settings icon
share icon
ಪ್ರಶ್ನೆ

ಕ್ರೈಸ್ತತ್ವ ಎಂದರೇನು ಹಾಗೂ ಕ್ರೈಸ್ತರು ಏನನ್ನು ನಂಬುತ್ತಾರೆ?

ಉತ್ತರ


ಕ್ರೈಸ್ತತ್ವದ ಮೂಲ ನಂಬಿಕೆಗಳನ್ನು 1 ಕೊರಿಂಥ 15:1-4ರಲ್ಲಿ ಸಾರಾಂಶಗೊಳಿಸಲಾಗಿದೆ. ಯೇಸು ನಮ್ಮ ಪಾಪಗಳಿಗಾಗಿ ಸತ್ತು, ಹೂಣಲ್ಪಟ್ಟು, ಪುನರುತ್ಥಾನ ಹೊಂದುವದರ ಮೂಲಕ ಆತನನ್ನು ನಂಬಿಕೆಯಿಂದ ಅಂಗೀಕರಿಸುವ ಎಲ್ಲರಿಗೂ ರಕ್ಷಣೆಯನ್ನು ಅನುಗ್ರಹಿಸುತ್ತಾನೆ. ಬೇರೆ ಎಲ್ಲಾ ನಂಬಿಕೆಗಳಿಗಿಂತ ಅದ್ವಿತೀಯವಾದದ್ದು, ಧಾರ್ಮಿಕ ಆಚರಣೆಗಳನ್ನು ಅನುಸರಿಸುವದಕ್ಕಿಂತಲೂ ಹೆಚ್ಚು ಕ್ರೈಸ್ತತ್ವವು ಒಂದು ಸಂಬಂಧವನ್ನು ಕುರಿತಾಗಿದೆ. "ಏನು ಮಾಡಬೇಕು ಮತ್ತು ಏನು ಮಾಡಬಾರದು" ಎಂಬ ಪಟ್ಟಿಗೆ ಅಂಟಿಕೊಳ್ಳುವದನ್ನು ಬಿಟ್ಟು ದೇವರೊಂದಿಗೆ ನಿಕಟತೆಯಲ್ಲಿ ನಡೆಯುವ ಒಂದು ಜೀವಿತವನ್ನು ಬೆಳೆಸಿಕೊಳ್ಳುವುದೇ ಓರ್ವ ಕ್ರೈಸ್ತನ ಗುರಿಯಾಗಿರುತ್ತದೆ. ಆ ಸಂಬಂಧವು ಯೇಸು ಕ್ರಿಸ್ತನ ಕಾರ್ಯದಿಂದ ಹಾಗೂ ಪವಿತ್ರಾತ್ಮನ ಸೇವೆಯಿಂದ ಮಾತ್ರ ದೊರಕಿತು.

ಈ ಮೂಲ ನಂಬಿಕೆಗಳಿಗಿಂತಲೂ ಮಿಗಿಲಾಗಿ, ಇನ್ನೂ ಅನೇಕ ಕನಿಷ್ಠ ಸಂಗತಿಗಳಿದ್ದು, ಕ್ರೈಸ್ತತ್ವ ಎಂದರೇನು ಹಾಗೂ ಕ್ರೈಸ್ತ ನಂಬಿಕೆಗಳು ಯಾವವೆಂದು ಸೂಚಿಸುತ್ತವೆ. ಸತ್ಯವೇದವು ಪ್ರೇರಣೆಯ, "ದೇವರು-ಉಸಿರಾಡಿದ" ದೇವರ ವಾಕ್ಯವೆಂದು ಮತ್ತು ಅದರ ಉಪದೇಶವೇ ಎಲ್ಲಾ ನಂಬಿಕೆಗೂ ಹಾಗೂ ಅಭ್ಯಾಸಕ್ಕೂ ಅಂತಿಮ ಅಧಿಕಾರವಾಗಿದೆ ಎಂದು ಕ್ರೈಸ್ತರು ನಂಬುತ್ತಾರೆ (2 ತಿಮೋಥೆ 3:16; 1 ಪೇತ್ರ 1:20-21). ಮೂರು ವ್ಯಕ್ತಿತ್ವದೊಂದಿಗೆ ಅಸ್ತಿತ್ವದಲ್ಲಿರುವ ಒಬ್ಬ ದೇವರನ್ನೇ ಕ್ರೈಸ್ತರು ನಂಬುತ್ತಾರೆ - ತಂದೆ, ಮಗ (ಯೇಸು ಕ್ರಿಸ್ತನು), ಹಾಗೂ ಪವಿತ್ರಾತ್ಮ.

ದೇವರೊಂದಿಗೆ ನಿರ್ಧಿಷ್ಟವಾದ ಒಂದು ಸಂಬಂಧವನ್ನು ಹೊಂದಿಕೊಳ್ಳುವದಕ್ಕಾಗಿಯೇ ಮನುಷ್ಯನು ಸೃಷ್ಠಿಸಲ್ಪಟ್ಟನೆಂದು ಕ್ರೈಸ್ತರು ನಂಬುತ್ತಾರೆ, ಆದರೆ ಪಾಪವು ಎಲ್ಲಾ ಮನುಷ್ಯರನ್ನು ದೇವರಿಂದ ದೂರಮಾಡಿತು (ರೋಮಾ 3:23, 5:12). ಯೇಸು ಕ್ರಿಸ್ತನು ಸಂಪೂರ್ಣ ದೇವರಾಗಿಯೂ ಹಾಗೆಯೇ ಸಂಪೂರ್ಣ ಮನುಷ್ಯನಾಗಿಯೂ ಈ ಲೋಕಕ್ಕೆ ಬಂದನೆಂದು ಮತ್ತು ಶಿಲುಬೆಯ ಮೇಲೆ ಪ್ರಾಣಕೊಟ್ಟನೆಂದು ಕ್ರೈಸ್ತತ್ವವು ಬೋಧಿಸುತ್ತದೆ (ಫಿಲಿಪ್ಪ 2:6-11). ಯೇಸು ಕ್ರಿಸ್ತನು ಸತ್ತ ನಂತರ, ಹೂಣಲ್ಪಟ್ಟು, ಜೀವಿತನಾಗಿ ಎದ್ದುಬಂದು ಈಗ ತಂದೆಯಾದ ದೇವರ ಬಲಗಡೆಯಲ್ಲಿದ್ದುಕೊಂಡು ವಿಶ್ವಾಸಿಗಳಿಗೋಸ್ಕರ ಎಂದೆಂದಿಗೂ ವಿಜ್ಞಾಪನೆ ಮಾಡುತ್ತಾ ಜೀವಿಸುತ್ತಿದ್ದಾನೆಂದು ಕ್ರೈಸ್ತರು ನಂಬುತ್ತಾರೆ (ಇಬ್ರಿಯ 7:25). ಎಲ್ಲಾ ಮನುಷ್ಯರ ಪಾಪದ ಶಿಕ್ಷೆಯನ್ನು ಸಂಪೂರ್ಣವಾಗಿ ತೀರಿಸಲು ಶಿಲುಬೆಯ ಮೇಲಿನ ಯೇಸುವಿನ ಮರಣವೇ ಸಾಕೆಂದು ಹಾಗೂ ದೇವರ ಮತ್ತು ಮನುಷ್ಯನ ನಡುವೆ ಮುರಿದು ಹೋದ ಸಂಬಂಧವನ್ನು ಇದೇ ಪುನಃಸ್ಥಾಪಿಸುತ್ತದೆಂದು ಕ್ರೈಸ್ತರು ಪ್ರಕಟಿಸುತ್ತಾರೆ (ಇಬ್ರಿಯ 9:11-14; 10:10, ರೋಮಾ 5:8; 6:23).

ಒಬ್ಬನು ರಕ್ಷಣೆ ಹೊಂದಬೇಕಾದರೆ ಹಾಗೂ ಮರಣದ ನಂತರ ಪರಲೋಕದಲ್ಲಿ ಪ್ರವೇಶ ಪಡೆಯಬೇಕಾದರೆ ಶಿಲುಬೆಯ ಮೇಲೆ ಯೇಸು ಕ್ರಿಸ್ತನು ಮಾಡಿಮುಗಿಸಿರುವ ಕಾರ್ಯದ ಮೇಲೆ ತನ್ನ ಪೂರ್ಣ ನಂಬಿಕೆಯನ್ನಿಡಬೇಕೆಂದು ಕ್ರೈಸ್ತತ್ವವು ಬೋಧಿಸುತ್ತದೆ. ಕ್ರಿಸ್ತನು ನಮ್ಮ ಸ್ಥಾನದಲ್ಲಿ ಮರಣಹೊಂದಿ ನಮ್ಮ ಸ್ವಂತ ಪಾಪಗಳಿಗಾಗಿ ಬೆಲೆಕಟ್ಟಿ, ಸತ್ತವರೊಳಗಿಂದ ತಿರಿಗಿ ಎದ್ದುಬಂದನೆಂದು ನಾವು ನಂಬುವದಾದರೆ ನಾವು ರಕ್ಷಿಸಲ್ಪಡುತ್ತೇವೆ. ಯಾರಾದರೂ ರಕ್ಷಣೆ ಹೊಂದಬೇಕಾದರೆ ಇದನ್ನು ಬಿಟ್ಟರೆ ಇನ್ನೇನೂ ಇರುವದಿಲ್ಲ. ನಮ್ಮಷ್ಟಕ್ಕೆ ನಾವೇ ದೇವರನ್ನು ಮೆಚ್ಚಿಸಲು "ಸಾಕಷ್ಟು ಒಳ್ಳೆಯವರಾಗಿರಲು" ಸಾಧ್ಯವಿಲ್ಲ, ಯಾಕೆಂದರೆ ನಾವೆಲ್ಲರೂ ಪಾಪಿಗಳಾಗಿದ್ದೇವೆ (ಯೆಶಾಯ 53:6; 64:6-7). ಇದಕ್ಕಿಂತಲೂ ಹೆಚ್ಚು ಮಾಡಬೇಕಾದದ್ದು ಏನೂ ಇಲ್ಲ, ಯಾಕಂದರೆ ಕ್ರಿಸ್ತನೇ ಎಲ್ಲಾ ಕಾರ್ಯವನ್ನು ಮಾಡಿದ್ದಾನೆ! ಯೇಸು ಶಿಲುಬೆಯ ಮೇಲಿರುವಾಗ ಆತನು "ತೀರಿತು" ಎಂದು ಹೇಳಿದನು (ಯೋಹಾನ 19:30), ಅಂದರೆ ವಿಮೋಚನೆಯ ಕಾರ್ಯವು ಪೂರ್ತಿಗೊಂಡಿತು ಎಂದರ್ಥ.

ಕ್ರೈಸ್ತತ್ವದ ಪ್ರಕಾರ, ರಕ್ಷಣೆ ಎಂದರೆ ಹಳೇ ಪಾಪ ಸ್ವಭಾವದಿಂದ ಬಿಡುಗಡೆ ಮತ್ತು ದೇವರೊಂದಿಗೆ ಒಂದು ಸರಿಯಾದ ಸಂಬಂಧವನ್ನು ಹೊಂದಿಕೊಳ್ಳುವ ಸ್ವತಂತ್ರತೆಯಾಗಿದೆ. ಹೇಗೆ ನಾವು ಒಮ್ಮೆ ಪಾಪಕ್ಕೆ ದಾಸರಾಗಿದ್ದೇವೋ ಹಾಗೆಯೇ ಈಗ ನಾವು ಕ್ರಿಸ್ತನಿಗೆ ದಾಸರಾಗಿದ್ದೇವೆ (ರೋಮಾ 6:15-22). ವಿಶ್ವಾಸಿಗಳು ಈ ಭೂಮಿಯ ಮೇಲೆ ಎಲ್ಲಿಯವರೆಗೆ ತಮ್ಮ ಪಾಪಭರಿತ ಶರೀರಗಳಲ್ಲಿ ವಾಸಿಸುತ್ತಾರೋ ಅಲ್ಲಿಯವರೆಗೂ ಪಾಪದೊಂದಿಗೆ ಸತತವಾದ ಹೋರಾಟದಲ್ಲಿ ತೊಡಗಿರುತ್ತಾರೆ. ಹೇಗಿದ್ದರೂ ಕ್ರೈಸ್ತರು ಪಾಪದೊಂದಿಗೆ ಇರುವ ಹೋರಾಟದಲ್ಲಿ ದೇವರ ವಾಕ್ಯವನ್ನು ಅಧ್ಯಾಯನ ಮಾಡಿ ತಮ್ಮ ಜೀವಿತಗಳಗಲ್ಲಿ ಅದನ್ನು ಅಳವಡಿಸಿಕೊಳ್ಳುವುದರ ಮೂಲಕ ಜಯಹೊಂದಿ ಪವಿತ್ರಾತ್ಮನಿಂದ ನಿಯಂತ್ರಿಸಲ್ಪಡುತ್ತಾರೆ - ಅಂದರೆ ಪ್ರತಿದಿನದ ಪರಿಸ್ಥಿತಿಗಳಿಗಾಗಿ ಆತ್ಮನ ನಡೆಸುವಿಕೆಗೆ ಒಪ್ಪಿಸಿಕೊಡುವಂತದ್ದಾಗಿದೆ.

ಆದ್ದರಿಂದ, ಅನೇಕ ಧಾರ್ಮಿಕ ತತ್ವಗಳು ಒಬ್ಬ ವ್ಯಕ್ತಿ ಕೆಲವು ಸಂಗತಿಗಳನ್ನು ಮಾಡಬೇಕು ಅಥವಾ ಮಾಡಬಾರದೆಂದು ಅಪೇಕ್ಷಿಸಿದರೆ ಕ್ರೈಸ್ತತ್ವವು ಕ್ರಿಸ್ತನು ಶಿಲುಬೆಯ ಮೇಲೆ ನಮ್ಮ ಪಾಪಗಳಿಗಾಗಿ ಬೆಲೆ ಕಟ್ಟಲು ತನ್ನ ಪ್ರಾಣಕೊಟ್ಟು ಜೀವಿತನಾಗಿ ತಿರಿಗಿ ಎದ್ದು ಬಂದನೆಂದು ನಂಬುವದನ್ನು ಕುರಿತಾಗಿದೆ. ನಮ್ಮ ಪಾಪದ ಶಿಕ್ಷೆ ತೀರಿತು ಈಗ ನಾವು ದೇವರೊಂದಿಗೆ ಅನ್ಯೋನ್ಯತೆ ಹೊಂದಬಹುದು. ನಾವು ನಮ್ಮ ಪಾಪ ಸ್ವಭಾವದ ಮೇಲೆ ಜಯಹೊಂದಬಹುದು ಮತ್ತು ದೇವರೊಂದಿಗೆ ಅನ್ಯೋನ್ಯತೆಯಲ್ಲಿ ಹಾಗೂ ವಿಧೇಯತೆಯಲ್ಲಿ ಜೀವಿಸಬಹುದು. ಇದೇ ನಿಜವಾದ ಸತ್ಯವೇದ ಆಧಾರಿತ ಕ್ರೈಸ್ತತ್ವವಾಗಿದೆ.

English



ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ಕ್ರೈಸ್ತತ್ವ ಎಂದರೇನು ಹಾಗೂ ಕ್ರೈಸ್ತರು ಏನನ್ನು ನಂಬುತ್ತಾರೆ?
Facebook icon Twitter icon Pinterest icon Email icon
© Copyright Got Questions Ministries