ಕ್ರಿಶ್ಚಿಯನ್ ಎಂದರೆ ಏನು?ಪ್ರಶ್ನೆ: ಕ್ರಿಶ್ಚಿಯನ್ ಎಂದರೆ ಏನು?

ಉತ್ತರ:
ವೆಬ್ ಸ್ಟರ್ಸ್ ಪದಕೋಶ ಕ್ರಿಶ್ಚಿಯನ್ ನ್ನು ಹೀಗೆಂದು ವರ್ಣಿಸುತ್ತದೆ “ಕ್ರೈಸ್ತಧರ್ಮೀಯನಾಗಿ ಯೇಸುವಿನಲ್ಲಿ ನಂಬಿಕೆಯನ್ನು ಅಥವಾ ಯೇಸುವಿನ ಬೋಧನೆಯ ಆಧಾರದ ಮೇಲಿನ ಧರ್ಮವನ್ನು ಅನುಸರಿಸುವ ಒಬ್ಬ ವ್ಯಕ್ತಿ”. ಕ್ರೈಸ್ತಧರ್ಮೀಯನೆಂದರೆ ಯಾರು ಎಂದು ಅರ್ಥ ಮಾಡಿಕೊಳ್ಳುವಲ್ಲಿ ಇದು ಒಳ್ಳೆಯ ಪ್ರಾರಂಭದ ಅಂಶವಾದರೂ, ಇತರ ಲೌಕಿಕ ವ್ಯಾಖ್ಯಾನಗಳಂತೆ , ಬೈಬಲ್ ನ ಸತ್ಯದ ಪ್ರಕಾರ ಕ್ರೈಸ್ತಧರ್ಮೀಯನೆಂದರೆ ಯಾರು ಎಂದು ಸರಿಯಾಗಿ ಸಂವಹಿಸುವುದರಲ್ಲಿ ಒಂದು ರೀತಿ ಹಿಂದೆ ಬೀಳುತ್ತದೆ. ಹೊಸ ಒಡಂಬಡಿಕೆಯಲ್ಲಿ ಕ್ರೈಸ್ತಧರ್ಮೀಯ ಎಂಬ ಪದವನ್ನು ಮೂರು ಬಾರಿ ಬಳಸಲಾಗಿದೆ. (ಕಾಯ್ದೆಗಳು 11:26; ಕಾಯ್ದೆಗಳು 26:28; 1 ಪೀಟರ್ 4:16; ಯ್ದೆಗಳು 11:26).

ಯೇಸು ಕ್ರಿಸ್ತನ ಅನುಯಾಯಿಗಳನ್ನು ಎಂಟಿಯೊಕ್(ಕಾಯ್ದೆಗಳು 11:26) ನಲ್ಲಿ ಮೊದಲು “ಕ್ರೈಸ್ತಧರ್ಮೀಯರು” ಎಂದು ಕರೆಯಲಾಯಿತು. ಏಕೆಂದರೆ ಅವರ ನಡತೆ, ಚಟುವಟಿಕೆ, ಮತ್ತು ಮಾತುಗಳು ಕ್ರಿಸ್ತನಂತೆ ಇದ್ದವು. ಇದು ಮೂಲತಃ ಎಂಟಿಯೊಕ್ ನಲ್ಲಿ ರಕ್ಷಿಸಲ್ಪಡದ ಜನರಿಂದ ಕ್ರೈಸ್ತಧರ್ಮೀಯರನ್ನು ತಮಾಷೆಗೀಡುಮಾಡಲು ಒಂದು ರೀತಿಯ ತುಚ್ಛ ಅಡ್ಡ ಹೆಸರಾಗಿ ಉಪಯೋಗಿಸಲ್ಪಟ್ಟಿತು. ನಿಜಾರ್ಥದಲ್ಲಿ ಇದರ ಅರ್ಥ “ಕ್ರಿಸ್ತನ ಪಂಗಡಕ್ಕೆ ಸೇರಿದವರು” ಅಥವಾ “ಕ್ರಿಸ್ತನಿಗೆ ನಿಷ್ಠನಾಗಿರುವವನು ಅಥವಾ ಅವನ ಅನುಯಾಯಿ”, ಇದು ವೆಬ್ ಸ್ಟರ್ಸ್ ಪದಕೋಶದ ವ್ಯಾಖ್ಯಾನವನ್ನು ಬಹಳವಾಗಿ ಹೋಲುತ್ತದೆ.

ದುರದೃಷ್ಟವಶಾತ್ ಕಾಲಕ್ರಮೇಣ, “ಕ್ರೈಸ್ತಧರ್ಮೀಯ” ಪದವು ದೊಡ್ಡ ಪ್ರಮಾಣದಲ್ಲಿ ಅರ್ಥವನ್ನು ಕಳೆದುಕೊಂಡಿದೆ ಮತ್ತು ಯೇಸು ಕ್ರಿಸ್ತನ ನಿಜವಾದ ಅನುಯಾಯಿಯನ್ನು ಬಿಟ್ಟು ಹೆಚ್ಚಾಗಿ ಧರ್ಮನಿಷ್ಠರು ಅಥವಾ ಉನ್ನತ ನೈತಿಕ ಮೌಲ್ಯವನ್ನು ಹೊಂದಿರುವವರಿಗೆ ಬಳಸಲಾಗಿದೆ. ಯೇಸು ಕ್ರಿಸ್ತನನ್ನು ನಂಬದ ಬಹಳಷ್ಟು ಜನರು ತಮ್ಮನ್ನು ತಾವು ಕ್ರೈಸ್ತಧರ್ಮೀಯರು ಎಂದು ಪರಿಗಣಿಸುತ್ತಾರೆ ಏಕೆಂದರೆ ಅವರು ಇಗರ್ಜಿಗೆ ಹೋಗುತ್ತಾರೆ ಅಥವಾ ಅವರು “ಕ್ರೈಸ್ತಧರ್ಮೀಯ” ದೇಶದಲ್ಲಿ ಜೀವಿಸುತ್ತಾರೆ. ಆದರೆ ಇಗರ್ಜಿಗೆ ಹೋಗುವುದರಿಂದ, ನಿಮಗಿಂತ ಕಡಿಮೆ ಅದೃಷ್ಟಶಾಲಿಗಳ ಸೇವೆ ಮಾಡುವುದರಿಂದ, ಅಥವಾ ಒಳ್ಳೆಯ ವ್ಯಕ್ತಿಯಾಗಿರುವುದರಿಂದ ನೀವು ಕ್ರಿಶ್ಚಿಯನ್ ಅಗುವುದಿಲ್ಲ. ಒಬ್ಬ ಸಂಚಾರೀ ಪ್ರಚಾರಕ ಒಮ್ಮೆ ಹೀಗೆ ಹೇಳಿದ್ದಾನೆ, “ಹೇಗೆ ಒಬ್ಬ ಗ್ಯಾರೇಜಿಗೆ ಹೋಗುವುದರಿಂದ ಮೋಟಾರು ಗಾಡಿಯಾಗಲು ಸಾಧ್ಯವಿಲ್ಲವೋ ಹಾಗೇ ಇಗರ್ಜಿಗೆ ಹೋಗುವುದರಿಂದ ಕ್ರೈಸ್ತಧರ್ಮೀಯ ಆಗಲು ಸಾಧ್ಯವಿಲ್ಲ.” ಇಗರ್ಜಿಯ ಸದಸ್ಯನಾಗುವುದು, ಸೇವೆಗೆ ನಿಯಮಿತವಾಗಿ ಹಾಜರಾಗುವುದು, ಮತ್ತು ಇಗರ್ಜಿಯ ಕೆಲಸವನ್ನು ಮಾಡುವುದು ನಿಮ್ಮನ್ನು ಕ್ರಿಶ್ಚಿಯನ್ ಆಗಿ ಮಾಡಲಾರದು.

ನಾವು ಮಾಡುವ ಒಳ್ಳೆಯ ಕೆಲಸಗಳು ನಮ್ಮನ್ನು ದೇವರು ಸ್ವೀಕರಿಸುವಂತೆ ಮಾಡಲಾರವು ಎಂದು ಬೈಬಲ್ ನಮಗೆ ಕಲಿಸುತ್ತದೆ. ಟಿಟಸ್ 3:5 ನಮಗೆ ಹೇಳುತ್ತದೆ “ಅವನು ನಮ್ಮನ್ನು ರಕ್ಷಿಸಿದ್ದಾನೆ, ಏಕೆಂದರೆ ಅವನ ಕರುಣೆಯಿಂದಾಗಿ,ಧಾರ್ಮಿಕ ಕೆಲಸಗಳನ್ನು ಮಾಡಿದ್ದಕ್ಕಲ್ಲ. ಅವನು ನಮ್ಮನ್ನು ಪುನರ್ಜನ್ಮದಿಂದ ತೊಳೆದು ರಕ್ಷಿಸಿದ್ದಾನೆ ಮತ್ತು ಪವಿತ್ರವಾದ ಆತ್ಮದಿಂದ ನವೀಕರಿಸಿದ್ದಾನೆ.” ಆದ್ದರಿಂದ ಕ್ರಿಶ್ಚಿಯನ್ ಎಂದರೆ ದೇವರಿಂದ ಪುನರ್ಜನ್ಮವನ್ನು ಪಡೆದವನು(ಜಾನ್ 3:3; ಜಾನ್ 3:7; 1 ಪೀಟರ್ 1:23) ಮತ್ತು ಯೇಸು ಕ್ರಿಸ್ತನ ಮೇಲೆ ಅವರ ಶ್ರದ್ಧೆ ಮತ್ತು ವಿಶ್ವಾಸವನ್ನು ಇಟ್ಟವರು. ಎಫಿಶಿಯನ್ಸ್ 2:8 ನಮಗೆ ಹೀಗೆ ಹೇಳುತ್ತದೆ “…“…ನೀವು ಕೃಪೆಯ,ಶ್ರದ್ಧೆಯ ಮೂಲಕ ಕಾಪಾಡಲ್ಪಟ್ಟಿದ್ದೀರಿ - ಮತ್ತು ಇದು ನಿಮ್ಮಿಂದಾಗಿ ಅಲ್ಲ, ಇದು ದೇವರ ಉಡುಗೊರೆ -.” ಯಾರು ತಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಡುತ್ತಾರೋ ಮತ್ತು ಯೇಸು ಕ್ರಿಸ್ತನಲ್ಲಿ ಮಾತ್ರ ಶ್ರದ್ಧೆ ಮತ್ತು ವಿಶ್ವಾಸವನ್ನಿಡುತ್ತಾರೋ ಅವರೇ ನಿಜವಾದ ಕ್ರೈಸ್ತಧರ್ಮೀಯರು. ಅವರ ವಿಶ್ವಾಸ ಒಂದು ಧರ್ಮವನ್ನು ಅಥವಾ ನೀತಿ ಸಂಹಿತೆಗಳ ಒಂದು ಗುಂಪನ್ನು ಅಥವಾ ಮಾಡಬೇಕಾದ್ದು ಅಥವಾ ಮಾಡಬಾರದ್ದು ಎಂಬುವುಗಳ ಪಟ್ಟಿಯನ್ನು ಅನುಸರಿಸುವುದರಲ್ಲಾಗಲೀ ಅವರ ವಿಶ್ವಾಸವಿಲ್ಲ.

ಯೇಸು ಕ್ರಿಸ್ತನೆಂಬ ವ್ಯಕ್ತಿಯಲ್ಲಿ ಮತ್ತು ಅವನು ಪಾಪಗಳನ್ನು ಭರಿಸಲು ಶಿಲುಬೆಯ ಮೇಲೆ ಮರಣ ಹೊಂದಿದ ಮತ್ತು ಅವನಲ್ಲಿ ನಂಬಿಕೆಯನ್ನಿರಿಸಿರುವ ಎಲ್ಲರಿಗೂ ನಿತ್ಯಜೀವನವನ್ನು ನೀಡಲು ಹಾಗು ಮರಣದ ಮೇಲೆ ವಿಜಯವನ್ನು ಗಳಿಸಲು ಮೂರನೆಯ ದಿನ ಮತ್ತೆ ಮೇಲೆದ್ದ ಎಂಬ ಸತ್ಯದಲ್ಲಿ ಅವನ ಅಥವಾ ಅವಳ ಶ್ರದ್ಧೆ ಮತ್ತು ವಿಶ್ವಾಸವನ್ನಿರಿಸಿರುವ ವ್ಯಕ್ತಿಯೇ ನಿಜವಾದ ಕ್ರೈಸ್ತಧರ್ಮೀಯ. ಜಾನ್ 1:12 ನಮಗೆ ಹೇಳುತ್ತದೆ: “ಅವನನ್ನು ಸ್ವೀಕರಿಸಿದ ಎಲ್ಲರಿಗೆ, ಅವನ ಹೆಸರಿನಲ್ಲಿ ನಂಬಿಕೆಯಿರುವವರಿಗೆ ಅವನು ದೇವರ ಮಕ್ಕಳಾಗುವ ಅಧಿಕಾರವನ್ನು ಕೊಟ್ಟನು”. ಇಬ್ಬ ನಿಜವಾದ ಕ್ರೈಸ್ತಧರ್ಮೀಯ ನಿಗಕ್ಕೂ ದೇವರ ಮಗು, ದೇವರ ನಿಜವಾದ ಕುಟುಂಬದ ಒಂದು ಭಾಗ ಮತ್ತು ಕ್ರೈಸ್ತನಲ್ಲಿ ಹೊಸಜೀವನ ಕಂಡವರು. ಇತರರಿಗಾಗಿ ಪ್ರೀತಿ ಮತ್ತು ದೇವರ ವಚನದೆಡೆ ವಿಧೇಯತೆ ಒಬ್ಬ ನಿಜವಾದ ಕ್ರೈಸ್ತಧರ್ಮೀಯನ ಗುರುತು.(1 ಜಾನ್ 2:4; 1 ಜಾನ್ 2:10).

ನೀವು ಇಲ್ಲಿ ಏನನ್ನು ಓದಿದ್ದೀರಿ, ಅದರಿಂದಾಗಿ ನೀವು ಯೇಸು ಕ್ರಿಸ್ತನಿಗೋಸ್ಕರ ನಿರ್ಧಾರವನ್ನು ಮಾಡಿದ್ದೀರಾ? ಹಾಗಿದ್ದರೆ, ದಯವಿಟ್ಟು “ನಾನು ಇಂದು ಯೇಸು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿನ ಬಟನ್ ಒತ್ತಿರಿ.


ಕನ್ನಡ ಹೋಮ್ ಪೇಜ್ ಗೆ ಹಿಂದಿರುಗಿ


ಕ್ರಿಶ್ಚಿಯನ್ ಎಂದರೆ ಏನು?