ಪ್ರಶ್ನೆ
ಕಾಯಿನನ ಹೆಂಡತಿ ಯಾರು? ಕಾಯಿನನ ಹೆಂಡತಿ ಅವನ ತಂಗಿಯಾಗಿದ್ದಳೋ?
ಉತ್ತರ
ಕಾಯಿನನ ಹೆಂಡತಿಯು ಯಾರೆಂದು ಸತ್ಯವೇದವು ನಿರ್ಧಿಷ್ಟವಾಗಿ ಹೇಳುವದಿಲ್ಲ. ಒಂದೇ ಸಾಧ್ಯತೆಯ ಉತ್ತರವೆಂದರೆ ಕಾಯಿನನ ಹೆಂಡತಿಯು ಅವನ ತಂಗಿ ಅಥವಾ ಸೋದರನ ಮಗಳು ಅಥವಾ ಮೊಮ್ಮಗಳು ಅಥವಾ ಇತ್ಯಾದಿಗಳಾಗಿರಬಹುದು. ಕಾಯಿನನು ಹೇಬೆಲನನ್ನು ಹತ್ಯೆ ಮಾಡಿದಾಗ ಅವನು ಎಷ್ಟು ವಯಸ್ಸಿನವನಾಗಿದ್ದನೆಂದು ಸತ್ಯವೇದವು ಹೇಳುವದಿಲ್ಲ (ಆದಿಕಾಂಡ 4:8). ಅವರಿಬ್ಬರು ರೈತರಾಗಿದ್ದದರಿಂದ, ಅವರು ಪ್ರಾಯಶಃ ತಮ್ಮ ಸ್ವಂತ ಕುಟುಂಬಗಳಲ್ಲಿ ಬಹುಮಟ್ಟಿಗೆ ಸಂಪೂರ್ಣವಾಗಿ ಬೆಳೆದವರಾಗಿದ್ದರು. ಹೇಬೆಲನು ಕೊಲ್ಲಲ್ಪಟ್ಟ ಸಮಯದಲ್ಲಿ ಆದಾಮ ಮತ್ತು ಹವ್ವಳು ಕಾಯಿನ ಮತ್ತು ಹೇಬೆಲನಗಿಂತ ಹೆಚ್ಚು ಮಕ್ಕಳಿಗೆ ಜನ್ಮ ಕೊಟ್ಟಿರಬಹುದು. ಅವರು ನಂತರ ಬಹಳ ಅಧಿಕ ಮಕ್ಕಳನ್ನು ಖಂಡಿತವಾಗಿ ಹೊಂದಿದ್ದರು (ಆದಿಕಾಂಡ 5:4). ಕಾಯಿನನು ಹೇಬೆಲನನ್ನು ಕೊಂದ ನಂತರ ಅವನು ತನ್ನ ಸ್ವಂತ ಜೀವಕ್ಕಾಗಿ ಭಯಪಟ್ಟನೆಂಬ ಸಂಗತಿಯು (ಆದಿಕಾಂಡ 4:14) ಸೂಚಿಸುವದೇನಂದರೆ ಆ ಕಾಲದಲ್ಲಿ ಆದಾಮ ಮತ್ತು ಹವ್ವಳ ಇನ್ನು ಅನೇಕ ಮಕ್ಕಳು ಮತ್ತು ಬಹುಶಃ ಮೊಮ್ಮಕ್ಕಳು ಸಹ ಜೀವಿಸುತ್ತಿದ್ದರು. ಕಾಯಿನನ ಹೆಂಡತಿಯು (ಆದಿಕಾಂಡ 4:17) ಆದಾಮ ಮತ್ತು ಹವ್ವಳ ಮಗಳು ಅಥವಾ ಮೊಮ್ಮಗಳಾಗಿದ್ದಳು.
ಆದಾಮ ಮತ್ತು ಹವ್ವ ಇವರು ಮೊಟ್ಟಮೊದಲ (ಮತ್ತು ಏಕಮಾತ್ರ) ಮಾನವ ಜೀವಿಗಳಾಗಿದ್ದದರಿಂದ, ಅವರ ಮಕ್ಕಳು ಅಂತರ್ವಿವಾಹ ಮಾಡಿಕೊಳ್ಳುವದನ್ನು ಬಿಟ್ಟರೆ ಬೇರೆ ಆಯ್ಕೆಯಿರಲಿಲ್ಲ. ವಿವಾಹ ಮಾಡಿಕೊಳ್ಳಲು ಸಾಕಷ್ಟು ಜನರಾಗಿ ಅಂತರ್ವಿವಾಹವು ಅನಾವಶ್ಯಕವಾಗುವವರೆಗೆ ದೇವರು ಅಂತರ್-ಕುಟುಂಬ ವಿವಾಹವನ್ನು ನಿಷೇಧಿಸಲಿಲ್ಲ (ಯಾಜಕಕಾಂಡ 18:6:18). ಒಂದೇ ಸಂತತಿಯ (ಉದಾ, ಸಹೋದರ, ಸಹೋದರಿ) ಅನುವಂಶಿಕ ಗುಣಲಕ್ಷಣಗಳ ಪ್ರಭಲತೆಯ ನಿಮಿತ್ತ ಹೆಚ್ಚು ಅಪಾಯವಿರುವದರಿಂದ ಇಬ್ಬರು ವ್ಯಕ್ತಿಗಳು ಒಟ್ಟಾಗಿ ಮಕ್ಕಳನ್ನು ಹೊಂದುವಾಗ ಸಗೋತ್ರದೊಡನೆ ಸಂಭೋಗವು ಇಂದು ಸಂತತಿಯ ವೈಪರೀತ್ಯಕ್ಕೆ ಪದೇ ಪದೇ ಪರಿಣಾಮ ಬೀರಲು ಕಾರಣವಾಗುತ್ತದೆ. ಬೇರೆ ಬೇರೆ ಕುಟುಂಬಗಳಿಂದ ಜನರು ಮಕ್ಕಳನ್ನು ಹೊಂದಿದಾಗ, ಇದು ತಂದೆತಾಯಿಗಳಿಬ್ಬರೂ ಒಂದೇ ರೀತಿಯ ಅನುವಂಶಿಕ ಲಕ್ಷಣಗಳ ವಿಶಿಷ್ಟ ಗುಣಗಳು ಬಹಳ ಹೆಚ್ಚಾಗಿ ಒಂದೇ ರೀತಿ ಆಗಿರುವದಿಲ್ಲ. ಶತಮಾನಗಳುದ್ದಕ್ಕೂ ಅನುವಂಶಿಕ ನ್ಯೂನ್ಯತೆಗಳು ಹೆಚ್ಚಾಗಿ, ವಿಸ್ತಾರ ಹೊಂದಿ ಮತ್ತು ಸಂತತಿಯಿಂದ ಸಂತತಿಗೆ ಹಾದು ಹೋದಂತೆ ಮಾನವ ಸಂತತಿಯ ನಿಯಮಾವಳಿಯು ಬಹು ಹೆಚ್ಚಾಗಿ ಮಲಿನವಾಗಿದೆ. ಆದಾಮ ಮತ್ತು ಹವ್ವಳು ಯಾವುದೇ ಅನುವಂಶಿಕ ನ್ಯೂನ್ಯತೆಗಳನ್ನು ಹೊಂದಿರಲಿಲ್ಲ ಮತ್ತು ನಾವು ಇಂದು ಹೊಂದಿರುದಕ್ಕಿಂತ ಹೆಚ್ಚಾಗಿ ಅತ್ಯಂತ ಶ್ರೇಷ್ಠ ಮಟ್ಟದ ಆರೋಗ್ಯವನ್ನು ಹೊಂದುವಂತೆ ಅವರಿಗೆ ಮತ್ತು ಅವರ ಸಂತತಿಯ ಮೊದಲ ಕೆಲವು ವಂಶಾವಳಿಗಳು ಹೊಂದುವಂತೆ ಮಾಡಿತು. ಆದಾಮ ಮತ್ತು ಹವ್ವಳ ಮಕ್ಕಳು ಇದ್ದರೂ ಕಡಿಮೆ ಅನುವಂಶಿಕ ನ್ಯೂನ್ಯತೆಗಳನ್ನು ಹೊಂದಿದ್ದರು. ಇದರ ಪರಿಣಾಮವಾಗಿ, ಅವರಿಗೆ ಅಂತರ್ವಿವಾಹ ಮಾಡಿಕೊಳ್ಳುವದು ಸುರಕ್ಷಿತವಾಗಿತ್ತು.
English
ಕಾಯಿನನ ಹೆಂಡತಿ ಯಾರು? ಕಾಯಿನನ ಹೆಂಡತಿ ಅವನ ತಂಗಿಯಾಗಿದ್ದಳೋ?