settings icon
share icon
ಪ್ರಶ್ನೆ

ಆತ್ಮಹತ್ಯೆಯನ್ನು ಕುರಿತು ಕ್ರೈಸ್ತತ್ವದ ದೃಷ್ಟಿಕೋನವು ಏನಾಗಿದೆ? ಆತ್ಮಹತ್ಯೆಯನ್ನು ಕುರಿತು ಸತ್ಯವೇದವು ಏನು ಹೇಳುತ್ತದೆ?

ಉತ್ತರ


ಆತ್ಮಹತ್ಯೆ ಮಾಡಿಕೊಂಡ ಆರು ನಿರ್ಧಿಷ್ಟ ವ್ಯಕ್ತಿಗಳನ್ನು ಕುರಿತು ಸತ್ಯವೇದವು ಹೇಳುತ್ತದೆ: ಅಭೀಮೆಲೆಕನು (ನ್ಯಾಯಸ್ಥಾಪಕರು 9:54), ಸೌಲನು (1 ಸಮುವೇಲ 31:4), ಸೌಲನ ಆಯುಧ ಹೊರುವವನು (1 ಸಮುವೇಲ 31:4-6), ಅಹೀತೋಫೆಲನು (2 ಸಮುವೇಲ 17:23), ಜಿಮ್ರಿ (1 ಅರಸು 16:18), ಮತ್ತು ಯೂದ (ಮತ್ತಾಯ 27:5).

ಇವರಲ್ಲಿ ಐವರು ಕೆಟ್ಟವರು, ಪಾಪಸ್ವಭಾವದವರು (ಸೌಲನ ಆಯುಧ ಹೊರುವವನ ನಡತೆಯನ್ನು ಕುರಿತು ತೀರ್ಪುಮಾಡಲು ಸಾಕಾದಷ್ಟು ಹೇಳಲ್ಪಟ್ಟಿಲ್ಲ). ಸಂಸೋನನ ಆತ್ಮಹತ್ಯೆಯು ಒಂದು ಘಟನೆಯೆಂದು ಕೆಲವರು ಪರಿಗಣಿಸುತ್ತಾರೆ (ನ್ಯಾಯಸ್ಥಾಪಕರು 16:26-31). ಆದರೆ ಸಂಸೋನನ ಉದ್ದೇಶವು ತನ್ನನ್ನು ಕೊಲೆ ಮಾಡಿಕೊಳ್ಳುವದಾಗಿರಲಿಲ್ಲ, ಫಿಲಿಷ್ಟಿಯರನ್ನು ಕೊಲ್ಲುವದಾಗಿತ್ತು. ಸತ್ಯವೇದವು ಆತ್ಮಹತ್ಯೆಯನ್ನು ಕೊಲೆಗೆ ಸರಿ ಸಮಾನವೆಂದು ನೋಡುತ್ತದೆ, ಇದು ಸ್ವ-ಕೊಲೆಯಾಗಿದೆ. ಒಬ್ಬ ವ್ಯಕ್ತಿಯು ಯಾವಾಗ ಮತ್ತು ಹೇಗೆ ಮರಣ ಹೊಂದಬೇಕೆಂದು ದೇವರೊಬ್ಬನೇ ಮಾತ್ರ ನಿರ್ಣಯಿಸುವಾತನಾಗಿದ್ದಾನೆ. ಸತ್ಯವೇದದ ಪ್ರಕಾರ, ಒಬ್ಬ ವ್ಯಕ್ತಿಯು ಪರಲೋಕದೊಳಗೆ ಪ್ರವೇಶ ಪಡೆಯುತ್ತಾನೋ ಇಲ್ಲವೋ ಎಂದು ಆತ್ಮಹತ್ಯೆಯು ನಿರ್ಣಯ ಮಾಡುವದಿಲ್ಲ. ರಕ್ಷಿಸಲ್ಪಡದ ಒಬ್ಬ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡರೆ, ಅವನು ಏನು ಮಾಡಿಲ್ಲ, ಆದರೆ ಅವನು ತನ್ನ ಪ್ರಯಾಣವನ್ನು ನರಕಕ್ಕೆ “ಕೊನೆ ಮುಟ್ಟಿಸುತ್ತಾನೆ.”

ಹೇಗಾದರೂ, ಆತ್ಮತಹ್ಯೆ ಮಾಡಿಕೊಂಡಿರುವ ಆ ವ್ಯಕ್ತಿಯು ತಾನು ಆತ್ಮತಹ್ಯೆ ಮಾಡಿಕೊಂಡಿದ ನಿಮಿತ್ತವಲ್ಲ ಆದರೆ ಕ್ರಿಸ್ತನ ಮೂಲಕ ದೊರಕಿದ ರಕ್ಷಣೆಯನ್ನು ತಿರಸ್ಕಾರ ಮಾಡಿದರಿಂದ ಅವನು ಅಂತಿಮವಾಗಿ ನರಕದಲ್ಲಿರುತ್ತಾನೆ. ಆತ್ಮತಹ್ಯೆ ಮಾಡಿಕೊಳ್ಳುವ ಒಬ್ಬ ಕ್ರೈಸ್ತನನ್ನು ಕುರಿತು ಸತ್ಯವೇದವು ಏನು ಹೇಳುತ್ತದೆ? ನಾವು ನಿಜವಾಗಿ ಕ್ರಿಸ್ತನಲ್ಲಿ ನಂಬಿಕೆಯಿಟ್ಟ ಕ್ಷಣದಿಂದ ನಾವು ನಿತ್ಯಜೀವಕ್ಕೆ ಖಚಿತರಾಗಿದ್ದೇವೆಂದು ಸತ್ಯವೇದವು ಬೋಧಿಸುತ್ತದೆ (ಯೋಹಾನ 3:16). ಸತ್ಯವೇದದ ಪ್ರಕಾರ, ಕ್ರೈಸ್ತರು ಯಾವುದೇ ಸಂದೇಹವನ್ನು ಮೀರಿ ನಿತ್ಯಜೀವವನ್ನು ಪಡೆದಿದ್ದಾರೆಂದು ತಿಳಿಯಬಹುದು (1 ಯೋಹಾನ 5:13). ಒಬ್ಬ ಕ್ರೈಸ್ತನನ್ನು ದೇವರ ಪ್ರೀತಿಯಿಂದ ಯಾವುದೂ ಬೇರ್ಪಡಿಸಲು ಸಾಧ್ಯವಿಲ್ಲ (ರೋಮಾ 8:38-39).

“ಸೃಷ್ಟಿ ಮಾಡಲ್ಪಟ್ಟ” ಯಾವುದಾದರು ಒಬ್ಬ ಕ್ರೈಸ್ತನನ್ನು ದೇವರ ಪ್ರೀತಿಯಿಂದ ಬೇರ್ಪಡಿಸಲು ಸಾಧ್ಯವಿಲ್ಲದಿರುವಾಗ, ಮತ್ತು ಆತ್ಮತಹ್ಯೆ ಮಾಡಿಕೊಳ್ಳುವ ಕ್ರೈಸ್ತನು “ಸೃಷ್ಟಿ ಮಾಡಲ್ಪಟ್ಟ”ವನಾಗಿದ್ದಾನೆ, ಹಾಗಾದರೆ ದೇವರ ಪ್ರೀತಿಯಿಂದ ಒಬ್ಬ ಕ್ರೈಸ್ತನನ್ನು ಆತ್ಮಹತ್ಯೆಯು ಸಹ ಬೇರ್ಪಡಿಸಲು ಆಗುವದಿಲ್ಲ. ಯೇಸು ನಮ್ಮೆಲ್ಲರ ಪಾಪಗಳಿಗಾಗಿ ಸತ್ತನು, ಮತ್ತು ಒಂದು ವೇಳೆ ಒಬ್ಬ ನಿಜ ಕ್ರೈಸ್ತನು, ಆತ್ಮಿಕ ಆಕ್ರಮಣ ಮತ್ತು ಬಲಹೀನತೆಯ ಸಮಯದಲ್ಲಿ, ಆತ್ಮಹತ್ಯೆ ಮಾಡಿಕೊಂಡರೆ, ಆಗ ಇನ್ನೂ ಪಾಪವಾಗಿರುತ್ತದೆ ಅದು ಕ್ರಿಸ್ತನ ರಕ್ತದಿಂದ ಮುಚ್ಚಲ್ಪಡುತ್ತದೆ. ಆತ್ಮತಹ್ಯೆಯು ಇನ್ನೂ ದೇವರ ಮುಂದೆ ಒಂದು ಗಂಭೀರವಾದ ಪಾಪವಾಗಿದೆ.

ಸತ್ಯವೇದಾನುಸಾರವಾಗಿ, ಆತ್ಮಹತ್ಯೆಯು ಕೊಲೆಯಾಗಿದೆ; ಇದು ಯಾವಾಗಲೂ ತಪ್ಪಾಗಿದೆ. ಒಬ್ಬನು ಕ್ರೈಸ್ತನೆಂದು ಹೇಳಿಕೊಂಡು ಆದರೂ ಆತ್ಮಹತ್ಯೆ ಮಾಡಿಕೊಂಡವರ ನಂಬಿಕೆಯ ನಿಜಸ್ಥಿತಿಯನ್ನು ಕುರಿತು ಗಂಭೀರವಾದ ಸಂದೇಹಗಳನ್ನು ಜಾಗೃತಿಗೊಳಿಸಬೇಕು. ಅವನ/ಅವಳ ಸ್ವಂತ ಜೀವವನ್ನು ತೆಗೆದುಕೊಳ್ಳುವ ಯಾರನ್ನಾದರು, ವಿಶೇಷವಾಗಿ ಒಬ್ಬ ಕ್ರೈಸ್ತನನ್ನು ನ್ಯಾಯವೆಂದು ಹೇಳುವ ಯಾವುದೇ ಸನ್ನಿವೇಶಗಳಿಲ್ಲ. ಕ್ರೈಸ್ತರು ತಮ್ಮ ಜೀವಿತಗಳನ್ನು ದೇವರಿಗಾಗಿ ಜೀವಿಸಲು ಕರೆಯಲ್ಪಟ್ಟಿದ್ದಾರೆ, ಮತ್ತು ಯಾವಾಗ ಸಾಯಬೇಕೆಂಬ ನಿರ್ಣಯವು ಕೇವಲ ದೇವರೊಬ್ಬರಿಗೆ ಮಾತ್ರ ಸೇರಿದ್ದಾಗಿದೆ. ಇದು ಆತ್ಮಹತ್ಯೆಯನ್ನು ವಿವರಿಸದಿದ್ದರೂ, ಪ್ರಾಯಶಃ ಆತ್ಮಹತ್ಯೆ ಮಾಡಿಕೊಳ್ಳುವ ಒಬ್ಬ ಕ್ರೈಸ್ತನಿಗೆ ಏನಾಗುತ್ತದೆ ಎಂಬುದಕ್ಕೆ 1 ಕೊರಿಂಥ 3:15 ಒಂದು ಒಳ್ಳೆಯ ವಿವರಣೆಯಾಗಿರಬಹುದು: “ತಾನಾದರೋ ರಕ್ಷಣೆ ಹೊಂದುವನು, ಆದರೆ ಬೆಂಕಿಯೊಳಗಿಂದ ತಪ್ಪಿಸಿಕೊಂಡವನ ಹಾಗಿರುವನು.”

English



ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ಆತ್ಮಹತ್ಯೆಯನ್ನು ಕುರಿತು ಕ್ರೈಸ್ತತ್ವದ ದೃಷ್ಟಿಕೋನವು ಏನಾಗಿದೆ? ಆತ್ಮಹತ್ಯೆಯನ್ನು ಕುರಿತು ಸತ್ಯವೇದವು ಏನು ಹೇಳುತ್ತದೆ?
Facebook icon Twitter icon Pinterest icon Email icon
© Copyright Got Questions Ministries