ಪ್ರಶ್ನೆ
ಯೇಸು ಕ್ರಿಸ್ತನು ಯಾರು?
ಉತ್ತರ
“ದೇವರು ಅಸ್ತಿತ್ವದಲ್ಲಿದ್ದಾನೋ” ಎಂಬ ಪ್ರಶ್ನೆ ಹಾಗೆ ಅಲ್ಲದೆ ಯೇಸು ಕ್ರಿಸ್ತನು ಇದ್ದಾನೋ ಎಂದು ಬಹಳ ಕಡಿಮೆ ಜನರು ಪ್ರಶ್ನಿಸುತ್ತಾರೆ. 2000 ವರುಷಗಳ ಹಿಂದೆ ಭೂಮಿಯ ಮೇಲೆ ಇಸ್ರಾಯೇಲಿನಲ್ಲಿ ಯೇಸು ನಿಜವಾಗಿ ಮನುಷ್ಯನಾಗಿದ್ದನು ಎಂದು ಸರ್ವಸಾಮಾನ್ಯವಾಗಿ ಅಂಗೀಕರಿಸಲಾಗಿದೆ. ಯೇಸುವಿನ ಪೂರ್ತಿ ವ್ಯಕ್ತಿತ್ವದ ವಿಷಯವನ್ನು ವಿಮರ್ಶಿಸಿದಾಗ ಚರ್ಚೆ ಆರಂಭವಾಗುತ್ತದೆ. ಯೇಸು ಪ್ರವಾದಿಯಾಗಿದ್ದನು ಅಥವಾ ಒಳ್ಳೆಯ ಬೊಧಕನು ಅಥವಾ ದೈವೀಕ ಮನುಷ್ಯನೆಂದು ಆದಷ್ಟು ಪ್ರತಿಯೊಂದು ಧರ್ಮವು ಬೋಧಿಸುತ್ತದೆ. ಸಮಸ್ಯೆ ಏನಂದರೆ ಯೇಸು ಅನಂತವಾಗಿ ಪ್ರವಾದಿ, ಒಳ್ಳೆಯ ಬೊಧಕನು ಅಥವಾ ಓರ್ವ ದೈವೀಕ ಮನುಷ್ಯನು ಇವುಗಳಿಗಿಂತ ಹೆಚ್ಚಿನವಾಗಿದ್ದನು ಎಂದು ಸತ್ಯವೇದವು ನಮಗೆ ತಿಳಿಸುತ್ತದೆ.
ಸಿ.ಎಸ್. ಲಿವಿಸ್ ಮಿಯರ್ ಕ್ರಿಶ್ಚಿಯಾನಿಟಿ ಎಂಬ ತನ್ನ ಪುಸ್ತಕದಲ್ಲಿ ಹೀಗೆ ಬರೆಯುತ್ತಾನೆ: “ಆತನನ್ನು [ಯೇಸು ಕ್ರಿಸ್ತನು] ಕುರಿತು ಅನೇಕವೇಳೆ ಜನರು ನಿಜವಾಗಿ ಮೂರ್ಖತನದ ಇಂಥ ಮಾತನ್ನು ಯಾರಾದರು ಹೇಳುವುದರಿಂದ ನಾನು ಇಲ್ಲಿ ತಡೆಯಲು ಪ್ರಯತ್ನಿಸುತ್ತಿದ್ದೇನೆ: ‘ಯೇಸುವನ್ನು ಶ್ರೇಷ್ಠ ನೈತಿಕ ಬೊಧಕನು ಎಂದು ಅಂಗೀಕರಿಸಲು ನಾನು ಸಿದ್ಧನಾಗಿದ್ದೇನೆ, ಆದರೆ ಆತನು ದೇವರೆಂದು ಹಕ್ಕುಸಾಧಿಸುವದನ್ನು ನಾನು ಅಂಗೀಕರಿಸುವದಿಲ್ಲ.’ ಈ ಒಂದು ಸಂಗತಿಯನ್ನು ನಾವು ಹೇಳಬಾರದು. ಓರ್ವ ಮನುಷ್ಯನು ಕೇವಲ ಮನುಷ್ಯನಾಗಿದ್ದನು ಮತ್ತು ಯೇಸು ಹೇಳಿದ ರೀತಿಯ ಸಂಗತಿಗಳನ್ನು ಹೇಳಿದವನು ಶ್ರೇಷ್ಠ ನೈತಿಕ ಬೊಧಕನಾಗುವದಿಲ್ಲ. ಅವನು ಹುಚ್ಚನಾಗಿರಬಹುದು – ತಾನು ಬೇಯಿಸಿದ ಮೊಟ್ಟೆ ಎಂದು ಹೇಳುವ ಮನುಷ್ಯನ ಮಟ್ಟದಲ್ಲಿದ್ದಾನೆ – ಅಥವಾ ನರಕದ ದೆವ್ವನಾಗಿರುತ್ತಾನೆ. ನೀವು ನಿಮ್ಮ ಆಯ್ಕೆಯನ್ನು ಮಾಡಬೇಕಾಗಿದೆ. ಈ ಮನುಷ್ಯನು ದೇವರ ಕುಮಾರನಾಗಿದ್ದನು ಅಥವಾ ಆಗಿದ್ದಾನೆ ಅಥವಾ ಹುಚ್ಚ ಮನುಷ್ಯನು ಅಥವಾ ಹೀನಾಯವಾದವನು. ನೀವು ಆತನು ಮೂರ್ಖನೆಂದು ಬಾಯಿಮುಚ್ಚಬಹುದು, ಆತನ ಮೇಲೆ ಹುಗುಳಿ ದೇವ್ವ ಎಂದು ಕೊಲ್ಲಬಹುದು; ಅಥವಾ ನೀವು ಆತನ ಪಾದಕ್ಕೆ ಅಡ್ಡಬೀದ್ದು ಒಡೆಯನು ಮತ್ತು ದೇವರು ಎಂದು ಕರೆಯಬಹುದು. ಆದರೆ ಆತನು ಶ್ರೇಷ್ಠ ಬೊಧಕನಾಗಿರುವದನ್ನು ಕುರಿತು ಅನುಗ್ರಹ ತೋರುವ ಅವಿವೇಕದಿಂದ ನಾವು ಮುಂಬರದೆ ಇರೋಣ. ಆತನು ನಮಗೆ ಈ ಆಯ್ಕೆಯನ್ನು ನಮಗೆ ತೆರೆದಿಟ್ಟಿಲ್ಲ. ಆತನು ಹಾಗೆ ಉದ್ದೇಶಿಸಿಲ್ಲ.”
ಹಾಗಾದರೆ, ಯೇಸು ಯಾರೆಂದು ಹಕ್ಕುಸಾಧಿಸಿದನು? ಆತನು ಯಾರೆಂದು ಸತ್ಯವೇದವು ಏನು ಹೇಳುತ್ತಿದೆ? ಮೊದಲು, ಯೋಹಾನ 10:30ರಲ್ಲಿರುವ ಯೇಸುವಿನ ಮಾತುಗಳನ್ನು ನೋಡೋಣ, “ನಾನೂ ತಂದೆಯೂ ಒಂದಾಗಿದ್ದೇವೆ.” ಮೊದಲ ಸಾರಿ ನೋಡಿದಾಗ, ದೇವರೆಂದು ಹಕ್ಕುಸಾಧಿಸಿದಂತೆ ಕಾಣುವದಿಲ್ಲ. ಹಾಗಾದರೆ, ಆತನ ಹೇಳಿಕೆಗೆ ಯೆಹೂದ್ಯರ ಪ್ರತಿಕ್ರಿಯೆಯನ್ನು ನೋಡಿರಿ, “….ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳುವದರ….” (ಯೋಹಾನ 10:33). ತಾನು ದೇವರೆಂದು ಹಕ್ಕುಸಾಧಿಸುವ ಯೇಸುವಿನ ಹೇಳಿಕೆಯನ್ನು ಯೆಹೂದ್ಯರು ಅರ್ಥಮಾಡಿಕೊಂಡಿದ್ದರು. ಈ ಮುಂದಿನ ವಚನಗಳಲ್ಲಿ, “ನಾನು ದೇವರೆಂದು ಹಕ್ಕುಸಾಧಿಸಲಿಲ್ಲ” ಎಂದು ಹೇಳುವುದರ ಮೂಲಕ ಯೇಸು ಎಂದಿಗೂ ಯೆಹೂದ್ಯರನ್ನು ತಿದ್ದಲಿಲ್ಲ. “ನಾನೂ ತಂದೆಯೂ ಒಂದಾಗಿದ್ದೇವೆ.” (ಯೋಹಾನ 10:30) ಎಂದು ಪ್ರಕಟಿಸುವುದರ ಮೂಲಕ ಯೇಸು ನಿಜವಾಗಿ ತಾನು ದೇವರು ಎಂದು ಹೇಳುತ್ತಿದ್ದನು. ಯೋಹಾನ 8:58 ಮತ್ತೊಂದು ಉದಾಹರಣೆಯಾಗಿದೆ: “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಅಬ್ರಹಾಮನು ಹುಟ್ಟುವದಕ್ಕಿಂತ ಮುಂಚಿನಿಂದಲೂ ನಾನು ಇದ್ದೇನೆ!” ತಿರಿಗಿ ಪ್ರತ್ಯುತ್ತರದಲ್ಲಿ, ಯೆಹೂದ್ಯರು ಕಲ್ಲುಗಳನ್ನು ತೆಗೆದುಕೊಂಡು ಯೇಸುವನ್ನು ಹೊಡೆಯಲು ಪ್ರಯತ್ನಿಸಿದರು (ಯೋಹಾನ 8:59). ಯೇಸು ತನ್ನ ವ್ಯಕ್ತಿತ್ವವನ್ನು “ನಾನೇ” ಎಂದು ಪ್ರಕಟಿಸಿದನು, ಇದು ದೇವರ ಹಳೆಯ ಒಡಂಬಡಿಕೆಯ ಹೆಸರಿನ ನೇರ ಅನ್ವಯವಾಗಿದೆ (ವಿಮೋಚನ 3:14). ದೇವರೆಂದು ಹಕ್ಕುಸಾಧಿಸುವದು ದೇವದೂಷಣೆ ಎಂದು ನಂಬಿದ್ದನ್ನು ಒಂದು ವೇಳೆ ಆತನು ಹೇಳದೆ ಇದ್ದಿದ್ದರೆ, ಯೆಹೂದ್ಯರು ಯಾಕೆ ಯೇಸುವಿನ ಮೇಲೆ ಪುಃನ ಕಲ್ಲು ಎಸೆಯಲು ಬಯಸಿದರು?
ಯೋಹಾನ 1:1 ಹೀಗೆ ಹೇಳುತ್ತದೆ, “ಆ ವಾಕ್ಯವೇ ದೇವರಾಗಿತ್ತು.” ಯೋಹಾನ 1:14 ಹೀಗೆ ಹೇಳುತ್ತದೆ, “ಆ ವಾಕ್ಯವೆಂಬವನು ನರಾವತಾರ ಎತ್ತಿದನು” ಶರೀರಧಾರೆಯಲ್ಲಿ ಯೇಸು ದೇವರಾಗಿದ್ದನು ಎಂದು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಶಿಷ್ಯನಾದ ತೋಮನು ಯೇಸುವಿಗೆ ಹೀಗಂದನು, “ನನ್ನ ಸ್ವಾಮಿ, ನನ್ನ ದೇವರು” (ಯೋಹಾನ 20:28). ಯೇಸು ಅವನನ್ನು ತಿದ್ದಲಿಲ್ಲ. ಅಪೊಸ್ತಲನಾದ ಪೌಲನು ಆತನನ್ನು ಹೀಗೆ ವಿವರಿಸುತ್ತಾನೆ, “ಮಹಾದೇವರ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ….“ (ತೀತ 2:13). ಅಪೊಸ್ತಲನಾದ ಪೇತ್ರನು ಸಹ ಅದನ್ನೇ ಹೇಳುತ್ತಾನೆ, “….ನಮ್ಮ ದೇವರ ಮತ್ತು ರಕ್ಷಕನಾದ ಯೇಸು ಕ್ರಿಸ್ತನ” (2 ಪೇತ್ರ 1:1). ಯೇಸುವಿನ ಪೂರ್ಣ ವ್ಯಕ್ತಿತ್ವಕ್ಕೆ ತಂದೆಯಾದ ದೇವರು ಸಹ ಸಾಕ್ಷಿಯಾಗಿದ್ದಾನೆ, “ಆದರೆ ಆತನು ಮಗನನ್ನು ಕುರಿತು ಹೀಗೆ ಹೇಳುತ್ತಾನೆ, “ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವದು; ನ್ಯಾಯದಂಡವೇ ನಿನ್ನ ರಾಜದಂಡವಾಗಿದೆ.”
ಕ್ರಿಸ್ತನನ್ನು ಕುರಿತು ಹಳೆಯ ಒಡಂಬಡಿಕೆಯ ಪ್ರವಾದನೆಗಳು ಆತನ ದೇವತ್ವವನ್ನು ಹೇಳುತ್ತವೆ, “ಒಂದು ಮಗು ನಮಗಾಗಿ ಹುಟ್ಟದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬವು ಅವನ ಹೆಸರು” (ಯೆಶಾಯ 9:6).
ಹಾಗಾದರೆ, ಸಿ.ಎಸ್. ಲಿವಿಸ್ ಹೀಗೆ ವಾದಿಸಿದರು, ಯೇಸುವನ್ನು ಒಳ್ಳೆಯ ಬೊಧಕನೆಂದು ನಂಬುವದೊಂದೆ ಆಯ್ಕೆಯಲ್ಲ. ಯೇಸು ಸ್ಪಷ್ಟವಾಗಿ ಮತ್ತು ನಿರಾಕರಣೆಯಿಲ್ಲದೆ ದೇವರೆಂದು ಹಕ್ಕುಸಾಧಿಸಿದನು. ಆತನು ದೇವರಲ್ಲವಾಗಿದ್ದರೆ, ಆಗ ಆತನು ಸುಳ್ಳುಗಾರನು, ಪ್ರವಾದಿಯಲ್ಲ, ಒಳ್ಳೆಯ ಬೊಧಕನಲ್ಲ, ಅಥವಾ ದೈವೀಕ ಮನುಷ್ಯನಲ್ಲ. ಯೇಸುವಿನ ಮಾತುಗಳನ್ನು ವಿವರಿಸುವ ಪ್ರಯತ್ನದಲ್ಲಿ, ಆಧುನಿಕ “ವಿದ್ವಾಂಸರು” ಆತನನ್ನು “ನಿಜವಾದ ಚಾರಿತ್ರಿಕ ಯೇಸು” ಎಂದು ಹೇಳುವವರು, ಆತನನ್ನು ಕುರಿತು ಸತ್ಯವೇದವು ಹೇಳುವ ಗುಣಲಕ್ಷಣಗಳನ್ನು ಹೇಳಲಿಲ್ಲ. ಯೇಸು ಹೇಳಿದ್ದು ಅಥವಾ ಹೇಳದೆ ಇದ್ದದನ್ನು ಕುರಿತು ದೇವರ ವಾಕ್ಯದೊಂದಿಗೆ ವಾದಿಸಲು ನಾವು ಯಾರಾಗಿದ್ದೇವೆ? ಎರಡು ಸಾವಿರ ವರುಷಗಳ ಹಿಂದೆ ಯೇಸು ಹೇಳಿದ್ದು ಅಥವಾ ಹೇಳದೆ ಇರುವದನ್ನು ಕುರಿತು ಆತನೊಂದಿಗೆ ಜೀವಿಸಿ, ಸೇವೆ ಮಾಡಿ, ಮತ್ತು ಯೇಸುವಿನಿಂದ ಸ್ವತ ಕಲಿತವರಿಗಿಂತ ಉತ್ತಮವಾದ ಅಂತರ್ಯದ ದೃಷ್ಟಿಯನ್ನು “ವಿದ್ವಾಂಸರು” ಹೊಂದಿಕೊಳ್ಳಲು ಹೇಗೆ ಸಾಧ್ಯ (ಯೋಹಾನ 14:26)?
ಯೇಸುವಿನ ನಿಜವಾದ ವ್ಯಕ್ತಿತ್ವವನ್ನು ಕುರಿತಾದ ಪ್ರಶ್ನೆಯು ಯಾಕೆ ಬಹುಪ್ರಾಮುಖ್ಯವಾಗಿದೆ? ಯೇಸು ದೇವರೋ ಅಥವಾ ಅಲ್ಲವೋ ಎಂಬುದು ಯಾಕೆ ಪ್ರಾಮುಖ್ಯವಾದ ವಿಷಯವಾಗಿದೆ? ಯೇಸು ದೇವರಾಗಿರಬೇಕು ಎಂಬುದಕ್ಕೆ ಬಹುಪ್ರಾಮುಖ್ಯವಾದ ಕಾರಣವೆಂದರೆ, ಆತನು ದೇವರಲ್ಲವಾಗಿದ್ದರೆ, ಇಡೀ ಲೋಕದ ಪಾಪಗಳ ದಂಡವನ್ನು ತೆರಲು ಆತನ ಮರಣವು ಸಾಧ್ಯವಾಗುತ್ತಿರಲಿಲ್ಲ (1 ಯೋಹಾನ 2:2). ದೇವರಿಂದ ಮಾತ್ರ ಇಂಥ ಅನಂತ ದಂಡವನ್ನು ತೆರಲು ಸಾಧ್ಯ (ರೋಮಾ 5:8; 2 ಕೊರಿಂಥ 5:21). ಆತನು ನಮ್ಮ ಸಾಲವನ್ನು ತೀರಿಸಲು ಸಾಧ್ಯವಾದದರಿಂದ ಯೇಸು ದೇವರೇ ಆಗಿರಬೇಕು. ಯೇಸು ಮನುಷ್ಯನಾಗಿರಬೇಕಾಯಿತು ಯಾಕೆಂದರೆ ಆತನು ಸಾಯಲು ಸಾಧ್ಯವಾಯಿತು. ಯೇಸು ಕ್ರಿಸ್ತನಲ್ಲಿನ ನಂಬಿಕೆಯ ಮೂಲಕ ಮಾತ್ರ ರಕ್ಷಣೆಯು ದೊರಕುತ್ತದೆ. ಯೇಸುವಿನ ದೇವತ್ವದ ನಿಮಿತ್ತವೇ ರಕ್ಷಣೆಗೆ ಆತನೊಬ್ಬನೇ ಮಾರ್ಗವಾಗಿದ್ದಾನೆ. ಯೇಸುವಿನ ದೇವತ್ವದ ನಿಮಿತ್ತವೇ ಆತನು ಹೀಗೆ ಹೇಳಿದನು, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ” (ಯೋಹಾನ 14:6).
English
ಯೇಸು ಕ್ರಿಸ್ತನು ಯಾರು?