ಪ್ರಶ್ನೆ
ಸತ್ಯವೇದವು ನಿಜವಾಗಿ ದೇವರ ವಾಕ್ಯವಾಗಿದೆಯಾ?
ಉತ್ತರ
ಈ ಪ್ರಶ್ನೆಗೆ ನಮ್ಮ ಉತ್ತರವು ನಾವು ಸತ್ಯವೇದವನ್ನು ಹೇಗೆ ದೃಷ್ಟಿಸುತ್ತೇವೆ ಮತ್ತು ನಮ್ಮ ಜೀವಿತಕ್ಕೆ ಅದರ ಪ್ರಾಮುಖ್ಯತೆಯನ್ನು ನಿರ್ಧರಿಸುವುದು ಮಾತ್ರವಲ್ಲದೆ, ಆದರೆ ಅಂತಿಮವಾಗಿ ಅದು ನಮ್ಮ ಮೇಲೆ ನಿತ್ಯದ ಪ್ರಭಾವವನ್ನು ಹೊಂದಿರುತ್ತದೆ. ಸತ್ಯವೇದವು ನಿಜವಾಗಿ ದೇವರ ವಾಕ್ಯವಾಗಿದ್ದರೆ, ಆಗ ನಾವು ಅದನ್ನು ಪಾಲಿಸಬೇಕು, ಅದನ್ನು ಅಧ್ಯಯನ ಮಾಡಬೇಕು, ಅದಕ್ಕೆ ವಿಧೇಯರಾಗಬೇಕು, ಮತ್ತು ಅದರಲ್ಲಿ ಸಂಪೂರ್ತಿಯಾಗಿ ಭರವಸೆಯಿಡಬೇಕಾಗಿದೆ. ಸತ್ಯವೇದವು ದೇವರ ವಾಕ್ಯವಾಗಿದ್ದರೆ, ಆಗ ಅದನ್ನು ವಿಸರ್ಜಿಸುವುದು ಎಂದರೆ ದೇವರನ್ನು ತಾನೇ ವಿಸರ್ಜಿಸುವುದಾಗಿದೆ.
ದೇವರು ನಮಗೆ ಸತ್ಯವೇದವನ್ನು ಕೊಟ್ಟದರಲ್ಲಿರುವ ಸತ್ಯಾಂಶವೆಂದರೆ ಅದು ನಮಗಾಗಿ ಆತನ ಪ್ರೀತಿಗೆ ಸಾಕ್ಷ್ಯಾಧಾರ ಮತ್ತು ದೃಷ್ಟಾಂತವಾಗಿದೆ. “ಪ್ರಕಟನೆ” ಎಂಬ ಪದದ ಅರ್ಥವು ದೇವರು ಹೇಗಿದ್ದಾನೆ ಮತ್ತು ನಾವು ಆತನೊಂದಿಗೆ ಸರಿಯಾದ ಸಂಬಂಧವನ್ನು ಹೇಗೆ ಹೊಂದಿಕೊಳ್ಳಬಹುದು ಎಂಬುದನ್ನು ಕುರಿತು ಮಾನವ ಕುಲಕ್ಕೆ ದೇವರನ್ನು ತಿಳಿಯಪಡಿಸಿರುವುದಾಗಿದೆ. ದೇವರು ಇವುಗಳನ್ನು ಸತ್ಯವೇದದಲ್ಲಿ ನಮಗಾಗಿ ದೈವೀಕವಾಗಿ ಪ್ರಕಟಪಡಿಸದೆ ಇದ್ದಲ್ಲಿ ನಮಗೆ ಈ ಸಂಗತಿಗಳು ತಿಳಿದಿರುತ್ತಿರಲಿಲ್ಲ. ದೇವರನ್ನು ಕುರಿತ ಪ್ರಕಟನೆಯನ್ನು ಸತ್ಯವೇದದಲ್ಲಿ ಕ್ರಮೇಣವಾಗಿ ಸುಮಾರು 1500 ವರುಷಗಳಲ್ಲಿ ಕೊಡಲ್ಪಟ್ಟರೂ ಸಹ, ಆತನೊಂದಿಗೆ ಸರಿಯಾದ ಸಂಬಂಧವನ್ನು ಹೊಂದಿಕೊಳ್ಳುವುದಕ್ಕಾಗಿ ಮನುಷ್ಯನು ದೇವರನ್ನು ಕುರಿತು ತಿಳಿಯಬೇಕಾದ ಎಲ್ಲಾ ಸಂಗತಿಗಳನ್ನು ಸತ್ಯವೇದವು ಯಾವಾಗಲೂ ಹೊಂದಿತ್ತು. ಸತ್ಯವೇದವು ನಿಜವಾಗಿ ದೇವರ ವಾಕ್ಯವಾಗಿದ್ದರೆ, ಆಗ ಅದು ನಂಬಿಕೆ, ಧಾರ್ಮಿಕ ಸಂಪ್ರದಾಯಗಳು, ಮತ್ತು ನೈತಿಕತೆಗಳಿಗೆ ಅಂತಿಮ ಅಧಿಕಾರವಾಗಿದೆ.
ನಮ್ಮನ್ನೇ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ ಸತ್ಯವೇದವು ನಿಜವಾಗಿ ದೇವರ ವಾಕ್ಯವಾಗಿದೆ ಮತ್ತು ಅದು ಕೇವಲ ಒಳ್ಳೆಯ ಪುಸ್ತಕವಷ್ಟೇ ಅಲ್ಲ ಎಂದು ನಾವು ತಿಳಿದುಕೊಳ್ಳುವುದು ಹೇಗೆ? ಬರೆಯಲ್ಪಟ್ಟ ಬೇರೆ ಎಲ್ಲಾ ಧಾರ್ಮಿಕ ಪುಸ್ತಕಗಳಿಗಿಂತ ಪ್ರತ್ಯೇಕವಾಗಿರುವ ಸತ್ಯವೇದವನ್ನು ಕುರಿತ ಅದ್ವಿತಿಯತೆ ಏನಾಗಿದೆ? ಸತ್ಯವೇದವು ನಿಜವಾಗಿ ದೇವರ ವಾಕ್ಯವಾಗಿದೆ ಎಂಬುದಕ್ಕೆ ಏನಾದರು ಸಾಕ್ಷ್ಯಾಧಾರಗಳಿವೆಯೇ? ಒಂದು ವೇಳೆ ಸತ್ಯವೇದವು ದೇವರ ವಾಕ್ಯ, ದೈವಪ್ರೇರಿತ, ಮತ್ತು ನಂಬಿಕೆ ಹಾಗೂ ಅಭ್ಯಾಸದ ಎಲ್ಲಾ ವಿಷಯಗಳಿಗೆ ಸಂಪೂರ್ತಿಯಾಗಿ ಸಾಕಾಗಿದೆ ಎಂದು ಹೇಳಲು ಅದರ ನ್ಯಾಯಸಮ್ಮತತೆಯನ್ನು ನಿರ್ಧರಿಸಬೇಕಾದರೆ, ಇಂಥ ಪ್ರಶ್ನೆಗಳನ್ನು ಗಂಭೀರವಾಗಿ ಪರಿಶೀಲಿಸಬೇಕಾಗಿದೆ. ಸತ್ಯವೇದವು ನಿಜವಾಗಿ ದೇವರ ವಾಕ್ಯವೆಂದು ಹೇಳುವಲ್ಲಿ ಸಂದೇಹವೇ ಇಲ್ಲ. ಇದನ್ನು ಪೌಲನು ತಿಮೋಥೆಯನಿಗೆ ಹೊಗಳುವುದರಲ್ಲಿ ಸ್ಪಷ್ಟವಾಗಿದೆ: “ಚಿಕ್ಕಂದಿನಿಂದಲೂ ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಯಿತಲ್ಲಾ. ಆ ಗ್ರಂಥಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ. ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದು ಪಾಟಿಗೂ ನೀತಿ ಶಿಕ್ಷೆಗೂ ಉಪಯುಕ್ತವಾಗಿದೆ. ಆದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲ ಸತ್ಕಾರ್ಯಕ್ಕೆ ಸನ್ನದ್ಧನಾಗುವನು.” (2 ತಿಮೋಥೆ 3:15-17).
ಸತ್ಯವೇದವು ನಿಜವಾಗಿ ದೇವರ ವಾಕ್ಯ ಎಂಬುದಕ್ಕೆ ಒಳಗಿನ ಮತ್ತು ಹೊರಗಿನ ಸಾಕ್ಷ್ಯಾಧಾರಗಳಿವೆ. ಅಂತರ್ಯದ ಸಾಕ್ಷ್ಯಾಧಾರಗಳು ಸತ್ಯವೇದದ ಒಳಗಿನವುಗಳಾಗಿವೆ ಇವು ತನ್ನ ದೈವೀಕ ಮೂಲಕ್ಕೆ ಸಾಕ್ಷಿಕೊಡುತ್ತವೆ. ಸತ್ಯವೇದವು ನಿಜವಾಗಿ ದೇವರ ವಾಕ್ಯ ಎಂಬುದಕ್ಕೆ ಅಂತರ್ಯದ ಸಾಕ್ಷ್ಯಾಧಾರಗಳಲ್ಲಿ ಒಂದನ್ನು ಅದರ ಐಕ್ಯತೆಯಲ್ಲಿ ನೋಡುತ್ತೇವೆ. ಇದು ಅರುವತ್ತಾರು ಬಿಡಿಬಿಡಿ ಪುಸ್ತಕಗಳಾಗಿದ್ದು, ಸುಮಾರು 1500 ವರುಷಗಳಲ್ಲಿ, ಅನೇಕ ವಿಧವಾದ ಜೀವಿತದ ಹಿನ್ನಲೆಯಿಂದ ಬಂದ 40ಕ್ಕಿಂತ ಹೆಚ್ಚಿನ ಗ್ರಂಥಕರ್ತರಿಂದ, ಮೂರು ಖಂಡಗಳಲ್ಲಿ, ಮೂರು ಭಾಷೆಗಳಲ್ಲಿ ಬರೆಯಲ್ಪಟ್ಟರೂ ಸಹ, ಸತ್ಯವೇದವು ಯಾವುದೇ ವಿರೋಧವಿಲ್ಲದೆ ಆರಂಭದಿಂದ ಕೊನೆಯವರೆಗೆ ಒಂದೇ ಏಕೀಕೃತ ಪುಸ್ತಕವಾಗಿ ಉಳಿದಿದೆ. ಈ ಐಕ್ಯತೆಯು ಬೇರೆ ಎಲ್ಲಾ ಪುಸ್ತಕಗಳಿಗಿಂತ ಅದ್ವಿತಿಯವಾಗಿದೆ ಮತ್ತು ದೇವರು ದಾಖಲಿಸಬೇಕೆಂದು ಮನುಷ್ಯರಿಗೆ ಸಾಗಿಸಿದ ವಾಕ್ಯಗಳ ವೈವೀಕ ಮೂಲಕ್ಕೆ ಸಾಕ್ಷ್ಯಾಧಾರವಾಗಿದೆ.
ಸತ್ಯವೇದವು ನಿಜವಾಗಿ ದೇವರ ವಾಕ್ಯ ಎಂಬುದಕ್ಕೆ ಮತ್ತೊಂದು ಒಳಗಿನ ಆಧಾರವೆಂದರೆ ಅದರ ಪುಟಗಳಲ್ಲಿ ಒಳಗೊಂಡಿರುವ ಪ್ರವಾದನೆಗಳು. ಸತ್ಯವೇದವು ಕೆಲವು ದೇಶಗಳನ್ನು ಒಳಗೊಂಡು ಇಸ್ರಾಯೆಲ್ ದೇಶ, ಕೆಲವು ಪಟ್ಟಣಗಳು ಮತ್ತು ಮಾನವಕುಲ ಇವುಗಳಿಗೆ ಸಂಬಂಧಪಟ್ಟ ನೂರಾರು ವಿವರವಾದ ಪ್ರವಾದನೆಗಳನ್ನು ಒಳಗೊಂಡಿದೆ. ಆತನಲ್ಲಿ ನಂಬಿಕೆಯಿಡುವ ಎಲ್ಲರ ರಕ್ಷಕನು ಆಗಿರುವ ಮೆಸ್ಸಿಯನ ಬರುವಿಕೆಯನ್ನು ಕುರಿತು ಕೆಲವು ಪ್ರವಾದನೆಗಳಿವೆ. ಬೇರೆ ಧಾರ್ಮಿಕ ಪುಸ್ತಕಗಳಲ್ಲಿ ಕಂಡುಬರುವ ಪ್ರವಾದನೆಗಳಂತೆ ಅಲ್ಲದೆ ಅಥವಾ ನೊಸ್ಟ್ರಡಾಮಸ್ ವ್ಯಕ್ತಿಗಳಂತೆ ಅಲ್ಲದೆ, ಸತ್ಯವೇದಾನುಸಾರ ಪ್ರವಾದನೆಗಳು ಅತ್ಯಂತ ವಿವರವಾಗಿವೆ. ಹಳೆಯ ಒಡಂಬಡಿಕೆಯಲ್ಲಿ ಯೇಸು ಕ್ರಿಸ್ತನನ್ನು ಕುರಿತು ಮೂನ್ನೂರು ಪ್ರವಾದನೆಗಳಿವೆ. ಆತನು ಎಲ್ಲಿ ಹುಟ್ಟುವನು ಮತ್ತು ಆತನ ವಂಶಾವಳಿಯನ್ನು ಮಾತ್ರವಲ್ಲದೆ, ಆದರೆ ಆತನು ಹೇಗೆ ಸಾಯುತ್ತಾನೆ ಮತ್ತು ಆತನು ಹೇಗೆ ತಿರಿಗಿ ಏಳುತ್ತಾನೆ ಎಂದು ಭವಿಷ್ಯ ನುಡಿಯಲಾಯಿತು. ಸತ್ಯವೇದದಲ್ಲಿ ನೆರವೇರಿದ ಪ್ರವಾದನೆಗಳನ್ನು ವಿವರಿಸಲು ದೈವಿಕ ಮೂಲವನ್ನು ಬಿಟ್ಟರೆ, ತಾರ್ಕಿಕ ರೀತಿಗಳಿಲ್ಲ. ಸತ್ಯವೇದದಲ್ಲಿ ಒಳಗೊಂಡಿರುವ ಪ್ರವಾದನೆಗಳ ರೀತಿ ಅಥವಾ ವಿಸ್ತಾರತೆಯು ಬೇರೆ ಯಾವುದೇ ಧಾರ್ಮಿಕ ಪುಸ್ತಕಗಳಲ್ಲಿ ಕಂಡುಬರುವದಿಲ್ಲ. ಸತ್ಯವೇದದ ದೈವಿಕ ಮೂಲಕ್ಕೆ ಮೂರನೆಯ ಅಂತ್ಯರ್ಯದ ಸಾಕ್ಷ್ಯಾಧಾರವೆಂದರೆ ಅದರ ಅದ್ವಿತಿಯ ಅಧಿಕಾರ ಮತ್ತು ಶಕ್ತಿ. ಈ ಸಾಕ್ಷ್ಯಾಧಾರವು ಮೊದಲ ಎರಡಕ್ಕಿಂತ ಹೆಚ್ಚು ಕಾಲ್ಪನಿಕವಾಗಿದೆ, ಸತ್ಯವೇದದ ದೈವಿಕ ಮೂಲಕ್ಕೆ ಶಕ್ತಿಯುತ ಸಾಕ್ಷಿಗೆ ಕಡಿಮೆ ಏನಲ್ಲಾ. ಸತ್ಯವೇದದ ಅಧಿಕಾರವು ಬೇರೆ ಯಾವುದೇ ಪುಸ್ತಗಳಂತೆ ಅಲ್ಲ. ದೇವರ ವಾಕ್ಯದ ಅಸಾಧಾರಣವಾದ ಶಕ್ತಿಯಿಂದ ಅಸಂಖ್ಯಾತ ಆತ್ಮಗಳು ಮಾರ್ಪಟ್ಟಿರುವುದರಲ್ಲಿ ಈ ಅಧಿಕಾರ ಮತ್ತು ಶಕ್ತಿಯನ್ನು ಪರಮಶ್ರೇಷ್ಠವಾಗಿ ನೋಡಬಹುದು. ಮಾಧಕ ಪದಾರ್ಥಗಳ ಚಟಕ್ಕೆ ಒಳಗಾಗಿರುವವರು ಇದರಿಂದ ಗುಣಹೊಂದಿದ್ದಾರೆ, ಇದರಿಂದ ಸಲಿಂಗಕಾಮಿಗಳು ಬಿಡುಗಡೆ ಹೊಂದಿದ್ದಾರೆ, ಇದರಿಂದ ಪರಿತ್ಯಕ್ತರು ಮತ್ತು ಪೂರಾ ಬಳಲಿದವರು ಮಾರ್ಪಾಟು ಹೊಂದಿದ್ದಾರೆ, ಕಠಿಣವಾದ ಅಪರಾಧಿಗಳು ಸುಧಾರಣೆ ಹೊಂದಿದ್ದಾರೆ, ಮತ್ತು ಇದರಿಂದ ದ್ವೇಷವು ಪ್ರೀತಿಗೆ ರೂಪಾಂತರಗೊಂಡಿದೆ. ಸತ್ಯವೇದವು ಕ್ರೀಯಾತ್ಮಕ ಮತ್ತು ರೂಪಾಂತರಗೊಳಿಸುವ ಶಕ್ತಿಯನ್ನು ಹೊಂದಿದೆ, ಯಾಕೆಂದರೆ ಇದು ನಿಜವಾಗಿ ದೇವರ ವಾಕ್ಯವಾಗಿರುವುದರಿಂದ ಮಾತ್ರ ಸಾಧ್ಯವಾಗಿದೆ.
ಸತ್ಯವೇದವು ನಿಜವಾಗಿ ದೇವರ ವಾಕ್ಯವಾಗಿದೆ ಎಂದು ಸೂಚಿಸುವ ಹೊರಗಿನ ಸಾಕ್ಷ್ಯಾಧಾರಗಳು ಸಹ ಇವೆ. ಅವುಗಳಲ್ಲಿ ಒಂದು ಸತ್ಯವೇದದ ಚಾರಿತ್ರಿಕ ಪಟ್ಟಣ. ಯಾಕೆಂದರೆ ಸತ್ಯವೇದವು ಚಾರಿತ್ರಿಕ ಘಟನೆಗಳನ್ನು ವಿವರಿಸುತ್ತದೆ, ಬೇರೆ ಚಾರಿತ್ರಿಕ ದಾಖಲೆಗಳಂತೆ ಅದರ ಸತ್ಯತೆ ಮತ್ತು ನಿಖರತೆಯು ಪರಿಶೀಲನೆಗೆ ಯೋಗ್ಯವಾಗಿವೆ. ಪುರಾತತ್ವ ಸಾಕ್ಷ್ಯಾಧಾರಗಳು ಮತ್ತು ಬೇರೆ ಬರವಣಿಗೆಗಳು ಇವೆರಡರ ಮೂಲಕ, ಸತ್ಯವೇದದ ಚಾರಿತ್ರಿಕ ದಾಖಲೆಗಳು ತಿರಿಗಿ ತಿರಿಗಿ ಸಮಯದಿಂದ ಸಮಯಕ್ಕೆ ನಿಖರವಾಗಿವೆ ಮತ್ತು ಸತ್ಯವಾಗಿವೆ ಎಂದು ರುಜುಪಡಿಸಲಾಗಿದೆ. ಸತ್ಯವೇದಕ್ಕೆ ಆಧಾರವಾಗಿರುವ ಎಲ್ಲಾ ಪುರಾತತ್ವ ಸಾಕ್ಷ್ಯಾಧಾರಗಳು ಮತ್ತು ಹಸ್ತ ಲಿಖಿತ ಸಾಕ್ಷ್ಯಾಧಾರಗಳು ಪುರಾತನ ಲೋಕದಿಂದ ಅತ್ಯುತ್ತಮ-ದಾಖಲೆಯ ಪುಸ್ತಕವನ್ನಾಗಿ ಮಾಡುತ್ತವೆ. ಧಾರ್ಮಿಕ ವಿಷಯಗಳು ಮತ್ತು ತತ್ವಗಳೊಂದಿಗೆ ವ್ಯವಹರಿಸುವಾಗ ಸತ್ಯವೇದವು ನಿಖರವಾಗಿ ಮತ್ತು ಸತ್ಯವಾಗಿ ಚಾರಿತ್ರಿಕವಾಗಿ ಪರಿಶೀಲಿಸಬಹುದಾದ ಘಟನೆಗಳನ್ನು ದಾಖಲಿಸಿವೆ ಎಂಬ ಸತ್ಯಸಂಗತಿಯು ಅದರ ಸತ್ಯತೆಗೆ ಅತಿ ದೊಡ್ಡ ಸೂಚನೆಯಾಗಿದೆ ಮತ್ತು ಅದು ದೇವರ ವಾಕ್ಯವೇ ಆಗಿದೆ ಎಂಬ ಅದರ ಹೇಳಿಕೆಯನ್ನು ರುಜುವಾತುಪಡಿಸಲು ಸಹಾಯಕರವಾಗಿದೆ.
ಸತ್ಯವೇದವು ನಿಜವಾಗಿ ದೇವರ ವಾಕ್ಯವಾಗಿದೆ ಎಂಬುದನ್ನು ಸೂಚಿಸುವ ಮತ್ತೊಂದು ಹೊರಗಿನ ಸಾಕ್ಷ್ಯಾಧಾರವೆಂದರೆ ಅದರ ಗ್ರಂಥಕರ್ತರ ಸಮಗ್ರತೆ. ಈಗಾಗಲೇ ಹೇಳಿದಂತೆ, ದೇವರು ತನ್ನ ವಾಕ್ಯಗಳನ್ನು ದಾಖಲಿಸಲು ಅನೇಕ ಜೀವಿತದ ನಡೆಗಳಿಂದ ಬಂದ ಜನರನ್ನು ಉಪಯೋಗಿಸಿದನು. ಈ ಜನರ ಜೀವಿತಗಳನ್ನು ಅಧ್ಯಯನ ಮಾಡುವುದಾದರೆ, ಈ ಜನರು ಪ್ರಾಮಾಣಿಕರೂ ಯಥಾರ್ಥವಂತರೂ ಆಗಿದ್ದರು. ತಾವು ನಂಬಿದವುಗಳಿಗಾಗಿ ಕೆಲವೊಮ್ಮೆ ಕಡುಯಾತನೆಯ ಸಾವುಗಳಿಂದ ಸಾಯಲು ಸಹ ಸಿದ್ಧರಾಗಿದ್ದರು ಎಂಬ ಸತ್ಯಸಂಗತಿಯು ಸಾಕ್ಷಿಕೊಡುವುದೇನೆಂದರೆ, ಸಾಮಾನ್ಯರಾಗಿದ್ದರೂ ಪ್ರಾಮಾಣಿಕರಾಗಿದ್ದ ಈ ಮನುಷ್ಯರು ದೇವರು ಅವರೊಂದಿಗೆ ಮಾತನಾಡಿದವುಗಳನ್ನು ನಿಜವಾಗಿ ನಂಬಿದ್ದರು. ಹೊಸ ಒಡಂಬಡಿಕೆಯನ್ನು ಬರೆದ ಜನರು ಮತ್ತು ಅನೇಕ ನೂರಾರು ವಿಶ್ವಾಸಿಗಳು (1 ಕೊರಿಂಥ 15:6) ತಮ್ಮ ಸಂದೇಶದ ಸತ್ಯವನ್ನು ತಿಳಿದಿದ್ದರು ಯಾಕೆಂದರೆ ಯೇಸು ಕ್ರಿಸ್ತನು ಮರಣದಿಂದ ಎದ್ದುಬಂದ ನಂತರ ಅವರು ಆತನ್ನನ್ನು ನೋಡಿ ಆತನೊಂದಿಗೆ ಸಮಯವನ್ನು ಕಳೆದಿದ್ದರು. ಎದ್ದುಬಂದ ಕ್ರಿಸ್ತನನ್ನು ನೋಡಿದರಿಂದ ಅವರ ಮೇಲೆ ಅದು ಪ್ರಚಂಡ ಪ್ರಭಾವಬೀರಿತು. ಭಯದಿಂದ ಅಡಗಿಕೊಂಡಿದ್ದ ಇವರು ಅವರಿಗೆ ಪ್ರಕಟವಾದ ದೇವರ ಸಂದೇಶಕ್ಕಾಗಿ ಸಾಯಲು ಸಿದ್ಧರಾಗಿರುವ ಮಟ್ಟಕ್ಕೆ ಬಂದರು. ಸತ್ಯವೇದವು ನಿಜವಾಗಿ ದೇವರ ವಾಕ್ಯವಾಗಿದೆ ಎಂಬ ಸತ್ಯಾಂಶಕ್ಕೆ ಅವರ ಜೀವಿತಗಳು ಮತ್ತು ಮರಣಗಳು ಸಾಕ್ಷಿಕೊಡುತ್ತವೆ.
ಸತ್ಯವೇದವು ನಿಜವಾಗಿ ದೇವರ ವಾಕ್ಯವಾಗಿದೆ ಎಂಬುದಕ್ಕೆ ಅಂತಿಮ ಹೊರಗಿನ ಸಾಕ್ಷ್ಯಾಧಾರವೆಂದರೆ ಸತ್ಯವೇದದ ಅವಿನಾಶಿತ್ವವಾಗಿದೆ. ಇದರ ಪ್ರಾಮುಖ್ಯತೆ ಮತ್ತು ಇದು ದೇವರ ವಾಕ್ಯವೆಂದು ತನ್ನ ಹೇಳಿಕೆಯ ನಿಮಿತ್ತ, ಚರಿತ್ರೆಯಲ್ಲಿ ಬೇರೆ ಯಾವುದೇ ಪುಸ್ತಕಕ್ಕಿಂತ ಹೆಚ್ಚಾಗಿ ಸತ್ಯವೇದವನ್ನು ನಾಶಪಡಿಸಲು ಹೆಚ್ಚಿನ ಅನೈತಿಕ ಆಕ್ರಮಣಗಳು ಮತ್ತು ಪ್ರಯತ್ನಗಳು ನಡೆದಿವೆ. ಆದಿಯ ರೋಮಾ ಅರಸರಾಗಿದ್ದ ಡೈಯೋಕ್ಲೆಟಿಯನ್ ದಿಂದ ಕಮ್ಯೂನಿಷ್ಟ್ ಸರ್ವಾಧಿಕಾರಿಗಳು ಮತ್ತು ಆಧುನಿಕ-ದಿನದ ನಾಸ್ತಿಕರು ಮತ್ತು ನಾಸ್ತಿಕವಾದಿಗಳ ವರೆಗೆ, ಸತ್ಯವೇದವು ತನ್ನ ಎಲ್ಲಾ ಆಕ್ರಮಣಗಾರರಿಂದ ಸಹಿಸಿಕೊಂಡು ಬಹುಕಾಲದವರೆಗೆ ನಿಂತಿದೆ ಮತ್ತು ಇಂದು ಸಹ ಪ್ರಪಂಚದಲ್ಲೇ ಅತಿಹೆಚ್ಚಾಗಿ ಪ್ರಕಾಶಣವಾಗುತ್ತಿರುವ ಪುಸ್ತಕವಾಗಿದೆ. ಅವಧಿಯಾದ್ಯಂತ, ಸಂದೇಹವಾದಿಗಳು ಸತ್ಯವೇದವನ್ನು ಪೌರಾಣಿಕವೆಂದು ಪರಿಗಣಿಸಿದ್ದಾರೆ, ಆದರೆ ಪುರಾತತ್ತ್ವ ಶಾಸ್ತ್ರವು ಇದನ್ನು ಐತಿಹಾಸಿಕವೆಂದು ಖಚಿತಪಡಿಸಿದೆ. ವಿರೋಧಿಗಳು ಇದರ ಬೋಧನೆಗಳನ್ನು ಪ್ರಾಚೀನ ಮತ್ತು ಗತಕಾಲವೆಂದು ಹೇಳಿದ್ದಾರೆ, ಆದರೆ ಅದರ ನೈತಿಕ ಮತ್ತು ನ್ಯಾಯವಾದ ಅಂಶಗಳು ಮತ್ತು ಬೋಧನೆಗಳು ಪ್ರಪಂಚದಾದ್ಯಂತ ಸಮಾಜ ಮತ್ತು ಸಂಸ್ಕೃತಿಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಿವೆ. ಇದರ ಮೇಲೆ ಹುಸಿ-ವಿಜ್ಞಾನ, ಮನೋವಿಜ್ಞಾನ, ಮತ್ತು ರಾಜಕೀಯ ಚಳುವಳಿಗಳಿಂದ ದಾಳಿ ಮುಂದುವರಿದಿದೆ, ಆದರೂ ಇದು ಮೊದಲು ಬರೆಯಲ್ಪಟ್ಟಂತೆಯೇ, ಇಂದಿಗೂ ಸಹ ಸತ್ಯವಾಗಿ ಮತ್ತು ಸಂಬಂಧಪಟ್ಟದ್ದಾಗಿ ಉಳಿದಿದೆ. ಇದು ಕಳೆದ 2000 ವರುಷಗಳಿಂದ ಅಸಂಖ್ಯಾತ ಜೀವಿತಗಳನ್ನು ಮತ್ತು ಸಂಸ್ಕೃತಿಗಳನ್ನು ಮಾರ್ಪಡಿಸಿದ ಪುಸ್ತಕವಾಗಿದೆ. ಇದರ ವಿರೋಧಿಗಳು ಎಷ್ಟೇ ಆಕ್ರಮಿಸಲು, ನಾಶಪಡಿಸಲು ಅಥವಾ ಕಳಂಕ ತರಲು ಪ್ರಯತ್ನಿಸಿದರೂ ಸಹ, ಸತ್ಯವೇದವು ಉಳಿದಿದೆ; ಜೀವಿತಗಳ ಮೇಲೆ ಇದರ ನಿಖರತೆ ಮತ್ತು ಪ್ರಭಾವವು ಸುಸ್ಪಷ್ಟವಾಗಿದೆ. ಕೆಡಿಸಲು, ಆಕ್ರಮಿಸಲು ಮತ್ತು ನಾಶಪಡಿಸಲು ಮಾಡಿದ ಪ್ರತಿಯೊಂದು ಪ್ರಯತ್ನವಿದ್ದರೂ ಸಹ, ನಿಖರತೆಯನ್ನು ಕಾಪಾಡಲಾಗಿದೆ, ಸತ್ಯವೇದವು ನಿಜವಾಗಿ ದೇವರ ವಾಕ್ಯವಾಗಿದೆ ಮತ್ತು ಆತನಿಂದ ಅಸಾಧಾರಣವಾಗಿ ಸಂರಕ್ಷಿಸಲ್ಪಟ್ಟಿದೆ ಎಂಬ ಸಂಗತಿಗೆ ಸ್ಪಷ್ಟವಾದ ಸಾಕ್ಷಿಯಾಗಿದೆ. ಸತ್ಯವೇದವನ್ನು ಹೇಗೆ ಆಕ್ರಮಿಸಿದರೂ, ಇದು ಯಾವಾಗಲೂ ಮಾರ್ಪಡದೆ ಮತ್ತು ಅಪಾಯದಿಂದ ಪಾರಾಗಿ ಹೊರಬರುತ್ತದೆ ಎಂಬುದು ನಮಗೆ ಆಶ್ಚರ್ಯವನ್ನುಂಟುಮಾಡಬಾರದು. ಹೇಗಿದ್ದರೂ, ಯೇಸು ಹೇಳಿದ್ದು, “ಭೂಮ್ಯಾಕಾಶಗಳು ಅಳಿದು ಹೋಗುವವು, ಆದರೆ ನನ್ನ ಮಾತುಗಳು ಅಳಿದು ಹೋಗುವದೇ ಇಲ್ಲ” (ಮಾರ್ಕ 13:31). ಸಾಕ್ಷ್ಯಾಧಾರಗಳನ್ನು ನೋಡಿದ ನಂತರ, ಹೌದು, ಸತ್ಯವೇದವು ನಿಜವಾಗಿ ದೇವರ ವಾಕ್ಯವಾಗಿದೆ ಎಂದು ಒಬ್ಬನು ಸಂದೇಹವಿಲ್ಲದೆ ಹೇಳಬಹುದಾಗಿದೆ.
English
ಸತ್ಯವೇದವು ನಿಜವಾಗಿ ದೇವರ ವಾಕ್ಯವಾಗಿದೆಯಾ?