settings icon
share icon
ಪ್ರಶ್ನೆ

ದೇವರು ಇದ್ದಾನೋ? ದೇವರ ಅಸ್ತಿತ್ವಕ್ಕೆ ಸಾಕ್ಷ್ಯಾಧಾರವಿದೆಯಾ?

ಉತ್ತರ


ದೇವರ ಅಸ್ತಿತ್ವವನ್ನು ರುಜುಪಡಿಸಲು ಅಥವಾ ತಪ್ಪೆಂದು ಸಾಧಿಸಲು ಆಗುವದಿಲ್ಲ. ದೇವರು ಇದ್ದಾನೆ ಎಂಬ ಸಂಗತಿಯನ್ನು ನಾವು ನಂಬಿಕೆಯಿಂದ ಅಂಗೀಕರಿಸಬೇಕು ಎಂದು ಸತ್ಯವೇದವು ಹೇಳುತ್ತದೆ, “ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ” ( ಇಬ್ರಿಯ 11:6). ಒಂದು ವೇಳೆ ಹಾಗೆ ಆಶಿಸಿರುವುದಾದರೆ, ಆತನು ಇದ್ದಾನೆ ಎಂದು ಆತನು ಸುಮ್ಮನೆ ಪ್ರತ್ಯಕ್ಷನಾಗಿ ಇಡೀ ಲೋಕಕ್ಕೆ ರುಜುಪಡಿಸಬಹುದಾಗಿತ್ತು. ಆದರೆ ಆತನು ಹಾಗೆ ಮಾಡಿದ್ದರೆ, ಆಗ ನಂಬಿಕೆಯ ಅಗತ್ಯವಿರುತ್ತಿರಲಿಲ್ಲ. ಆಗ ಯೇಸು ಅವನಿಗೆ, “ನೀನು ನನ್ನನ್ನು ನೋಡಿದ್ದರಿಂದ ನಂಬಿದ್ದೀ; ನೋಡದೆ ನಂಬಿದವರು ಧನ್ಯರು ಎಂದು ಹೇಳಿದನು” (ಯೋಹಾನ 20:29).

ಹೇಗಾದರೂ, ದೇವರು ಇದ್ದಾನೆ ಎಂಬುದಕ್ಕೆ ಸಾಕ್ಷ್ಯಾಧಾರವಿಲ್ಲ ಎಂಬುದಾಗಿ ಇದರ ಅರ್ಥವಲ್ಲ. ಸತ್ಯವೇದವು ಹೀಗೆ ಹೇಳುತ್ತದೆ, “ಆಕಾಶವು ದೇವರ ಪ್ರಭಾವವನ್ನು ಪ್ರಚುರ ಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ. ದಿನವು ದಿನಕ್ಕೆ ಪ್ರಕಟಿಸುತ್ತಿರುವದು; ರಾತ್ರಿಯು ರಾತ್ರಿಗೆ ಅರುಹುತ್ತಿರುವುದು. ಶಬ್ಧವಿಲ್ಲ, ಮಾತಿಲ್ಲ, ಅವುಗಳ ಸ್ವರ ಕೇಳಿಸುವದಿಲ್ಲ ಆದರೂ ಅವುಗಳ ಪ್ರಭುತ್ವವು ಭೂಮಿಯಲ್ಲೆಲ್ಲಾ ಪ್ರಸರಿಸಿದೆ; ಅವುಗಳ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿರುತ್ತವೆ” (ಕೀರ್ತನೆ 19:1-4). ನಕ್ಷತ್ರಗಳನ್ನು ನೋಡಿ, ಜಗತ್ತಿನ ವಿಸ್ತಾರತೆಯನ್ನು ಅರ್ಥಮಾಡಿಕೊಂಡು, ಪ್ರಕೃತಿಯ ಅದ್ಭುತಗಳನ್ನು ಗಮನಿಸಿ, ಸೂರ್ಯಾಸ್ತದ ಸೌಂಧರ್ಯವನ್ನು ನೋಡುವುದಾದರೆ – ಈ ಎಲ್ಲಾ ಕಾರ್ಯಗಳು ಸೃಷ್ಟಿಕರ್ತನಾದ ದೇವರನ್ನು ಸೂಚಿಸುತ್ತವೆ. ಇವು ಸಾಕಾಗದಿದ್ದರೆ, ನಮ್ಮ ಸ್ವಂತ ಹೃದಯದಲ್ಲಿ ಸಹ ದೇವರ ಸಾಕ್ಷ್ಯಾಧಾರವಿದೆ. ಪ್ರಸಂಗಿ 3:11 ನಮಗೆ ಹೀಗೆ ಹೇಳುತ್ತದೆ, “ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ.” ಈ ಜೀವಿತಕ್ಕಿಂತ ಮಿಗಿಲಾಗಿ ಬೇರೆ ಏನೋ ಇದೆ ಮತ್ತು ಈ ಲೋಕಕ್ಕೆ ಮಿಗಿಲಾಗಿ ಯಾರೋ ಒಬ್ಬರು ಇದ್ದಾರೆ ಎಂಬುದಕ್ಕೆ ನಮ್ಮ ಅಂತರ್ಯದಲ್ಲಿ ಅಂಗೀಕಾರವಿದೆ. ನಾವು ಈ ತಿಳುವಳಿಕೆಯನ್ನು ಬುದ್ಧಿಯಿಂದ ನಿರಾಕರಿಸಬಹುದು, ಆದರೆ ನಮ್ಮಲ್ಲಿ ಮತ್ತು ನಮ್ಮ ಸುತ್ತಲೂ ದೇವರ ಪ್ರಸನ್ನತೆ ಇನ್ನೂ ಸ್ಪಷ್ಟವಾಗಿದೆ. ಇದಕ್ಕೆ ಹೊರತಾಗಿ, ಕೆಲವರು ಇನ್ನೂ ದೇವರ ಅಸ್ತಿತ್ವವನ್ನು ನಿರಾಕರಿಸುವರೆಂದು ಸತ್ಯವೇದವು ಎಚ್ಚರಿಸುತ್ತದೆ: “ದುರ್ಮತಿಗಳು – ದೇವರಿಲ್ಲವೆಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ” (ಕೀರ್ತನೆ 14:1). ಚರಿತ್ರೆಯಾದ್ಯಂತ, ಎಲ್ಲಾ ಸಂಸ್ಕೃತಿಗಳಲ್ಲಿ, ಎಲ್ಲಾ ನಾಗರಿಕತೆಯಲ್ಲಿ, ಮತ್ತು ಎಲ್ಲಾ ಖಂಡಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ದೇವರ ಅಸ್ತಿತ್ವವನ್ನು ಹೆಚ್ಚಿನಷ್ಟು ಜನರು ನಂಬುವುದರಿಂದ, ಈ ನಂಬಿಕೆಗೆ ಕಾರಣವಾಗಿರುವ ಏನಾದರು (ಅಥವಾ ಯಾರಾದರೊಬ್ಬರು) ಇರಲೇ ಬೇಕಾಗಿದೆ.

ದೇವರ ಅಸ್ತಿತ್ವವನ್ನು ಕುರಿತು ಇರುವ ಸತ್ಯವೇದಾನುಸಾರದ ವಾದಗಳಿಗಿಂತ ಹೆಚ್ಚಾಗಿ, ತಾರ್ಕಿಕ ವಾದಗಳಿವೆ. ಮೊದಲನೆಯದಾಗಿ, ಮೂಲತತ್ವದ ವಿಚಾರ ವಾದವಿದೆ. ಬಹು ಪ್ರಸಿದ್ಧವಾದ ಮೂಲತತ್ವ ವಿವಾದವು ದೇವರ ಅಸ್ತಿತ್ವವನ್ನು ರುಜುಪಡಿಸಲು ದೇವರ ವಿಷಯವನ್ನು ಉಪಯೋಗಿಸುತ್ತದೆ. ಇದು ದೇವರ ನಿರೂಪಣೆಯಿಂದ ಹೀಗೆ ಆರಂಭವಾಗುತ್ತದೆ, “ಬೇರೆ ಯಾವುದೇ ಶ್ರೇಷ್ಠರು ಸಹ ಈತನನ್ನು ಗರ್ಭತಾಳಲು ಆಗದ ಓರ್ವ ಜೀವಿಯಾಗಿದ್ದಾನೆ.” ಅಸ್ತಿತ್ವದಲ್ಲಿ ಇರದೆ ಇರುವದಕ್ಕಿಂತ ಅಸ್ತಿತ್ವದಲ್ಲಿರುವದು ಹೆಚ್ಚಿನದಾಗಿದೆ ಎಂದು ವಾದ ಮಾಡಲಾಗುತ್ತದೆ, ಆದುದರಿಂದ ಅತಿ ಹೆಚ್ಚಿನ ಸಂಭಾವ್ಯ ಜೀವಿ ಎಂದರೆ ಅದು ಅಸ್ತಿತ್ವದಲ್ಲಿರಬೇಕು. ದೇವರು ಅಸ್ತಿತ್ವದಲ್ಲಿ ಇಲ್ಲದೆ ಇದ್ದಿದ್ದರೆ, ಆಗ ದೇವರು ಅತಿ ಶ್ರೇಷ್ಠ ಸಂಭಾವ್ಯ ಜೀವಿಯಾಗಿರುತ್ತಿರಲಿಲ್ಲ, ಮತ್ತು ಇದು ದೇವರು ಎಂಬ ನಿರೂಪಣೆಯೊಂದಿಗೆ ವಿರುದ್ಧವಾಗಿರುತ್ತಿತ್ತು.

ಎರಡನೆಯ ವಾದವೆಂದರೆ ಮೂಲ ಸಂಕಲ್ಪ ವಾದವಾಗಿದೆ. ಜಗತ್ತು ವಿಸ್ಮಯಕರವಾದ ರೂಪವನ್ನು ಪ್ರದರ್ಶಿಸುವುದರಿಂದ, ದೈವೀಕ ಚಿತ್ರಗಾರನು ಇರಲೇ ಬೇಕು ಎಂದು ಮೂಲ ಸಂಕಲ್ಪ ವಾದವು ಹೇಳುತ್ತದೆ. ಉದಾಹರಣೆಗೆ, ಭೂಮಿಯು ಸೂರ್ಯನಿಂದ ಸ್ವಲ್ಪ ಹತ್ತಿರ ಅಥವಾ ದೂರವಿದ್ದಿದ್ದರೆ, ಈಗ ಇರುವ ಜೀವಿಗಳಿಗೆ ಹೆಚ್ಚು ಸಹಾಯಕರವಾಗಿರಲು ಸಾಮರ್ಥ್ಯ ಹೊಂದಿರುತ್ತಿರಲಿಲ್ಲ. ಒಂದು ವೇಳೆ ನಮ್ಮ ವಾತಾವರಣದಲ್ಲಿರುವ ಅಂಶಗಳು ಸ್ವಲ್ಪ ಶೇಕಡದಷ್ಟು ವ್ಯತ್ಯಾಸವಾಗಿದ್ದರೆ, ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯು ಸಾಯುತ್ತವೆ. ಆಕಸ್ಮಿಕವಾಗಿ ರೂಪಿಸಲ್ಪಡುವ ಪ್ರೋಟಿನ್ ನ ಒಂದು ಕಣದ ಚೂರುಗಳು 1 ರಲ್ಲಿ 10243 (ಅಂದರೆ 10 ರ ಪಕ್ಕದಲ್ಲಿ 243 ಸೊನ್ನೆಗಳು) ಆಗಿದೆ. ಒಂದು ಕಣವು ದಶಲಕ್ಷಗಳಷ್ಟು ಪ್ರೋಟಿನ್ ಕಣಗಳನ್ನು ಒಳಗೊಂಡಿದೆ.

ದೇವರ ಅಸ್ತಿತ್ವಕ್ಕೆ ಮೂರನೆಯ ತಾರ್ಕಿಕ ವಾದವನ್ನು ವಿಶ್ವವಿಜ್ಞಾನ ವಾದ ಎಂದು ಕರೆಯುತ್ತಾರೆ. ಪ್ರತಿಯೊಂದು ಪರಿಣಾಮಕ್ಕೆ ಕಾರಣವಿರಬೇಕು. ಈ ಜಗತ್ತು ಮತ್ತು ಅದರಲ್ಲಿರುವ ಎಲ್ಲವೂ ಒಂದು ಪರಿಣಾಮವಾಗಿದೆ. ಎಲ್ಲವೂ ಅಸ್ತಿತ್ವಕ್ಕೆ ಬರುವಂತೆ ಮಾಡಿದ ಏನೋ ಒಂದು ಇರಲೇ ಬೇಕಾಗಿದೆ. ಅಂತಿಮವಾಗಿ, ಎಲ್ಲವೂ ಅಸ್ತಿತ್ವಕ್ಕೆ ಬರಲು ಎಲ್ಲವೂ ಉಂಟುಮಾಡುವ ಸಲುವಾಗಿ “ಸೃಷ್ಟಿ ಮಾಡಲ್ಪಡದೆ ಇರುವ” ಏನಾದರು ಇರಲೇ ಬೇಕಾಗಿದೆ. ಆ “ಸೃಷ್ಟಿ ಮಾಡಲ್ಪಡದೆ ಇರುವಾತನು” ದೇವರೇ ಆಗಿದ್ದಾನೆ.

ನಾಲ್ಕನೆಯ ವಾದವು ನೈತಿಕ ವಾದ ಎಂದು ತಿಳಿಯಲ್ಪಟ್ಟಿದೆ. ಚರಿತ್ರೆಯಾದ್ಯಂತ ಪ್ರತಿಯೊಂದು ಸಂಸ್ಕೃತಿಯು ಒಂದು ವಿಧವಾದ ಕಾನೂನನ್ನು ಹೊಂದಿತ್ತು. ಪ್ರತಿಯೊಬ್ಬರೂ ಸರಿ ಮತ್ತು ತಪ್ಪು ಎಂಬ ಗ್ರಹಿಕೆಯನ್ನು ಹೊಂದಿದ್ದಾರೆ. ಕೊಲೆ, ಸುಳ್ಳು, ಕಳ್ಳತನ ಮತ್ತು ಅನೈತಿಕತೆ ಇವೆಲ್ಲವುಗಳನ್ನು ಸಾರ್ವತ್ರಿಕವಾಗಿ ತಿರಸ್ಕರಿಸಲಾಗಿದೆ. ಈ ಸರಿ ಮತ್ತು ತಪ್ಪು ಎಂಬ ಗ್ರಹಿಕೆಯು ಪರಿಶುದ್ಧ ದೇವರಿಂದಲ್ಲದೆ ಎಲ್ಲಿಂದ ಬಂತು? ಈ ಎಲ್ಲವುಗಳ ಹೊರತಾಗಿ, ದೇವರ ಸ್ಪಷ್ಟ ಮತ್ತು ಕಡೆಗಣಿಸಲಾಗದ ತಿಳುವಳಿಕೆಯನ್ನು ಜನರು ತಿರಸ್ಕರಿಸುತ್ತಾರೆ ಮತ್ತು ಅದಕ್ಕೆ ಬದಲಾಗಿ ಸುಳ್ಳನ್ನು ನಂಬುತ್ತಾರೆ ಎಂದು ಸತ್ಯವೇದವು ನಮಗೆ ಹೇಳುತ್ತದೆ. ರೋಮಾ 1:25 ಹೀಗೆ ಹೇಳುತ್ತದೆ, “ಅವರು ಸತ್ಯದೇವರನ್ನು ಬಿಟ್ಟು ಅಸತ್ಯವಾದದ್ದನ್ನು ಹಿಡಿದುಕೊಂಡು ಸೃಷ್ಟಿಕರ್ತನನ್ನು ಪೂಜಿಸದೆ ಸೃಷ್ಟಿವಸ್ತುಗಳನ್ನೇ ಪೂಜಿಸಿ ಸೇವಿಸುವವರಾದರು.” ಸೃಷ್ಟಿಕರ್ತನೊಬ್ಬನೇ ನಿರಂತರ ಸ್ತುತಿಹೊಂದ ತಕ್ಕವನು, ಆಮೆನ್.” ದೇವರನ್ನು ನಂಬದೆ ಇರುವುದಕ್ಕಾಗಿ ಜನರು ಕ್ಷಮಿಸದವರಾಗಿದ್ದಾರೆ ಎಂದು ಸಹ ಸತ್ಯವೇದ ಪ್ರಕಟಿಸುತ್ತದೆ: “ಹೇಗಂದರೆ ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯ ಶಕ್ತಿಯು ದೇವತ್ವವು ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ; ಹೀಗಿರುವದರಿಂದ ಅವರು ಉತ್ತರವಿಲ್ಲದವರಾಗಿದ್ದಾರೆ” (ರೋಮಾ 1:20).

ದೇವರ ಅಸ್ತಿತ್ವವನ್ನು ಇದು “ವೈಜ್ಞಾನಿಕವಲ್ಲದ” ಅಥವಾ “ಆಧಾರವಿಲ್ಲದ ನಿಮಿತ್ತ” ತಿರಸ್ಕರಿಸುತ್ತಿದ್ದಾರೆ ಎಂದು ಜನರು ಹಕ್ಕುಸಾಧಿಸುತ್ತಾರೆ. ನಿಜವಾದ ಕಾರಣವೆಂದರೆ ಒಮ್ಮೆ ಅವರು ದೇವರು ಇದ್ದಾನೆಂದು ಒಪ್ಪಿಕೊಂಡರೆ, ಅವರು ದೇವರಿಗೆ ಜವಾಬ್ಧಾರರಾಗಿದ್ದಾರೆ ಮತ್ತು ಆತನಿಂದ ಕ್ಷಮಾಪಣೆಯ ಅಗತ್ಯವಿದೆ ಎಂದು ತಿಳಿದುಕೊಳ್ಳಬೇಕಾಗಿದೆ (ರೋಮಾ 3:23, 6:23). ಒಂದು ವೇಳೆ ದೇವರು ಅಸ್ತಿತ್ವದಲ್ಲಿದ್ದರೆ, ನಮ್ಮ ಕೃತ್ಯಗಳಿಗಾಗಿ ನಾವು ಆತನಿಗೆ ಲೆಕ್ಕ ಒಪ್ಪಿಸಬೇಕಾಗಿದೆ. ಒಂದು ವೇಳೆ ದೇವರು ಇಲ್ಲದೆ ಇದ್ದರೆ, ದೇವರು ನಮಗೆ ನ್ಯಾಯತೀರಿಸುವ ವಿಷಯದಲ್ಲಿ ಚಿಂತೆಯಿಲ್ಲದೆ ನಮಗೆ ಬೇಕಾದದ್ದನ್ನು ನಾವು ಮಾಡಬಹುದಾಗಿದೆ. ಆದುದರಿಂದಲೇ ದೇವರ ಅಸ್ತಿತ್ವವನ್ನು ನಿರಾಕರಿಸುವ ಅನೇಕರು ಪ್ರಕೃತಿತತ್ವ ವಿಕಾಸದ ಸಿದ್ಧಾಂತಕ್ಕೆ ಬಲವಾಗಿ ಅಂಟಿಕೊಂಡಿರುತ್ತಾರೆ – ಇದು ಅವರಿಗೆ ಸೃಷ್ಟಿಕರ್ತನಾದ ದೇವರಲ್ಲಿ ನಂಬಿಕೆಯಿಡುವದಕ್ಕೆ ಪರ್ಯಾಯವನ್ನು ಕೊಡುತ್ತದೆ. ಆತನ ಅಸ್ತಿತ್ವವನ್ನು ಒಪ್ಪಿಕೊಳ್ಳದೆ ಇರಲು ಕೆಲವರು ಬಹಳ ಹುರುಪಿನಿಂದ ಪ್ರಯತ್ನಿಸುತ್ತಾರೆ ಎಂಬ ಸಂಗತಿಯು ವಾಸ್ತವವಾಗಿ ಆತನ ಅಸ್ತಿತ್ವಕ್ಕೆ ವಾದವಾಗಿದೆ.

ದೇವರು ಇದ್ದಾನೆಂದು ನಾವು ತಿಳಿದುಕೊಂಡಿರುವದು ಹೇಗೆ? ಕ್ರೈಸ್ತರಾಗಿ, ನಾವು ಆತನೊಂದಿಗೆ ಪ್ರತಿನಿತ್ಯ ಮಾತನಾಡುವುದರಿಂದ ದೇವರು ಇದ್ದಾನೆಂದು ತಿಳಿದಿದ್ದೇವೆ. ಆತನು ನಮ್ಮೊಂದಿಗೆ ಮಾತನಾಡುವದು ಕೇಳಿಸುವಷ್ಟು ಶಬ್ಧವಿರುವದಿಲ್ಲ, ಆದರೆ ನಾವು ಆತನ ಪ್ರಸನ್ನತೆಯನ್ನು ಗ್ರಹಿಸುತ್ತೇವೆ, ನಾವು ಆತನ ನಡೆಸುವಿಕೆಯನ್ನು ಅನುಭವಿಸುತ್ತೇವೆ, ನಾವು ಆತನ ಪ್ರೀತಿಯನ್ನು ತಿಳಿದಿದ್ದೇವೆ, ನಾವು ಆತನ ಕೃಪೆಯನ್ನು ಆಶಿಸುತ್ತೇವೆ. ನಮ್ಮ ಜೀವಿತದಲ್ಲಿ ಸಂಭವಿಸಿರುವ ಕಾರ್ಯಗಳಿಗೆ ದೇವರನ್ನು ಬಿಟ್ಟರೆ ಬೇರೆ ಯಾರೂ ವಿವರಣೆ ಕೊಡಲು ಆಗುವದಿಲ್ಲ. ದೇವರು ನಮ್ಮನ್ನು ಬಹಳ ಅದ್ಭುತವಾಗಿ ರಕ್ಷಿಸಿದ್ದಾನೆ ಮತ್ತು ನಮ್ಮ ಜೀವಿತಗಳನ್ನು ಬದಲಾಯಿಸಿದ್ದಾನೆ ನಾವು ಅಸಹಾಯಕರು ಆದರೆ ನಾವು ಆತನ ಅಸ್ತಿತ್ವವನ್ನು ಒಪ್ಪಿಕೊಂಡು ಸ್ತುತಿಸಬೇಕಾಗಿದೆ. ಈಗಾಗಲೇ ವಾಸ್ತವವಾಗಿರುವದನ್ನು ಒಪ್ಪಿಕೊಳ್ಳಲು ನಿರಾಕರಿಸುವವರನ್ನು ಈ ಯಾವುದೇ ವಾದಗಳು ಮನವೊಲಿಸಲು ಆಗುವದಿಲ್ಲ. ಕೊನೆಯಲ್ಲಿ, ದೇವರ ಅಸ್ತಿತ್ವವನ್ನು ನಂಬಿಕೆಯಿಂದ ಅಂಗೀಕರಿಸಲೇ ಬೇಕಾಗಿದೆ (ಇಬ್ರಿಯ 11:6). ದೇವರಲ್ಲಿರುವ ನಂಬಿಕೆಯು ಕತ್ತಲೆಯೊಳಗೆ ಕುರುಡಾಗಿ ಜಿಗಿದಿರುವದಲ್ಲ; ಇದು ಈಗಾಗಲೇ ಬಹುಸಂಖ್ಯಾತ ಜನರು ನಿಂತಿರುವ ಉತ್ತಮವಾಗಿ ಬೆಳಕಿರುವ ಕೋಣೆಯೊಳಗೆ ಇಟ್ಟ ಸುರಕ್ಷಿತವಾದ ಹೆಜ್ಜೆಯಾಗಿದೆ.

English



ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ದೇವರು ಇದ್ದಾನೋ? ದೇವರ ಅಸ್ತಿತ್ವಕ್ಕೆ ಸಾಕ್ಷ್ಯಾಧಾರವಿದೆಯಾ?
© Copyright Got Questions Ministries