿತ್ವಕ್ಕೆ ಒಂದು ಕೊನೆಯ ವಾದಕ್ಕೆ ಅನುವು ಮಾಡಿಕೊಡಿ. ದೇವರು ಇದ್ದಾನೆಂದು ನಮಗೆ ಹೇಗೆ ತಿಳಿಯುತ್ತದೆ? ಕ್ರಿಶ್ಚಿಯನ್ನರಾಗಿ , ನಾವು ಅವನೊಂದಿಗೆ ಪ್ರತಿದಿನ ಮಾತನಾಡುತ್ತೇವಾದ್ದರಿಂದ ದೇವರಿದ್ದಾನೆಂದು ನಮಗೆ ತಿಳಿದಿದೆ. ಅವನು ನಮ್ಮೊಂದಿಗೆ ಹಿಂದಿರುಗಿ ಮಾತನಾಡುವುದು ನಮಗೆ ಕೇಳಿಸುವುದಿಲ್ಲ, ಆದರೆ ಅವನ ಇರುವಿಕೆಯನ್ನು ನಾವು ಗ್ರಹಿಸುತ್ತೇವೆ, ನಾವು ಅವನ ನೇತೃತ್ವವನ್ನು ಭಾವಿಸುತ್ತೇವೆ, ನಮಗೆ ಅವನ ಪ್ರೇಮವು ತಿಳಿದಿದೆ, ಅವನ ಕೃಪೆಯನ್ನು ನಾವು ಆಶಿಸುತ್ತೇವೆ. ನಮ್ಮ ಜೀವನದಲ್ಲಿ ದೇವರು ಎಂಬುದನ್ನು ಹೊರತು ಪಡಿಸಿ ಬೇರೆ ವಿವರಣೆಗಳು ಸಾಧ್ಯವಿಲ್ಲದ ವಿಷಯಗಳು ಘಟಿಸಿವೆ. ದೇವರು ಚಮತ್ಕಾರಪೂರ್ಣವಾಗಿ ನಮ್ಮನ್ನು ಕಾಪಾಡಿರುವುದರಿಂದ ಮತ್ತು ನಮ್ಮ ಜೀವನವನ್ನು ಬದಲಾಯಿಸಿರುವುದರಿಂದ ಅವನ ಅಸ್ತಿತ್ವವನ್ನು ಒಪ್ಪಿಕೊಳ್ಳದೇ ಮತ್ತು ಸ್ತುತಿಸದೇ ಬೇರೆ ದಾರಿಯಿಲ್ಲ.ಸರಳವಾಗಿ ಸ್ಪಷ್ಟವಾಗಿರುವುದನ್ನು ಒಪ್ಪಿಕೊಳ್ಳಲು ನಿರಾಕರಿಸುವ ಯಾರನ್ನೇ ಆಗಲಿ ಈ ಯಾವುದೇ ವಾದಗಳು ತಮ್ಮಷ್ಟಕ್ಕೆ ಒಪ್ಪುವಂತೆ ಮಾಡಲಾರವು. ಕೊನೆಯಲ್ಲಿ, ದೇವರ ಅಸ್ತಿತ್ವವನ್ನು ಶ್ರದ್ಡೆಯಿಂದ ಒಪ್ಪಿಕೊಳ್ಳಬೇಕು. (ಹೀಬ್ರೂಸ್ 11:6). ದೇವರಲ್ಲಿ ಶ್ರದ್ಡೆಯನ್ನು ಹೊಂದುವುದು ಕತ್ತಲಲ್ಲಿ ಹಾರಿದ ಕುರುಡು ನೆಗೆತದಂತಲ್ಲ; ಈಗಾಗಲೇ 90%ರಷ್ಟು ನಿಂತಿರುವ ಜನರನ್ನು ಹೊಂದಿರುವ ಚೆನ್ನಾಗಿ ಬೆಳಕಿರುವ ಕೋಣೆಯೊಳಗೆ ಸುರಕ್ಷಿತ ಪಾದಾರ್ಪಣೆ.


ಕನ್ನಡ ಹೋಮ್ ಪೇಜ್ ಗೆ ಹಿಂದಿರುಗಿ


ದೇವರಿದ್ದಾನೆಯೇ? ದೇವರ ಇರುವಿಕೆಗೆ ಸಾಕ್ಷ್ಯಾಧಾರವಿದೆಯೇ?