ಪ್ರಶ್ನೆ
ರಕ್ಷಣೆಯು ನಂಬಿಕೆಯಿಂದ ಮಾತ್ರವೋ ಅಥವಾ ನಂಬಿಕೆ ಮತ್ತು ಕ್ರಿಯೆಯಿಂದಲೋ?
ಉತ್ತರ
ಇದು ಬಹುಶಃ ಇಡೀ ಕ್ರೈಸ್ತ ತತ್ವದಲ್ಲಿ ಬಹುಪ್ರಾಮುಖ್ಯವಾದ ಪ್ರಶ್ನೆಯಾಗಿದೆ. ಈ ಪ್ರಶ್ನೆಯು ಸುಧಾರಣೆಗೆ, ಅಂದರೆ ಪ್ರೊಟಸ್ಟೆಂಟ್ ಮತ್ತು ಕ್ಯಾಥೋಲಿಕ್ ನಡುವೆ ಒಡಕಿಗೆ ಕಾರಣವಾಗಿದೆ. ಈ ಪ್ರಶ್ನೆಯು ಸತ್ಯವೇದಾನುಸಾರದ ಕ್ರೈಸ್ತತ್ವ ಮತ್ತು ಬಹಳಷ್ಟು “ಕ್ರೈಸ್ತ” ಕರ್ಮಾಚರಣೆಗಳ ನಡುವೆ ಮುಖ್ಯ ವ್ಯತ್ಯಾಸವಾಗಿದೆ. ರಕ್ಷಣೆಯು ನಂಬಿಕೆಯಿಂದ ಮಾತ್ರವೋ ಅಥವಾ ನಂಬಿಕೆ ಮತ್ತು ಕ್ರಿಯೆಯಿಂದಲೋ? ಯೇಸುವಿನಲ್ಲಿ ಕೇವಲ ನಂಬಿಕೆಯಿಡುವುದರಿಂದ ಮಾತ್ರ ನಾನು ರಕ್ಷಿಸಲ್ಪಟ್ಟಿದ್ದೇನೋ, ಅಥವಾ ನಾನು ಯೇಸುವಿನಲ್ಲಿ ನಂಬಿಕೆಯಿಟ್ಟು ಕೆಲವು ಕಾರ್ಯಗಳನ್ನು ಮಾಡಬೇಕೋ?
ನಂಬಿಕೆಯಿಂದ ಮಾತ್ರವೋ ಅಥವಾ ನಂಬಿಕೆ ಮತ್ತು ಕ್ರಿಯೆಯಿಂದಲೋ ಎಂಬ ಪ್ರಶ್ನೆಯನ್ನು ಸತ್ಯವೇದದ ಕೆಲವು ವಾಕ್ಯಭಾಗಗಳು ಸಂಧಾನಮಾಡಲು ಕಠಿಣಕರವಾಗಿ ಮಾಡಿವೆ. ರೋಮಾ 3:28, 5:1 ಮತ್ತು ಯಾಕೋಬ 2:24 ಜೊತೆಗೆ ಗಲಾತ್ಯ 3:24 ಹೋಲಿಸಿರಿ. ಕೆಲವರು ಪೌಲನು (ರಕ್ಷಣೆಯು ನಂಬಿಕೆಯಿಂದಲೇ ಉಂಟಾಗುತ್ತದೆ) ಮತ್ತು ಯಾಕೋಬನ (ರಕ್ಷಣೆಯು ನಂಬಿಕೆ ಮತ್ತು ಕ್ರಿಯೆಯಿಂದ ಉಂಟಾಗುತ್ತದೆ) ಇವರ ನಡುವೆ ವ್ಯತ್ಯಾಸವನ್ನು ನೋಡುತ್ತಾರೆ. ಪೌಲನು ಮತತತ್ವವಾಗಿ ಹೇಳುವದೇನಂದರೆ ನಂಬಿಕೆಯಿಂದಲೇ ರಕ್ಷಣೆ ಉಂಟಾಗುತ್ತದೆ (ಎಫೆಸ 2:8-9), ಆದರೆ ಯಾಕೋಬನು ರಕ್ಷಣೆಯು ನಂಬಿಕೆ ಮತ್ತು ಕ್ರಿಯೆಯಿಂದ ಉಂಟಾಗುತ್ತದೆ ಎಂದು ಹೇಳುವಂತೆ ಕಾಣುತ್ತದೆ. ಯಾಕೋಬನು ಸರಿಯಾಗಿ ಯಾವುದನ್ನು ಕುರಿತು ಮಾತನಾಡುತ್ತಿದ್ದಾನೆ ಎಂದು ಪರಿಶೀಲಿಸುವುದರ ಮೂಲಕ ಈ ಸ್ಪಷ್ಟ ಸಮಸ್ಯೆಯನ್ನು ಉತ್ತರಿಸಲಾಗಿದೆ. ಯಾವುದೇ ಒಳ್ಳೆಯ ಕ್ರಿಯೆಗಳಿಲ್ಲದೆ ಒಬ್ಬ ವ್ಯಕ್ತಿಯು ಹೊಂದಿಕೊಳ್ಳುವ ನಂಬಿಕೆಯನ್ನು ಯಾಕೋಬನು ಅಲ್ಲಗಳೆಯುತ್ತಿದ್ದಾನೆ (ಯಾಕೋಬ 2:17-18). ಕ್ರಿಸ್ತನಲ್ಲಿರುವ ನಿಜವಾದ ನಂಬಿಕೆಯು ಒಂದು ಬದಲಾದ ಜೀವಿತ ಮತ್ತು ಒಳ್ಳೆಯ ಕ್ರಿಯೆಗಳನ್ನು ಉಂಟುಮಾಡುತ್ತದೆ ಎಂಬ ಅಂಶವನ್ನು ಯಾಕೋಬನು ಒತ್ತಿಹೇಳುತ್ತಿದ್ದಾನೆ (ಯಾಕೋಬ 2:20-26). ರಕ್ಷಣೆಯು ನಂಬಿಕೆ ಮತ್ತು ಕ್ರಿಯೆಗಳಿಂದ ಉಂಟಾಗುತ್ತದೆ ಎಂದು ಯಾಕೋಬನು ಹೇಳುತ್ತಿಲ್ಲ, ಆದರೆ ನಂಬಿಕೆಯಿಂದ ನಿಜವಾಗಿ ರಕ್ಷಣೆ ಹೊಂದಿದ ಆ ವ್ಯಕ್ತಿಯು ತನ್ನ ಜೀವನದಲ್ಲಿ ಒಳ್ಳೆಯ ಕ್ರಿಯೆಗಳನ್ನು ಹೊಂದಿರುತ್ತಾನೆ. ಒಂದು ವೇಳೆ ಒಬ್ಬ ವ್ಯಕ್ತಿಯು ವಿಶ್ವಾಸಿ ಎಂದು ಹೇಳಿಕೊಳ್ಳುವುದಾದರೆ, ಆದರೆ ತನ್ನ ಜೀವಿತದಲ್ಲಿ ಒಳ್ಳೆಯ ಕ್ರಿಯೆಗಳು ಇಲ್ಲದೆ ಇದ್ದರೆ, ಆಗ ಅವರಿಗೆ ಕ್ರಿಸ್ತನಲ್ಲಿ ನಿಜವಾದ ನಂಬಿಕೆ ಇರುವದಿಲ್ಲ (ಯಾಕೋಬ 2:14, 17, 20, 26). ಪೌಲನು ಸಹ ತನ್ನ ಬರಹಗಳಲ್ಲಿ ಇದೇ ಸಂಗತಿಯನ್ನು ಹೇಳುತ್ತಿದ್ದಾನೆ. ವಿಶ್ವಾಸಿಗಳು ತಮ್ಮ ಜೀವಿತಗಳಲ್ಲಿ ಹೊಂದಿರಬೇಕಾದ ಒಳ್ಳೆಯ ಫಲಗಳನ್ನು ಗಲಾತ್ಯ 5:22-23ರಲ್ಲಿ ಪಟ್ಟಿಮಾಡಲಾಗಿದೆ. ನಾವು ಕ್ರಿಯೆಯಿಂದಲ್ಲ, ನಂಬಿಕೆಯಿಂದ ರಕ್ಷಿಸಲ್ಪಟ್ಟಿದ್ದೇವೆ ಎಂದು ನಮಗೆ ಹೇಳಿದ ತಕ್ಷಣವೇ (ಎಫೆಸ 2:8-9), ನಾವು ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕಾಗಿ ಉಂಟುಮಾಡಲ್ಪಟ್ಟಿದ್ದೇವೆ ಎಂದು ಪೌಲನು ನಮಗೆ ತಿಳಿಸುತ್ತಿದ್ದಾನೆ (ಎಫೆಸ 2:10). ಯಾಕೋಬನು ಮಾಡಿದಂತೆ ಮಾರ್ಪಟ್ಟ ಜೀವಿತವನ್ನೇ ಪೌಲನು ನಿರೀಕ್ಷಿಸುತ್ತಿದ್ದಾನೆ: “ಹೀಗಿರಲಾಗಿ, ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾದನು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು” (2 ಕೊರಿಂಥ 5:17). ಯಾಕೋಬ ಮತ್ತು ಪೌಲನು ರಕ್ಷಣೆಯನ್ನು ಕುರಿತು ತಮ್ಮ ಬೋಧನೆಯಲ್ಲಿ ಒಪ್ಪಿಕೊಳ್ಳುತ್ತಿದ್ದಾರೆ. ಅವರು ಒಂದೇ ವಿಷಯವನ್ನು ಬೇರೆ ಬೇರೆ ದೃಷ್ಟಿಕೋನದಿಂದ ನೋಡುತ್ತಿದ್ದಾರೆ. ರಕ್ಷಣೆಯು ನಂಬಿಕೆಯಿಂದ ಮಾತ್ರ ಉಂಟಾಗುತ್ತದೆ ಎಂದು ಪೌಲನು ಸರಳವಾಗಿ ಒತ್ತಿಹೇಳುತ್ತಿದ್ದಾನೆ, ಆದರೆ ಯಾಕೋಬನು ಕ್ರಿಸ್ತನಲ್ಲಿರುವ ನಿಜವಾದ ನಂಬಿಕೆಯು ಒಳ್ಳೆಯ ಕ್ರಿಯೆಗಳನ್ನು ಉಂಟುಮಾಡುತ್ತದೆ ಎಂಬ ಸಂಗತಿಯನ್ನು ಒತ್ತಿಹೇಳುತ್ತಿದ್ದಾನೆ.
English
ರಕ್ಷಣೆಯು ನಂಬಿಕೆಯಿಂದ ಮಾತ್ರವೋ ಅಥವಾ ನಂಬಿಕೆ ಮತ್ತು ಕ್ರಿಯೆಯಿಂದಲೋ?