ಪ್ರಶ್ನೆ
ರಕ್ಷಣೆಗೆ ರೋಮನ್ನರ ರಸ್ತೆ ಯಾವುದಾಗಿದೆ?
ಉತ್ತರ
ರಕ್ಷಣೆಗೆ ರೋಮನ್ನರ ರಸ್ತೆಯು ರೋಮಾ ಪುಸ್ತಕದಿಂದ ವಚನಗಳನ್ನು ಉಪಯೋಗಿಸಿ ರಕ್ಷಣೆಯ ಒಳ್ಳೆಯ ವಾರ್ತೆಗೆ ವಿವರಣೆಯ ದಾರಿಯಾಗಿದೆ. ಇದು ಸರಳವಾಗಿದ್ದರೂ ಸಹ ನಮಗೆ ರಕ್ಷಣೆ ಯಾಕೆ ಬೇಕು, ದೇವರು ರಕ್ಷಣೆಯನ್ನು ಹೇಗೆ ಅನುಗ್ರಹಿಸಿದನು, ನಾವು ರಕ್ಷಣೆಯನ್ನು ಹೇಗೆ ಪಡೆದುಕೊಳ್ಳಬಹುದು, ಮತ್ತು ರಕ್ಷಣೆಯ ಫಲಿತಾಂಶಗಳು ಏನಾಗಿವೆ ಎಂದು ವಿವರಿಸುವ ಶಕ್ತಿಯುತ ವಿಧಾನವಾಗಿದೆ.
ರಕ್ಷಣೆಗೆ ರೋಮನ್ನರ ರಸ್ತೆಯನ್ನು ಕುರಿತು ಮೊದಲನೆಯ ವಚನವು ರೋಮಾ 3:23 ಆಗಿದೆ, “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” ನಾವೆಲ್ಲರೂ ಪಾಪ ಮಾಡಿದ್ದೇವೆ. ದೇವರನ್ನು ಮೆಚ್ಚಿಸದೆ ಇರುವ ಕಾರ್ಯಗಳನ್ನು ನಾವೆಲ್ಲರೂ ಮಾಡಿದ್ದೇವೆ. ಮುಗ್ಧರಾಗಿರುವವರು ಯಾರೂ ಇಲ್ಲ. ನಮ್ಮ ಜೀವಿತಗಳಲ್ಲಿ ಪಾಪವು ಹೇಗೆ ಕಾಣಿಸುತ್ತದೆ ಎಂದು ರೋಮಾ 3:10-18 ವಿವರವಾದ ಚಿತ್ರವನ್ನು ಕೊಡುತ್ತದೆ. ರಕ್ಷಣೆಗೆ ರೋಮನ್ನರ ರಸ್ತೆಯನ್ನು ಕುರಿತು ಎರಡನೆಯ ವಚನ ರೋಮಾ 6:23 ನಮಗೆ ಪಾಪದ ಪರಿಣಾಮಗಳನ್ನು ಕುರಿತು ಬೋಧಿಸುತ್ತದೆ – “ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ” ನಮ್ಮ ಪಾಪಗಳಿಗಾಗಿ ನಾವು ಸಂಪಾದಿಸಿದ ಶಿಕ್ಷೆಯು ಮರಣವಾಗಿದೆ. ಕೇವಲ ಶಾರೀರಿಕ ಮರಣವಲ್ಲ, ಆದರೆ ನಿತ್ಯ ಮರಣವಾಗಿದೆ!
ರಕ್ಷಣೆಗೆ ರೋಮನ್ನರ ರಸ್ತೆಯನ್ನು ಕುರಿತು ಮೂರನೆಯ ವಚನವು ರೋಮಾ 6:23 ಬಿಟ್ಟದ್ದನ್ನು ತೆಗೆದುಕೊಳ್ಳುತ್ತದೆ, “ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ” ರೋಮಾ 5:8 ಹೀಗೆ ಪ್ರಕಟಿಸುತ್ತದೆ, “ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ.” ಯೇಸು ಕ್ರಿಸ್ತನು ನಮಗಾಗಿ ಸತ್ತನು! ಯೇಸುವಿನ ಮರಣವು ನಮ್ಮ ಪಾಪಗಳಿಗಾಗಿ ಕ್ರಯವನ್ನು ಕೊಟ್ಟಿತು. ಯೇಸುವಿನ ಮರಣವು ನಮ್ಮ ಪಾಪಗಳಿಗಾಗಿ ಕ್ರಯವೆಂದು ದೇವರು ಅಂಗೀಕರಿಸಿದನು ಎಂದು ಯೇಸುವಿನ ಪುನರುತ್ಥಾನವು ರುಜುವಾತುಪಡಿಸುತ್ತದೆ.
ರಕ್ಷಣೆಗೆ ರೋಮನ್ನರ ರಸ್ತೆಯನ್ನು ಕುರಿತು ನಾಲ್ಕನೆಯ ತಡೆ ರೋಮಾ 10:9 ಆಗಿದೆ, “ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವದು ಎಂಬದೇ.” ನಮ್ಮ ಪರವಾಗಿ ಯೇಸುವಿನ ಮರಣದ ನಿಮಿತ್ತ, ನಾವು ಮಾಡಬೇಕಾದ ಕಾರ್ಯ ಆತನಲ್ಲಿ ವಿಶ್ವಾಸವಿಡಬೇಕು ಮತ್ತು ನಮ್ಮ ಪಾಪಗಳಿಗಾಗಿ ಆತನ ಮರಣವು ಕ್ರಯ ಕೊಟ್ಟಿತು ಎಂದು ಭರವಸೆಯಿಡಬೇಕು, ಆಗ ನಾವು ರಕ್ಷಣೆ ಹೊಂದುತ್ತೇವೆ! ರೋಮಾ 10:13 ತಿರಿಗಿ ಹೀಗೆ ಹೇಳುತ್ತದೆ, “ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು.” ನಮ್ಮ ಪಾಪಗಳಿಗಾಗಿ ದಂಡವನ್ನು ತೆರಲು ಯೇಸು ಸತ್ತನು ಮತ್ತು ನಿತ್ಯ ಮರಣದಿಂದ ನಮ್ಮನ್ನು ರಕ್ಷಿಸಿದನು. ತನ್ನ ಒಡೆಯನು ಮತ್ತು ರಕ್ಷಕನು ಎಂದು ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವ ಎಲ್ಲರಿಗೂ ರಕ್ಷಣೆ ಮತ್ತು ಪಾಪಗಳ ಕ್ಷಮಾಪಣೆಯು ಲಭ್ಯವಾಗಿದೆ.
ರಕ್ಷಣೆಗೆ ರೋಮನ್ನರ ರಸ್ತೆಯ ಅಂತಿಮ ಅಂಶವು ರಕ್ಷಣೆಯ ಪರಿಣಾಮಗಳಾಗಿವೆ. ರೋಮಾ 5:1 ಈ ಅದ್ಭುತವಾದ ಸಂದೇಶವನ್ನು ಹೊಂದಿದೆ, “ನಾವು ನಂಬಿಕೆಯಿಂದ ನೀತಿವಂತರಾದ ಕಾರಣ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೊಂದಿಗೆ ಉಂಟಾದ ಸಮಾಧಾನದಲ್ಲಿ ಇರೋಣ.” ಯೇಸು ಕ್ರಿಸ್ತನ ಮೂಲಕ ನಾವು ದೇವರೊಂದಿಗೆ ಸಮಾಧಾನದ ಸಂಬಂಧವನ್ನು ಹೊಂದಿಕೊಳ್ಳಬಹುದು. ರೋಮಾ 8:1 ನಮಗೆ ಹೀಗೆ ಬೋಧಿಸುತ್ತದೆ, “ಆದದರಿಂದ ಕ್ರಿಸ್ತ ಯೇಸುವಿನಲ್ಲಿ ಇರುವವರಿಗೆ ಅಪರಾಧನಿರ್ಣಯವು ಈಗ ಇಲ್ಲವೇ ಇಲ್ಲ.” ನಮ್ಮ ಪರವಾಗಿ ಯೇಸುವಿನ ಮರಣದ ನಿಮಿತ್ತ, ನಮ್ಮ ಪಾಪಗಳಿಗಾಗಿ ನಾವು ಇನ್ನೆಂದಿಗೂ ಖಂಡನೆಗೆ ಒಳಗಾಗುವುದಿಲ್ಲ. ಅಂತಿಮವಾಗಿ, ರೋಮಾ 8:38-39 ರಿಂದ ನಾವು ಈ ಅಮೂಲ್ಯವಾದ ದೇವರ ವಾಗ್ಧಾನವನ್ನು ಹೊಂದಿದ್ದೇವೆ, “ಹೇಗಂದರೆ ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಮಹತ್ವಗಳಾಗಲಿ ಮೇಲಣ ಲೋಕವಾಗಲಿ ಕೆಳಗಣ ಲೋಕವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು”
ನೀವು ರಕ್ಷಣೆಗೆ ರೋಮನ್ನರ ರಸ್ತೆಯನ್ನು ಅನುಸರಿಸಲು ಇಚ್ಚಿಸುವಿರಾ? ಹಾಗಾದರೆ, ನೀವು ದೇವರಿಗೆ ಪ್ರಾರ್ಥಿಸಬಹುದಾದ ಸರಳವಾದ ಪ್ರಾರ್ಥನೆಯು ಇಲ್ಲಿದೆ. ಈ ಪ್ರಾರ್ಥನೆಯನ್ನು ಹೇಳುವುದರ ಮೂಲಕ ನಿಮ್ಮ ರಕ್ಷಣೆಗಾಗಿ ನೀವು ಯೇಸು ಕ್ರಿಸ್ತನ ಮೇಲೆ ಆತುಕೊಳ್ಳುತ್ತಿದ್ದೀರಿ ಎಂದು ದೇವರಿಗೆ ಪ್ರಕಟಿಸುವ ರೀತಿಯಾಗಿದೆ. ಈ ಮಾತುಗಳು ತಾವೇ ನಿಮ್ಮನ್ನು ರಕ್ಷಿಸುವುದಿಲ್ಲ. ಯೇಸು ಕ್ರಿಸ್ತನಲ್ಲಿಟ್ಟಿರುವ ನಂಬಿಕೆಯು ಮಾತ್ರ ರಕ್ಷಣೆಯನ್ನು ಅನುಗ್ರಹಿಸಬಲ್ಲದು. “ದೇವರೇ, ನಾನು ನಿನಗೆ ವಿರುದ್ಧವಾಗಿ ಪಾಪಮಾಡಿದ್ದೇನೆ ಮತ್ತು ನಾನು ಶಿಕ್ಷೆಗೆ ಅರ್ಹನಾಗಿದ್ದೇನೆಂದು ತಿಳಿದಿದ್ದೇನೆ. ಆದರೆ ನನಗೆ ಆಗ ಬೇಕಾದ ಶಿಕ್ಷೆಯನ್ನು ಯೇಸು ಕ್ರಿಸ್ತನು ತೆಗೆದುಕೊಂಡನು, ಆದುದರಿಂದ ಆತನಲ್ಲಿಟ್ಟಿರುವ ನಂಬಿಕೆಯ ಮೂಲಕ ನನಗೆ ಕ್ಷಮಾಪಣೆ ಉಂಟಾಗಬಹುದು. ನಿನ್ನ ಸಹಾಯದಿಂದ, ರಕ್ಷಣೆಗಾಗಿ ನನ್ನ ಭರವಸೆಯನ್ನು ನಿನ್ನಲ್ಲಿ ಹಾಕುತ್ತೇನೆ. ನಿನ್ನ ಅದ್ಬುತವಾದ ಕೃಪೆ ಮತ್ತು ಕ್ಷಮಾಪಣೆಗಾಗಿ – ನಿತ್ಯಜೀವದ ವರಕ್ಕಾಗಿ ನಿನಗೆ ವಂದನೆಗಳು! ಆಮೆನ್!”
ನೀವು ಇಲ್ಲಿ ಓದಿದವುಗಳ ನಿಮಿತ್ತ ಕ್ರಿಸ್ತನಿಗಾಗಿ ತೀರ್ಮಾನ ಮಾಡಿಕೊಂಡಿದ್ದೀರಾ? ಹಾಗಾದರೆ, “ನಾನು ಇಂದು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿರಿ.
English
ರಕ್ಷಣೆಗೆ ರೋಮನ್ನರ ರಸ್ತೆ ಯಾವುದಾಗಿದೆ?