ಪ್ರಶ್ನೆ
ಕ್ಷಮಾಪಣೆ ದೊರಕಿತೋ? ನಾನು ದೇವರಿಂದ ಕ್ಷಮಾಪಣೆಯನ್ನು ಹೊಂದಿಕೊಳ್ಳುವುದು ಹೇಗೆ?
ಉತ್ತರ
ಅಪೊಸ್ತಲರ ಕೃತ್ಯಗಳು 13:38 ಹೀಗೆ ಪ್ರಕಟಿಸುತ್ತದೆ, “ಆದದರಿಂದ ಸಹೋದರರೇ, ಆತನ ಮೂಲಕವಾಗಿ ಪಾಪಪರಿಹಾರವು ದೊರೆಯುತ್ತದೆಂಬುದು ನಿಮಗೆ ಸಾರೋಣವಾಗುತ್ತದೆಂದು ನಿಮಗೆ ತಿಳಿದಿರಲಿ.”
ಕ್ಷಮಾಪಣೆ ಎಂದರೇನು ಮತ್ತು ನನಗೆ ಅದು ಯಾಕೆ ಬೇಕಾಗಿದೆ?
“ಕ್ಷಮಾಪಣೆ” ಅಂದರೆ ಹಲಗೆಯನ್ನು ಸ್ವಚ್ಚವಾಗಿ ತೊಳೆಯುವುದು, ಮನ್ನಾಮಾಡುವುದು, ಸಾಲವನ್ನು ತೀರಿಸುವುದು. ನಾವು ಯಾರಿಗಾದರು ತಪ್ಪುಮಾಡಿದ್ದರೆ, ಸಂಬಂಧವು ಪುನರ್ ಸ್ಥಾಪಿಸಲ್ಪಡುವುದಕ್ಕಾಗಿ ನಾವು ಅವರಿಗೆ ಕ್ಷಮಾಪಣೆಯನ್ನು ಕೋರುತ್ತೇವೆ. ಕ್ಷಮಾಪಣೆಯನ್ನು ಕೊಡದೆ ಇರುವುದಕ್ಕೆ ಕಾರಣವೆನಂದರೆ ಒಬ್ಬ ವ್ಯಕ್ತಿಯು ಕ್ಷಮೆಹೊಂದಲು ಅರ್ಹನಾಗಿದ್ದಾನೆ. ಕ್ಷಮಿಸಲ್ಪಡಲು ಯಾರೂ ಯೋಗ್ಯರಲ್ಲಾ. ಕ್ಷಮಾಪಣೆಯು ಪ್ರೀತಿ, ಕರುಣೆ ಮತ್ತು ಕೃಪೆಯ ಕ್ರಿಯೆಯಾಗಿದೆ. ಒಬ್ಬ ವ್ಯಕ್ತಿಯು ನಿಮಗೆ ಏನೇ ಮಾಡಿದ್ದರೂ ಸಹ, ಕ್ಷಮಾಪಣೆಯು ಆ ವ್ಯಕ್ತಿಗೆ ವಿರುದ್ಧವಾಗಿ ಏನನ್ನಾದರು ಹಿಡಿದಿರದೆ ಇರಲು ಒಂದು ತೀರ್ಮಾನವಾಗಿದೆ.
ನಮ್ಮೆಲ್ಲರಿಗೂ ದೇವರ ಕ್ಷಮಾಪಣೆಯು ಅಗತ್ಯವಾಗಿದೆ ಎಂದು ಸತ್ಯವೇದವು ನಮಗೆ ಹೇಳುತ್ತದೆ. ನಾವೆಲ್ಲರೂ ಪಾಪಮಾಡಿದ್ದೇವೆ. ಪ್ರಸಂಗಿ 7:20 ಹೀಗೆ ಹೇಳುತ್ತದೆ, “ಪಾಪಮಾಡದೆ ಧರ್ಮವನ್ನೇ ಆಚರಿಸುತ್ತಿರುವ ಸತ್ಪುರುಷನು ಲೋಕದಲ್ಲಿ ಇಲ್ಲವೇ ಇಲ್ಲ.” 1 ಯೋಹಾನ 1:8 ಹೀಗೆ ಹೇಳುತ್ತದೆ, “ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತೇವೆ, ಮತ್ತು ಸತ್ಯವೆಂಬದು ನಮ್ಮಲ್ಲಿಲ್ಲ.” ಎಲ್ಲಾ ಪಾಪವು ಅಂತಿಮವಾಗಿ ದೇವರಿಗೆ ವಿರುದ್ಧವಾಗಿ ಮಾಡುವ ಕೃತ್ಯವಾಗಿದೆ (ಕೀರ್ತನೆಗಳು 51:4). ಇದರ ಪರಿಣಾಮವಾಗಿ, ನಮಗೆ ದೇವರ ಕ್ಷಮಾಪಣೆಯು ಅತ್ಯಗತ್ಯವಾಗಿದೆ. ನಮ್ಮ ಪಾಪಗಳು ಕ್ಷಮಿಸಲ್ಪಡದೆ ಇದ್ದರೆ, ನಮ್ಮ ಪಾಪಗಳ ಪರಿಣಾಮವಾಗಿ ನಿತ್ಯತ್ವದಲ್ಲಿ ಬಾಧೆಪಡುತ್ತಾ ಕಳೆಯುತ್ತೇವೆ (ಮತ್ತಾಯ 25:46; ಯೋಹಾನ 3:36).
ಕ್ಷಮಾಪಣೆ – ನಾನು ಇದನ್ನು ಪಡೆದುಕೊಳ್ಳುವದು ಹೇಗೆ?
ಕೃತ್ಞತೆಗಳು, ದೇವರು ಪ್ರೀತಿ ಮತ್ತು ಕರುಣೆಯುಳ್ಳವನು – ನಮ್ಮ ಪಾಪಗಳನ್ನು ಕ್ಷಮಿಸುವುದಕ್ಕಾಗಿ ಆಸಕ್ತಿಯುಳ್ಳವನಾಗಿದ್ದಾನೆ! 2 ಪೇತ್ರ 3:9 ನಮಗೆ ಹೀಗೆ ಹೇಳುತ್ತದೆ, “…..ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.” ನಮ್ಮನ್ನು ಕ್ಷಮಿಸಲು ದೇವರು ಆಶಿಸುತ್ತಾನೆ, ಆದುದರಿಂದ ಆತನು ನಮ್ಮ ಕ್ಷಮಾಪಣೆಗಾಗಿ ಅನುಗ್ರಹವನ್ನು ಕೊಟ್ಟನು.
ನಮ್ಮ ಪಾಪಗಳಿಗೆ ನ್ಯಾಯದ ದಂಡವೆಂದರೆ ಮರಣವಾಗಿದೆ. ರೋಮಾ 6:23ರ ಮೊದಲ ಅರ್ಧ ಭಾಗವು ಹೀಗೆ ಹೇಳುತ್ತದೆ, “ಪಾಪವು ಕೊಡುವ ಸಂಬಳ ಮರಣ…..” ನಮ್ಮ ಪಾಪಗಳ ನಿಮಿತ್ತ ನಾವು ಸಂಪಾದಿಸಿಕೊಂಡದ್ದು ನಿತ್ಯ ಮರಣವಾಗಿದೆ. ದೇವರು ತನ್ನ ಪರಿಪೂರ್ಣವಾದ ಯೋಜನೆಯಲ್ಲಿ, ಮಾನವನಾಗಿ ಅಂದರೆ ಯೇಸು ಕ್ರಿಸ್ತನಾಗಿ ಬಂದನು (ಯೋಹಾನ 1:1,14). ನಾವು ಹೊಂದಿಕೊಳ್ಳಬೇಕಾದ ಮರಣದ ದಂಡವನ್ನು ಹೊತ್ತುಕೊಂಡು ಯೇಸು ಶಿಲುಬೆಯ ಮೇಲೆ ಸತ್ತನು. 2 ಕೊರಿಂಥ 5:21 ನಮಗೆ ಹೀಗೆ ಬೊಧಿಸುತ್ತದೆ, “ನಾವು ಆತನಲ್ಲಿ ದೇವರಿಗೆ ಸಮರ್ಪಕರಾದ ನೀತಿ ಸ್ವರೂಪಿಗಳಾಗುವಂತೆ ದೇವರು ಪಾಪ ಜ್ಞಾನವಿಲ್ಲದ ಆತನನ್ನು ನಮಗೋಸ್ಕರ ಪಾಪಸ್ವರೂಪಿಯಾಗ ಮಾಡಿದನು.” ನಾವು ಹೊಂದಿಕೊಳ್ಳಬೇಕಾದ ಶಿಕ್ಷೆಯನ್ನು ತೆಗೆದುಕೊಂಡು ಯೇಸು ಶಿಲುಬೆಯ ಮೇಲೆ ಸತ್ತನು! ದೇವರಾಗಿ, ಯೇಸುವಿನ ಮರಣವು ಇಡೀ ಲೋಕದ ಪಾಪಗಳಿಗಾಗಿ ಕ್ಷಮಾಪಣೆಯನ್ನು ಕೊಟ್ಟಿತು. 1 ಯೋಹಾನ 2:2 ಹೀಗೆ ಪ್ರಕಟಿಸುತ್ತದೆ, “ಆತನು ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲದೆ, ಸಮಸ್ತ ಲೋಕದ ಪಾಪಗಳನ್ನು ಸಹ ನಿವಾರಣಮಾಡುತ್ತಾನೆ.” ಪಾಪ ಮತ್ತು ಮರಣದ ಮೇಲೆ ತನ್ನ ಜಯವನ್ನು ಘೋಷಿಸಿ ಯೇಸು ಮರಣದಿಂದ ಎದ್ದು ಬಂದನು (1 ಕೊರಿಂಥ 15:1-28). ದೇವರಿಗೆ ಸ್ತೋತ್ರವಾಗಲಿ, ಯೇಸು ಕ್ರಿಸ್ತನ ಮರಣ ಮತ್ತು ಪುನರುತ್ಥಾನದ ಮೂಲಕ, ರೋಮಾ 6:23ರ ಎರಡನೆಯ ಅರ್ಧ ಭಾಗವು ಸತ್ಯವಾಗಿದೆ, “….ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.”
ನಿಮ್ಮ ಪಾಪಗಳು ಕ್ಷಮಿಸಲ್ಪಡಬೇಕೆಂದು ನೀವು ಬಯಸುವಿರಾ? ನೀವು ಇದರಿಂದ ಬಿಡಿಸಿಕೊಳ್ಳಲು ಆಗುವುದಿಲ್ಲವೆಂದು ನೀವು ಅಪರಾಧದ ಭಾವನೆಯನ್ನು ಹೊಂದಿದ್ದೀರಾ? ಯೇಸು ಕ್ರಿಸ್ತನು ನಿಮ್ಮ ರಕ್ಷಕನೆಂದು ಆತನಲ್ಲಿ ನಂಬಿಕೆಯಿಟ್ಟರೆ, ನಿಮ್ಮ ಪಾಪಗಳಿಗೆ ಕ್ಷಮಾಪಣೆಯು ದೊರಕುತ್ತದೆ. ಎಫೆಸ 1:7 ಹೀಗೆ ಹೇಳುತ್ತದೆ, “ಈತನು ನಮಗೋಸ್ಕರ ತನ್ನ ರಕ್ತವನ್ನು ಸುರಿಸಿದ್ದರಿಂದ ನಮ್ಮ ಅಪರಾಧಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು. ಇದು ದೇವರ ಕೃಪಾತಿಶಯವೇ.” ನಮಗಾಗಿ ಯೇಸು ನಮ್ಮ ಸಾಲವನ್ನು ತೀರಿಸಿದನು, ಇದರಿಂದ ನಾವು ಕ್ಷಮಾಪಣೆ ಹೊಂದಬಹುದು. ನೀವು ಮಾಡಬೇಕಾದುದ್ದೇನಂದರೆ, ನಿಮ್ಮ ಪಾಪಗಳಿಗಾಗಿ ಕ್ರಯವನ್ನು ಕೊಡಲು ಯೇಸು ಸತ್ತನು ಮತ್ತು ಆತನು ನಿಮ್ಮನ್ನು ಕ್ಷಮಿಸುವನು ಎಂದು ಯೇಸುವಿನ ಮೂಲಕ ನಿಮ್ಮನ್ನು ಕ್ಷಮಿಸಬೇಕೆಂದು ದೇವರನ್ನು ಬೇಡಿಕೊಳ್ಳುವುದೇ ಆಗಿದೆ! ಯೋಹಾನ 3:16-17 ಈ ಅದ್ಭುತವಾದ ಸಂದೇಶವನ್ನು ಒಳಗೊಂಡಿದೆ, “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ತೀರ್ಪುಮಾಡುವದಕ್ಕಾಗಿ ಕಳುಹಿಸಲಿಲ್ಲ.”
ಕ್ಷಮಾಪಣೆ – ಇದು ನಿಜವಾಗಿ ಅಷ್ಟೊಂದು ಸುಲಭವೋ?
ಹೌದು, ಇದು ಅಷ್ಟೊಂದು ಸುಲಭವಾಗಿದೆ! ನೀವು ದೇವರಿಂದ ಕ್ಷಮಾಪಣೆಯನ್ನು ಸಂಪಾದಿಸಿಕೊಳ್ಳಲು ಆಗುವುದಿಲ್ಲ. ದೇವರಿಂದ ನಿಮ್ಮ ಕ್ಷಮಾಪಣೆಗಾಗಿ ನೀವು ಕ್ರಯಕೊಡಲು ಆಗುವುದಿಲ್ಲ. ದೇವರ ಕೃಪೆ ಮತ್ತು ಕರುಣೆಯ ಮೂಲಕ ನಂಬಿಕೆಯಿಂದ ಮಾತ್ರ ನೀವು ಅದನ್ನು ಪಡೆದುಕೊಳ್ಳಬಹುದು. ಒಂದು ವೇಳೆ ನೀವು ಯೇಸು ಕ್ರಿಸ್ತನನ್ನು ನಿಮ್ಮ ರಕ್ಷಕನನ್ನಾಗಿ ಅಂಗೀಕರಿಸಿ ದೇವರಿಂದ ಕ್ಷಮಾಪಣೆಯನ್ನು ಬಯಸುವುದಾದರೆ, ನೀವು ಪ್ರಾರ್ಥಿಸಬಹುದಾದ ಒಂದು ಪ್ರಾರ್ಥನೆಯುಂಟು. ಈ ಪ್ರಾರ್ಥನೆ ಅಥವಾ ಬೇರೆ ಪ್ರಾರ್ಥನೆಯನ್ನು ಮಾಡುವುದರಿಂದ ಇದು ನಿಮ್ಮನ್ನು ರಕ್ಷಿಸುವದಿಲ್ಲ. ಇದು ಕೇವಲ ಕ್ರಿಸ್ತನಲ್ಲಿ ನಂಬಿಕೆಯಿಡುವುದರಿಂದ ಮಾತ್ರ ನಿಮ್ಮನ್ನು ಪಾಪದಿಂದ ರಕ್ಷಿಸುತ್ತದೆ. ಆತನಲ್ಲಿಟ್ಟಿರುವ ನಿಮ್ಮ ನಂಬಿಕೆಯನ್ನು ವ್ಯಕ್ತಪಡಿಸಲು ಮತ್ತು ನಿಮಗೆ ರಕ್ಷಣೆಯನ್ನು ಒದಗಿಸಿದಕ್ಕಾಗಿ ಆತನಿಗೆ ಕೃತಜ್ಞತೆ ಸಲ್ಲಿಸಲು ಈ ಪ್ರಾರ್ಥನೆಯು ಸರಳವಾದ ರೀತಿಯಾಗಿದೆ. “ದೇವರೇ, ನಾನು ನಿನಗೆ ವಿರುದ್ಧವಾಗಿ ಪಾಪಮಾಡಿದ್ದೇನೆ ಮತ್ತು ನಾನು ಶಿಕ್ಷೆಗೆ ಅರ್ಹನಾಗಿದ್ದೇನೆಂದು ತಿಳಿದಿದ್ದೇನೆ. ಆದರೆ ನನಗೆ ಆಗಬೇಕಾದ ಶಿಕ್ಷೆಯನ್ನು ಯೇಸು ಕ್ರಿಸ್ತನು ತೆಗೆದುಕೊಂಡನು, ಇದರಿಂದ ಆತನಲ್ಲಿಟ್ಟಿರುವ ನಂಬಿಕೆಯ ಮೂಲಕ ನನಗೆ ಕ್ಷಮಾಪಣೆ ಉಂಟಾಗಬಹುದು. ನಾನು ರಕ್ಷಣೆಗಾಗಿ ನಿನ್ನಲ್ಲಿ ನನ್ನ ಭರವಸೆಯಿಡುತ್ತೇನೆ. ನಿನ್ನ ಅದ್ಬುತವಾದ ಕೃಪೆ ಮತ್ತು ಕ್ಷಮಾಪಣೆಗಾಗಿ – ನಿತ್ಯಜೀವದ ವರಕ್ಕಾಗಿ ನಿನಗೆ ವಂದನೆಗಳು! ಆಮೆನ್!”
ನೀವು ಇಲ್ಲಿ ಓದಿದವುಗಳ ನಿಮಿತ್ತ ಕ್ರಿಸ್ತನಿಗಾಗಿ ತೀರ್ಮಾನ ಮಾಡಿಕೊಂಡಿದ್ದೀರಾ? ಹಾಗಾದರೆ, “ನಾನು ಇಂದು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿರಿ.
English
ಕ್ಷಮಾಪಣೆ ದೊರಕಿತೋ? ನಾನು ದೇವರಿಂದ ಕ್ಷಮಾಪಣೆಯನ್ನು ಹೊಂದಿಕೊಳ್ಳುವುದು ಹೇಗೆ?