settings icon
share icon
ಪ್ರಶ್ನೆ

ದೇವರ ಗುಣಲಕ್ಷಣಗಳು ಯಾವುವು? ದೇವರು ಹೇಗಿದ್ದಾನೆ?

ಉತ್ತರ


ದೇವರ ವಾಕ್ಯವಾಗಿರುವ ಸತ್ಯವೇದವು ದೇವರು ಹೇಗಿದ್ದಾನೆ ಮತ್ತು ಆತನು ಹೇಗಿಲ್ಲ ಎಂದು ನಮಗೆ ತಿಳಿಸುತ್ತದೆ. ಸತ್ಯವೇದದ ಅಧಿಕಾರವಿಲ್ಲದೆ, ದೇವರ ಗುಣಲಕ್ಷಣಗಳನ್ನು ವಿವರಿಸಲು ಮಾಡುವ ಪ್ರಯತ್ನವು ಕೇವಲ ಅಭಿಪ್ರಾಯವಾಗಿರುತ್ತದೆಯಷ್ಟೇ, ಕೆಲವೊಮ್ಮೆ ಈ ಅಭಿಪ್ರಾಯದಲ್ಲೇ ತಪ್ಪು ಇರುತ್ತದೆ, ವಿಶೇಷವಾಗಿ ದೇವರನ್ನು ಅರ್ಥಮಾಡಿಕೊಳ್ಳುವ ಸಂಗತಿ (ಯೋಬ 42:7). ದೇವರು ಹೇಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ನಮಗೆ ಪ್ರಾಮುಖ್ಯವಾಗಿದೆ ಎಂದು ಹೇಳುವುದು ದೊಡ್ಡ ತಗ್ಗು ನುಡಿಯಾಗಿದೆ. ಹೀಗೆ ಮಾಡಲು ತಪ್ಪಿದಲ್ಲಿ ನಮಗೆ ಇದು ಆತನ ಚಿತ್ತಕ್ಕೆ ವಿರುದ್ಧವಾಗಿ ಸುಳ್ಳು ದೇವತೆಗಳನ್ನು ವ್ಯವಸ್ಥಿತಗೊಳಿಸಲು, ಅದನ್ನು ಹಿಂಬಾಲಿಸಲು, ಮತ್ತು ಆರಾಧಿಸಲು ಕಾರಣವಾಗುತ್ತದೆ (ವಿಮೋಚನಾಕಾಂಡ 20:3-5).

ದೇವರು ತನ್ನನ್ನು ಪ್ರಕಟಪಡಿಸಿಕೊಳ್ಳಬೇಕೆಂದು ಆರಿಸಿಕೊಂಡದ್ದನ್ನು ಮಾತ್ರ ತಿಳಿದುಕೊಳ್ಳಬಹುದು. ದೇವರ ಗುಣಲಕ್ಷಣಗಳಲ್ಲಿ “ಬೆಳಕು” ಸಹ ಒಂದಾಗಿದೆ, ತನ್ನನ್ನು ಕುರಿತು ಮಾಹಿತಿ ಕೊಡುವಲ್ಲಿ ಸ್ವ-ಪ್ರಕಟಿಸುವವನಾಗಿದ್ದಾನೆ ಎಂಬುದೇ (ಯೆಶಾಯ 60:19; ಯಾಕೋಬ 1:17). ದೇವರು ತನ್ನನ್ನು ಕುರಿತು ತಿಳುವಳಿಕೆಯನ್ನು ಪ್ರಕಟಿಸಿದ್ದಾನೆ ಎಂಬ ಸತ್ಯಸಂಗತಿಯನ್ನು ಕಡೆಗಣಿಸಲು ಆಗುವುದಿಲ್ಲ (ಇಬ್ರಿಯ 4:1). ಸೃಷ್ಟಿ, ಸತ್ಯವೇದ ಮತ್ತು ವಾಕ್ಯವು ಶರೀರಧಾರೆಯಾದ (ಯೇಸು ಕ್ರಿಸ್ತನು), ದೇವರು ಹೇಗಿದ್ದಾನೆ ಎಂದು ತಿಳಿಯಲು ನಮಗೆ ಸಹಾಯಮಾಡುತ್ತದೆ.

ದೇವರು ನಮ್ಮ ಸೃಷ್ಟಿಕರ್ತನು ಮತ್ತು ನಾವು ಆತನ ಸೃಷ್ಟಿಯ ಭಾಗವಾಗಿದ್ದೇವೆ (ಆದಿಕಾಂಡ 1:1; ಕೀರ್ತನೆ 24:1) ಮತ್ತು ಆತನ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟಿದ್ದೇವೆ ಎಂಬ ತಿಳುವಳಿಕೆಯಿಂದ ಆರಂಭಿಸೋಣ. ಮನುಷ್ಯನು ಸೃಷ್ಟಿಯ ಉಳಿದವುಗಳಿಗಿಂತ ಮೇಲಿದ್ದಾನೆ ಮತ್ತು ಇವುಗಳ ಮೇಲೆ ಅಧಿಕಾರವು ಕೊಡಲ್ಪಟ್ಟಿತು (ಆದಿಕಾಂಡ 1:26-28). ಸೃಷ್ಟಿಯು ಪತನದಿಂದ ನಾಶವಾಯಿತು, ಆದರೆ ಇನ್ನೂ ದೇವರ ಕಾರ್ಯಗಳ ನಸುನೋಟವನ್ನು ಕೊಡುತ್ತದೆ (ಆದಿಕಾಂಡ 3:17-18; ರೋಮಾ 1:19-20). ಸೃಷ್ಟಿಯ ವಿಶಾಲತೆ, ಸಂಕೀರ್ಣತೆ, ಸುಂದರತೆ, ಮತ್ತು ಕ್ರಮಬದ್ಧತೆಯನ್ನು ಪರಿಗಣಿಸುವುದಾದರೆ, ನಾವು ದೇವರ ವಿಸ್ಮಯತೆಯ ಗ್ರಹಿಕೆಯನ್ನು ಹೊಂದಿಕೊಳ್ಳಬಹುದು.

ದೇವರ ಕೆಲವು ಹೆಸರುಗಳನ್ನು ಓದುವುದು ದೇವರು ಹೇಗಿದ್ದಾನೆಂಬ ಹುಡುಕಾಟದಲ್ಲಿ ನಮಗೆ ಸಹಾಯಕರವಾಗಬಹುದು. ಅವು ಈ ಕೆಳಗಿನಂತಿವೆ:

ಎಲೋಹಿಮ್ – ಶಕ್ತನು, ದೈವಿಕ (ಆದಿಕಾಂಡ 1:1)
ಅದೋನಾಯ್ – ಕರ್ತನು, ಗುರು ಮತ್ತು ಸೇವಕನ ಸಂಬಂಧವನ್ನು ಸೂಚಿಸುತ್ತದೆ (ವಿಮೋಚನಾಕಾಂಡ 4:10, 13)
ಎಲ್ ಎಲಿಯಾನ್ – ಅತ್ಯುನ್ನತನು, ಬಲಶಾಲಿಯಾದವನು (ಆದಿಕಾಂಡ 14:20)
ಎಲ್ ರೋಯಿ – ನೋಡುವ ಬಲಶಾಲಿಯಾದವನು (ಆದಿಕಾಂಡ 16:13)
ಎಲ್ ಶಡಾಯ್ – ಸರ್ವಶಕ್ತನಾದ ದೇವರು (ಆದಿಕಾಂಡ 17:1)
ಎಲ್ ಒಲಾಮ್ – ನಿತ್ಯನಾದ ದೇವರು (ಯೆಶಾಯ 40:28)
ಯಾಹ್ವೇ – ಯೆಹೋವನು “ಇರುವಾತನು,” ಅಂದರೆ ನಿತ್ಯನಾದ ಸ್ವ-ಅಸ್ತಿತ್ವದಲ್ಲಿರುವ ದೇವರು (ವಿಮೋಚನಾಕಾಂಡ 3:13, 14).

ದೇವರು ನಿತ್ಯನಾದವನು, ಅಂದರೆ ಆತನಿಗೆ ಆರಂಭವಿರಲಿಲ್ಲ ಮತ್ತು ಆತನ ಅಸ್ತಿತ್ವವು ಎಂದಿಗೂ ಕೊನೆಗೊಳ್ಳುವದಿಲ್ಲ. ಆತನು ಅಮರ ಮತ್ತು ಅನಂತನಾದವನು (ಧರ್ಮೋಪದೇಶಕಾಂಡ 33:27; ಕೀರ್ತನೆಗಳು 90:2; 1 ತಿಮೋಥೆ 1:17). ದೇವರು ನಿರ್ವಿಕಾರನು, ಅಂದರೆ ಆತನು ಬದಲಾಗದವನು; ಇನ್ನೊಂದರ್ಥದಲ್ಲಿ ದೇವರು ಸಂಪೂರ್ಣವಾಗಿ ವಿಶ್ವಾಸಾರ್ಹ ಮತ್ತು ನಂಬಲರ್ಹನಾಗಿದ್ದಾನೆ (ಮಲಾಕಿ 3:6; ಅರಣ್ಯಕಾಂಡ 23:19; ಕೀರ್ತನೆಗಳು 102:26, 27). ದೇವರನ್ನು ಹೋಲಿಸಲು ಆಗುವುದಿಲ್ಲ; ಕೆಲಸಗಳಲ್ಲಿ ಅಥವಾ ಇರುವಿಕೆಯಲ್ಲಿ ಆತನ ಹಾಗೆ ಯಾರೂ ಇಲ್ಲ. ಆತನು ಅಸಮಾನನು ಮತ್ತು ಪರಿಪೂರ್ಣನೂ ಆಗಿದ್ದಾನೆ (2 ಸಮುವೇಲ 7:22; ಕೀರ್ತನೆಗಳು 86:8; ಯೆಶಾಯ 40:25; ಮತ್ತಾಯ 5:48). ದೇವರು ಭೇದಿಸಲಾಗದ, ಅಗಾಧ, ಹುಡುಕಲಾಗದವನು ಆಗಿದ್ದಾನೆ, ಮತ್ತು ಆತನನ್ನು ಸಂಪೂರ್ತಿಯಾಗಿ ಅರ್ಥಮಾಡಿಕೊಂಡಷ್ಟು ಹಿಂದಿನದನ್ನು ಕಂಡುಕೊಳ್ಳುವುದು (ಯೆಶಾಯ 40:28; ಕೀರ್ತನೆಗಳು 145:3; ರೋಮಾ 11:33, 34).

ದೇವರು ನೀತಿವಂತನಾಗಿದ್ದಾನೆ; ಪಕ್ಷಪಾತವನ್ನು ತೋರಿಸುವ ವ್ಯಕ್ತಿಗಳಿಗೆ ಗೌರವ ತೋರಿಸುವದಿಲ್ಲ (ಧರ್ಮೋಪದೇಶಕಾಂಡ 32:4; ಕೀರ್ತನೆಗಳು 18:30). ದೇವರು ಸರ್ವಶಕ್ತನು; ಆತನು ಸಂಪೂರ್ಣ ಪ್ರಬಲನು ಮತ್ತು ಆತನನ್ನು ಮೆಚ್ಚಿಸುವ ಯಾವುದನ್ನು ಬೇಕಾದರೂ ಮಾಡಬಲ್ಲನು, ಆದರೆ ಆತನ ಕೃತ್ಯಗಳು ಯಾವಾಗಲೂ ತನ್ನ ಸ್ವಭಾವಕ್ಕೆ ಹೊಂದಿಕೆಯಾಗಿರುತ್ತವೆ (ಪ್ರಕಟನೆ 19:6; ಯೆರೆಮಿಯಾ 32:17, 27). ದೇವರು ಸರ್ವವ್ಯಾಪಿಯಾಗಿದ್ದಾನೆ, ಅಂದರೆ ಆತನು ಎಲ್ಲಾ ಸ್ಥಳಗಳಲ್ಲಿ ಇದ್ದಾನೆ, ಆದರೆ ಇದರ ಅರ್ಥ ದೇವರು ಎಲ್ಲವೂ ಎಂದಲ್ಲ (ಕೀರ್ತನೆಗಳು 139:7-13; ಯೆರೆಮಿಯಾ 23:23). ಆತನು ಸರ್ವಜ್ಞನು, ಅಂದರೆ ಕೊಡಲ್ಪಟ್ಟ ಯಾವುದೇ ಕ್ಷಣದಲ್ಲಿ ನಾವು ಏನನ್ನು ಆಲೋಚಿಸುತ್ತಿದ್ದೇವೆ ಎಂಬುದನ್ನು ಒಳಗೊಂಡು ಆತನು ಪೂರ್ವ, ಪ್ರಸ್ತುತ ಮತ್ತು ಭವಿಷ್ಯತ್ತನ್ನು ಬಲ್ಲವನಾಗಿದ್ದಾನೆ. ಆತನು ಎಲ್ಲವನ್ನು ಬಲ್ಲವನಾದ್ದರಿಂದ, ಆತನು ನ್ಯಾಯವನ್ನು ಯಾವಾಗಲೂ ನೀತಿಯಿಂದ ನಿರ್ವಹಿಸುವನು (ಕೀರ್ತನೆಗಳು 139:1-5; ಜ್ಞಾನೋಕ್ತಿಗಳು 5:21).

ದೇವರು ಒಬ್ಬನೇ ಆಗಿದ್ದಾನೆ; ಬೇರೆಯವರಿಲ್ಲ, ಆದರೆ ಆತನೊಬ್ಬನೇ ನಮ್ಮ ಹೃದಯದ ಆಳವಾದ ಅಗತ್ಯತೆಗಳನ್ನು ಮತ್ತು ಹಂಬಲವನ್ನು ಪೂರೈಸುವಾತನಾಗಿದ್ದಾನೆ. ದೇವರೊಬ್ಬನೇ ನಮ್ಮ ಆರಾಧನೆಗೆ ಮತ್ತು ಭಕ್ತಿಗೆ ಯೋಗ್ಯನಾಗಿದ್ದಾನೆ (ಧರ್ಮೋಪದೇಶಕಾಂಡ 6:4). ದೇವರು ನೀತಿವಂತನು, ಅಂದರೆ ದೇವರು ತಪ್ಪುಗಳನ್ನು ಮಾಡುವದಿಲ್ಲ ಮತ್ತು ಅವುಗಳನ್ನು ಹಾದುಹೋಗುವದಿಲ್ಲ. ಯಾಕೆಂದರೆ ದೇವರ ನೀತಿವಂತಿಕೆ ಮತ್ತು ನ್ಯಾಯದ ನಿಮಿತ್ತ, ನಮ್ಮ ಪಾಪಗಳು ಕ್ಷಮಿಸಲ್ಪಡುವದಕ್ಕಾಗಿ, ನಮ್ಮ ಪಾಪಗಳನ್ನು ಯೇಸುವಿನ ಮೇಲೆ ಹಾಕಲ್ಪಟ್ಟಾಗ ಆತನು ದೇವರ ಕೋಪವನ್ನು ಅನುಭವಿಸಬೇಕಾಯಿತು (ವಿಮೋಚ 9:27; ಮತ್ತಾಯ 27:45-46; ರೋಮಾ 3:21-26).

ದೇವರು ಸಾರ್ವಭೌಮನು, ಅಂದರೆ ಆತನು ಸರ್ವಾಧಿಕಾರಿ. ಆತನ ಎಲ್ಲಾ ಸೃಷ್ಟಿಯನ್ನು ಒಟ್ಟಾಗಿ ಆತನ ಉದ್ದೇಶವನ್ನು ತಡೆಯೊಡ್ಡಲು ಆಗುವದಿಲ್ಲ (ಕೀರ್ತನೆಗಳು 93:1; 95:3; ಯೆರೆಮೀಯಾ 23:20). ದೇವರು ಆತ್ಮಸ್ವರೂಪನು, ಅಂದರೆ ಆತನು ಅದೃಶ್ಯನು (ಯೋಹಾನ 1:18; 4:24). ದೇವರು ತ್ರಯೇಕನು. ಆತನು ಒಂದರಲ್ಲಿ ಮೂರು ಆಗಿದ್ದಾನೆ, ವಿಷಯದಲ್ಲಿ ಒಂದೇ, ಬಲ ಮತ್ತು ಮಹಿಮೆಯಲ್ಲಿ ಸಮಾನನು ಆಗಿದ್ದಾನೆ. ದೇವರು ಸತ್ಯವೇ ಆಗಿದ್ದಾನೆ, ಆತನು ಕೆಡಲಾರದವನು ಮತ್ತು ಸುಳ್ಳು ಹೇಳದವನು ಆಗಿದ್ದಾನೆ (ಕೀರ್ತನೆಗಳು 117:2; 1 ಸಮುವೇಲ 15:29).

ದೇವರು ಪರಿಶುದ್ಧನು, ನೈತಿಕ ಮಲಿನಗೊಳ್ಳುವಿಕೆಯಿಂದ ಪ್ರತ್ಯೇಕವಾಗಿದ್ದಾನೆ ಮತ್ತು ಅದರ ಕಡೆಗೆ ಹಗೆಯುಳ್ಳವನಾಗಿದ್ದಾನೆ. ದೇವರು ದುಷ್ಟತನವನ್ನೆಲ್ಲಾ ನೋಡಿದಾಗ ಅದು ಆತನಿಗೆ ಕೋಪವನ್ನುಂಟುಮಾಡುತ್ತದೆ. ದೇವರು ದಹಿಸುವ ಅಗ್ನಿಗೆ ಉಲ್ಲೇಖವಾಗಿದ್ದಾನೆ (ಯೆಶಾಯ 6:3; ಹಬಕ್ಕೂಕ 1:13; ವಿಮೋಚ 3:2, 4-5; ಇಬ್ರಿಯ 12:29). ದೇವರು ಉದಾರಿಯಾಗಿದ್ದಾನೆ, ಮತ್ತು ಆತನ ಕೃಪೆಯು ಆತನ ಒಳ್ಳೇತನ, ದಯೆ, ಕರುಣೆ, ಮತ್ತು ಪ್ರೀತಿಯನ್ನು ಒಳಗೊಂಡಿದೆ. ಒಂದು ವೇಳೆ ಇವು ದೇವರ ಕೃಪೆಯಿಂದ ಆಗದೆ ಇದ್ದಿದ್ದರೆ, ಆತನ ಪರಿಶುದ್ಧತೆಯು ನಮ್ಮನ್ನು ಆತನ ಪ್ರಸನ್ನತೆಯಿಂದ ತೆಗೆದುಹಾಕುತ್ತವೆ. ಆದರೆ ಸಂಗತಿಯು ಹಾಗಲ್ಲ, ಆತನು ಪ್ರತಿಯೊಬ್ಬರಾದ ನಮ್ಮನ್ನು ವೈಯಕ್ತಿಕವಾಗಿ ತಿಳಿದುಕೊಳ್ಳಲು ಆಶಿಸುತ್ತಾನೆ. (ವಿಮೋಚನ 34:6; ಕೀರ್ತನೆಗಳು 31:19; 1 ಪೇತ್ರ 1:3; ಯೋಹಾನ 3:16, 17:3).

ದೇವರು ಕೊನೆಯಿಲ್ಲದ ಜೀವಿಯಾಗಿರುವುದರಿಂದ, ಯಾವುದೇ ಮಾನವನು ದೇವರ-ಗಾತ್ರದ ಈ ಪ್ರಶ್ನೆಯನ್ನು ಪೂರ್ತಿಯಾಗಿ ಉತ್ತರಿಸಲು ಆಗುವುದಿಲ್ಲ, ಆದರೆ ದೇವರ ವಾಕ್ಯದಿಂದ, ದೇವರು ಯಾರಾಗಿದ್ದಾನೆ ಮತ್ತು ಆತನು ಹೇಗಿರುತ್ತಾನೆಂದು ನಾವು ಹೆಚ್ಚಾಗಿ ಅರ್ಥಮಾಡಿಕೊಳ್ಳಬಹುದು. ನಾವೆಲ್ಲರೂ ಸತತವಾಗಿ ಪೂರ್ಣಹೃದಯದಿಂದ ಆತನನ್ನು ಹುಡುಕುವವರಾಗೋಣ (ಯೆರೆಮಿಯಾ 29:13).

English



ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ದೇವರ ಗುಣಲಕ್ಷಣಗಳು ಯಾವುವು? ದೇವರು ಹೇಗಿದ್ದಾನೆ?
Facebook icon Twitter icon Pinterest icon Email icon
© Copyright Got Questions Ministries