ಪ್ರಶ್ನೆ
ನಿತ್ಯಜೀವ ದೊರಕಿತೋ?
ಉತ್ತರ
ಸತ್ಯವೇದವು ನಿತ್ಯಜೀವಕ್ಕೆ ಸ್ಪಷ್ಟವಾದ ಮಾರ್ಗವನ್ನು ತೋರಿಸುತ್ತದೆ. ಮೊದಲನೆಯದಾಗಿ, ನಾವು ದೇವರಿಗೆ ವಿರುದ್ಧವಾಗಿ ಪಾಪಮಾಡಿದ್ದೇವೆಂದು ನಾವು ತಿಳಿದುಕೊಳ್ಳಬೇಕಾಗಿದೆ, “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ” (ರೋಮಾ 3:23). ನಾವೆಲ್ಲರೂ ದೇವರಿಗೆ ಮೆಚ್ಚದೆ ಇರುವ ಕಾರ್ಯಗಳನ್ನು ಮಾಡಿದ್ದೇವೆ, ಇದು ನಮ್ಮನ್ನು ಶಿಕ್ಷೆಗೆ ಯೋಗ್ಯರನ್ನಾಗಿ ಮಾಡುತ್ತದೆ. ನಮ್ಮ ಎಲ್ಲಾ ಪಾಪಗಳು ಅಂತ್ಯವಾಗಿ ನಿತ್ಯನಾದ ದೇವರಿಗೆ ವಿರುದ್ಧವಾಗಿರುವುದರಿಂದ, ಕೇವಲ ನಿತ್ಯ ಶಿಕ್ಷೆಯು ಸಾಕಾಗಿರುತ್ತದೆ. “ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ” (ರೋಮಾ 6:23).
ಆದರೂ, ಪಾಪವಿಲ್ಲದ ಯೇಸು ಕ್ರಿಸ್ತನು (1 ಪೇತ್ರ 2:22), ನಿತ್ಯನಾದ ದೇವರ ಕುಮಾರನು ಮನುಷ್ಯನಾದನು (ಯೋಹಾನ 1:1.14) ಮತ್ತು ನಮ್ಮ ದಂಡವನ್ನು ತೆರಲು ಸತ್ತನು. “ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ” (ರೋಮಾ 5:8). ನಾವು ಅನುಭವಿಸಬೇಕಾದ ಶಿಕ್ಷೆಯನ್ನು ತೆಗೆದುಕೊಂಡು (2 ಕೊರಿಂಥ 5:21), ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಸತ್ತನು (ಯೋಹಾನ 19:31-42). ಪಾಪ ಮತ್ತು ಮರಣದ ಮೇಲೆ ತನ್ನ ಜಯವನ್ನು ಸಾಧಿಸುವುದರ ಮೂಲಕ ಮೂರು ದಿನಗಳ ನಂತರ ಆತನು ಮರಣದಿಂದ ಎದ್ದನು (1 ಕೊರಿಂಥ 15:1-4). “ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ತನ್ನ ಮಹಾ ಕರುಣಾನುಸಾರವಾಗಿ ನಮ್ಮನ್ನು ತಿರಿಗಿ ಜೀವಿಸುವಂತೆ ಮಾಡಿದನು” (1 ಪೇತ್ರ 1:3).
ನಂಬಕೆಯ ಮೂಲಕ, ನಮ್ಮ ರಕ್ಷಣೆಗಾಗಿ, ಕ್ರಿಸ್ತನು - ಆತನು ಯಾರಾಗಿದ್ದಾನೆ, ಆತನು ಏನು ಮಾಡಿದನು, ಮತ್ತು ಯಾಕೆ ಮಾಡಿದನು ಎಂಬ ಸಂಗತಿಗಳ ಬಗ್ಗೆ ನಮ್ಮ ಮನಸ್ಥಿತಿಯನ್ನು ನಾವು ಬದಲಾಯಿಸಿಕೊಳ್ಳಬೇಕಾಗಿದೆ (ಅಪೊಸ್ತಲರ ಕೃತ್ಯಗಳು 3:19). ನಾವು ನಮ್ಮ ನಂಬಿಕೆಯನ್ನು ಆತನಲ್ಲಿಟ್ಟು, ನಮ್ಮ ಪಾಪಗಳಿಗಾಗಿ ಕ್ರಯಕೊಡಲು ಆತನ ಶಿಲುಬೆಯ ಮರಣದ ಮೇಲೆ ಭರವಸೆಯಿಡುವುದಾದರೆ, ನಾವು ಕ್ಷಮಿಸಲ್ಪಡುತ್ತೇವೆ ಮತ್ತು ಪರಲೋಕದಲ್ಲಿರುವ ನಿತ್ಯಜೀವದ ವಾಗ್ಧಾನವನ್ನು ಹೊಂದಿಕೊಳ್ಳುತ್ತೇವೆ. “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು” (ಯೋಹಾನ 3:16). “ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವದು ಎಂಬದೇ” (ರೋಮಾ 10:9). ಶಿಲುಬೆಯ ಮೇಲೆ ಮುಗಿಸಿದ ಕ್ರಿಸ್ತನ ಕಾರ್ಯದಲ್ಲಿ ಇಟ್ಟ ನಂಬಿಕೆಯೇ ನಿತ್ಯಜೀವಕ್ಕೆ ನಿಜವಾದ ಒಂದೇ ಮಾರ್ಗವಾಗಿದೆ! ““ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ವರವೇ. ಅದು ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ” (ಎಫೆಸ 2:8-9).
ಒಂದು ವೇಳೆ ನೀವು ಯೇಸು ಕ್ರಿಸ್ತನನ್ನು ನಿಮ್ಮ ರಕ್ಷಕನನ್ನಾಗಿ ಅಂಗೀಕರಿಸಲು ಬಯಸುವುದಾದರೆ, ಇಲ್ಲಿ ಸರಳವಾದ ಪ್ರಾರ್ಥನೆಯುಂಟು. ನೆನಪಿಡಿ, ಈ ಪ್ರಾರ್ಥನೆಯನ್ನು ಅಥವಾ ಬೇರೆ ಪ್ರಾರ್ಥನೆಯನ್ನು ಮಾಡುವುದರಿಂದ ಇದು ನಿಮ್ಮನ್ನು ರಕ್ಷಿಸುವದಿಲ್ಲ. ಇದು ಕೇವಲ ಕ್ರಿಸ್ತನಲ್ಲಿ ನಂಬಿಕೆಯಿಡುವುದರಿಂದ ಮಾತ್ರ ನಿಮ್ಮನ್ನು ಪಾಪದಿಂದ ರಕ್ಷಿಸುತ್ತದೆ. ಆತನಲ್ಲಿಟ್ಟಿರುವ ನಿಮ್ಮ ನಂಬಿಕೆಯನ್ನು ವ್ಯಕ್ತಪಡಿಸಲು ಮತ್ತು ನಿಮಗೆ ರಕ್ಷಣೆಯನ್ನು ಒದಗಿಸಿದಕ್ಕಾಗಿ ಆತನಿಗೆ ಕೃತಜ್ಞತೆ ಸಲ್ಲಿಸಲು ಈ ಪ್ರಾರ್ಥನೆಯು ಒಂದು ಸರಳವಾದ ರೀತಿಯಾಗಿದೆ. “ದೇವರೇ, ನಾನು ನಿನಗೆ ವಿರುದ್ಧವಾಗಿ ಪಾಪಮಾಡಿದ್ದೇನೆ ಮತ್ತು ನಾನು ಶಿಕ್ಷೆಗೆ ಅರ್ಹನಾಗಿದ್ದೇನೆಂದು ತಿಳಿದಿದ್ದೇನೆ. ಆದರೆ ನನಗೆ ಆಗಬೇಕಾದ ಶಿಕ್ಷೆಯನ್ನು ಯೇಸು ಕ್ರಿಸ್ತನು ತೆಗೆದುಕೊಂಡನು, ಇದರಿಂದ ಆತನಲ್ಲಿಟ್ಟಿರುವ ನಂಬಿಕೆಯ ಮೂಲಕ ನನಗೆ ಕ್ಷಮಾಪಣೆ ಉಂಟಾಗಬಹುದು. ನಾನು ರಕ್ಷಣೆಗಾಗಿ ನಿನ್ನಲ್ಲಿ ನನ್ನ ಭರವಸೆಯಿಡುತ್ತೇನೆ. ನಿನ್ನ ಅದ್ಬುತವಾದ ಕೃಪೆ ಮತ್ತು ಕ್ಷಮಾಪಣೆಗಾಗಿ – ನಿತ್ಯಜೀವದ ವರಕ್ಕಾಗಿ ನಿನಗೆ ವಂದನೆಗಳು! ಆಮೆನ್!”
ನೀವು ಇಲ್ಲಿ ಓದಿದವುಗಳ ನಿಮಿತ್ತ ಕ್ರಿಸ್ತನಿಗಾಗಿ ತೀರ್ಮಾನ ಮಾಡಿಕೊಂಡಿದ್ದೀರಾ? ಹಾಗಾದರೆ, “ನಾನು ಇಂದು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿರಿ.
English
ನಿತ್ಯಜೀವ ದೊರಕಿತೋ?