settings icon
share icon
ಪ್ರಶ್ನೆ

ನಾಲ್ಕು ಆತ್ಮೀಕ ನಿಯಮಗಳು ಯಾವುವು?

ಉತ್ತರ


ನಾಲ್ಕು ಆತ್ಮೀಕ ನಿಯಮಗಳು ಯೇಸು ಕ್ರಿಸ್ತನಲ್ಲಿರುವ ನಂಬಿಕೆಯ ಮೂಲಕ ಒದಗಿರುವ ರಕ್ಷಣೆಯ ಶುಭವಾರ್ತೆಯನ್ನು ಹಂಚಿಕೊಳ್ಳುವ ರೀತಿಯಾಗಿವೆ. ಇದು ಸುವಾರ್ತೆಯಲ್ಲಿರುವ ಪ್ರಾಮುಖ್ಯವಾದ ಮಾಹಿತಿಯನ್ನು ನಾಲ್ಕು ಅಂಶಗಳಾಗಿ ವ್ಯವಸ್ಥಿತಗೊಳಿಸಲು ಸರಳವಾದ ರೀತಿಯಾಗಿದೆ.

ನಾಲ್ಕು ಆತ್ಮೀಕ ನಿಯಮಗಳಲ್ಲಿ ಮೊದಲನೆಯದು, “ದೇವರು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನಿಮ್ಮ ಜೀವಿತಕ್ಕಾಗಿ ಅದ್ಬುತವಾದ ಯೋಜನೆಯನ್ನು ಹೊಂದಿದ್ದಾನೆ.” ಯೋಹಾನ 3:16 ನಮಗೆ ಹೀಗೆ ಹೇಳುತ್ತದೆ, “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” ಯೋಹಾನ 10:10 ಯೇಸು ಬಂದ ಕಾರಣವನ್ನು ನಮಗೆ ತಿಳಿಸುತ್ತದೆ, “ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿ ಇರಬೇಕೆಂತಲೂ ಬಂದೆನು.” ದೇವರ ಪ್ರೀತಿಯಿಂದ ನಮ್ಮನ್ನು ತಡೆಯುತ್ತಿರುವುದು ಯಾವುದು? ಸಮೃದ್ಧಿಯಾದ ಜೀವಿತವನ್ನು ಹೊಂದಿಕೊಳ್ಳಲು ನಮ್ಮನ್ನು ತಡೆಯುತ್ತಿರುವ ಸಂಗತಿ ಯಾವುದು?

ನಾಲ್ಕು ಆತ್ಮೀಕ ನಿಯಮಗಳಲ್ಲಿ ಎರಡನೆಯದು, “ಮಾನವಿಯತೆಯು ಪಾಪದಿಂದ ಕಲೆಗೊಂಡಿದೆ, ಆದ್ದರಿಂದ ದೇವರಿಂದ ಅಗಲಿಸಲ್ಪಟ್ಟಿದೆ. ಇದರ ಪರಿಣಾಮವಾಗಿ, ನಮ್ಮ ಜೀವಿತಕ್ಕಾಗಿ ಇರುವ ದೇವರ ಅದ್ಭುತವಾದ ಯೋಜನೆಯನ್ನು ನಾವು ತಿಳಿದುಕೊಳ್ಳಲು ಆಗುವುದಿಲ್ಲ.” ರೋಮಾ 3:23 ಈ ವಿಷಯವನ್ನು ಖಚಿತಪಡಿಸುತ್ತದೆ, “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” ರೋಮಾ 6:23, “ಪಾಪವು ಕೊಡುವ ಸಂಬಳ ಮರಣ” ಎಂದು ಪಾಪದ ಪರಿಣಾಮವನ್ನು ಹೇಳುತ್ತದೆ. ನಾವು ಆತನೊಂದಿಗೆ ಅನ್ಯೋನ್ಯತೆಯನ್ನು ಹೊಂದಿಕೊಳ್ಳಬೇಕೆಂದು ದೇವರು ನಮ್ಮನ್ನು ಸೃಷ್ಟಿಮಾಡಿದನು. ಹೇಗಿದ್ದರೂ, ಮನುಷ್ಯತ್ವವು ಈ ಲೋಕದೊಳಗೆ ಪಾಪವನ್ನು ತಂದಿತು, ಇದರ ನಿಮಿತ್ತ ದೇವರಿಂದ ದೂರವಾಗಿದ್ದಾನೆ. ನಾವು ಆತನೊಂದಿಗೆ ಹೊಂದಿಕೊಳ್ಳಬೇಕೆಂದು ದೇವರು ಉದ್ದೇಶಿಸಿದ ಸಂಬಂಧವನ್ನು ನಾವು ಹಾಳುಮಾಡಿದ್ದೇವೆ. ಇದಕ್ಕೆ ಪರಿಹಾರವೇನು?

ನಾಲ್ಕು ಆತ್ಮೀಕ ನಿಯಮಗಳಲ್ಲಿ ಮೂರನೆಯದು, “ನಮ್ಮ ಪಾಪಕ್ಕೆ ದೇವರ ಅನುಗ್ರಹವು ಯೇಸು ಕ್ರಿಸ್ತನೇ ಆಗಿದ್ದಾನೆ. ಯೇಸು ಕ್ರಿಸ್ತನ ಮೂಲಕ, ನಮ್ಮ ಪಾಪಗಳಿಗೆ ಕ್ಷಮಾಪಣೆಯನ್ನು ಹೊಂದಿಕೊಂಡು ದೇವರೊಂದಿಗೆ ಸರಿಯಾದ ಸಂಬಂಧವನ್ನು ಪುನರ್ ಸ್ಥಾಪಿಸಬಹುದು.” “ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ.” ನಾವು ರಕ್ಷಣೆ ಹೊಂದುವುದಕ್ಕಾಗಿ ಏನನ್ನು ತಿಳಿದುಕೊಳ್ಳಬೇಕು ಮತ್ತು ನಂಬಬೇಕು ಎಂದು 1 ಕೊರಿಂಥ 15:3-4 ನಮಗೆ ತಿಳಿಸುತ್ತದೆ, “….ಅದೇನಂದರೆ ಶಾಸ್ತ್ರದಲ್ಲಿ ಮುಂತಿಳಿಸಿರುವ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳ ನಿವಾರಣೆಗಾಗಿ ಸತ್ತನು; ಹೂಣಲ್ಪಟ್ಟನು; ಶಾಸ್ತ್ರದ ಪ್ರಕಾರವೇ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು.” ಯೋಹಾನ 14:6ರಲ್ಲಿ , ನಾನೇ ರಕ್ಷಣೆಗೆ ಒಂದೇ ಮಾರ್ಗವೆಂದು ಯೇಸು ತನನ್ನು ಕುರಿತು ಪ್ರಕಟಿಸುತ್ತಾನೆ, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.” ನಾನು ರಕ್ಷಣೆಯ ಈ ಅದ್ಭುತಕರವಾದ ವರವನ್ನು ಪಡೆದುಕೊಳ್ಳುವದು ಹೇಗೆ?

ನಾಲ್ಕು ಆತ್ಮೀಕ ನಿಯಮಗಳಲ್ಲಿ ನಾಲ್ಕನೆಯದು, “ರಕ್ಷಣೆಯ ವರವನ್ನು ಹೊಂದಿಕೊಳ್ಳಲು ಮತ್ತು ನಮ್ಮ ಜೀವಿತಗಳಿಗಾಗಿ ದೇವರ ಅದ್ಭುತವಾದ ಯೋಜನೆಯನ್ನು ತಿಳಿದುಕೊಳ್ಳಲು, ಯೇಸು ಕ್ರಿಸ್ತನೇ ರಕ್ಷಕನೆಂದು ನಮ್ಮ ನಂಬಿಕೆಯನ್ನು ಆತನಲ್ಲಿ ಇಡಬೇಕಾಗಿದೆ.” ಇದನ್ನು ಯೋಹಾನ 1:12 ನಮಗೆ ಹೀಗೆ ವಿವರಿಸುತ್ತದೆ, “ಯಾರಾರು ಆತನನ್ನು ಅಂಗೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ, ಅವರಿಗೆ ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು.” ಅಪೊಸ್ತಲರ ಕೃತ್ಯಗಳು 16:31 ಇದನ್ನು ಬಹಳ ಸ್ಪಷ್ಟವಾಗಿ ಹೀಗೆ ಹೇಳುತ್ತದೆ, “ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆಹೊಂದುವಿ!” ನಾವು ಯೇಸು ಕ್ರಿಸ್ತನಲ್ಲಿ ಮಾತ್ರ ಇಟ್ಟ ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆಹೊಂದಬಹುದು (ಎಫೆಸ 2:8-9).

ಯೇಸು ಕ್ರಿಸ್ತನು ನಿಮ್ಮ ರಕ್ಷಕನೆಂದು ನೀವು ನಂಬಿಕೆಯಿಡಲು ಬಯಸುವುದಾದರೆ, ಈ ಕೆಳಗಿನ ವಾಕ್ಯಗಳನ್ನು ದೇವರಿಗೆ ಹೇಳಿರಿ. ಈ ಮಾತುಗಳನ್ನು ಹೇಳುವುದರಿಂದ ಇವು ನಿಮ್ಮನ್ನು ರಕ್ಷಿಸುವುದಿಲ್ಲ, ಆದರೆ ಕ್ರಿಸ್ತನಲ್ಲಿ ನಂಬಿಕೆಯಿಡುವುದರಿಂದ ನೀವು ರಕ್ಷಣೆಹೊಂದುವಿರಿ! ಆತನಲ್ಲಿಟ್ಟಿರುವ ನಿಮ್ಮ ನಂಬಿಕೆಯನ್ನು ವ್ಯಕ್ತಪಡಿಸಲು ಮತ್ತು ನಿಮಗೆ ರಕ್ಷಣೆಯನ್ನು ಒದಗಿಸಿದಕ್ಕಾಗಿ ಆತನಿಗೆ ಕೃತಜ್ಞತೆ ಸಲ್ಲಿಸಲು ಈ ಪ್ರಾರ್ಥನೆಯು ಸರಳವಾದ ರೀತಿಯಾಗಿದೆ. “ದೇವರೇ, ನಾನು ನಿನಗೆ ವಿರುದ್ಧವಾಗಿ ಪಾಪಮಾಡಿದ್ದೇನೆ ಮತ್ತು ನಾನು ಶಿಕ್ಷೆಗೆ ಅರ್ಹನಾಗಿದ್ದೇನೆಂದು ತಿಳಿದಿದ್ದೇನೆ. ಆದರೆ ನನಗೆ ಆಗ ಬೇಕಾದ ಶಿಕ್ಷೆಯನ್ನು ಯೇಸು ಕ್ರಿಸ್ತನು ತೆಗೆದುಕೊಂಡನು, ಇದರಿಂದ ಆತನಲ್ಲಿಟ್ಟಿರುವ ನಂಬಿಕೆಯ ಮೂಲಕ ನನಗೆ ಕ್ಷಮಾಪಣೆ ಉಂಟಾಗಬಹುದು. ನಾನು ರಕ್ಷಣೆಗಾಗಿ ನಿನ್ನಲ್ಲಿ ನನ್ನ ಭರವಸೆಯಿಡುತ್ತೇನೆ. ನಿನ್ನ ಅದ್ಬುತವಾದ ಕೃಪೆ ಮತ್ತು ಕ್ಷಮಾಪಣೆಗಾಗಿ ಹಾಗೂ ನಿತ್ಯಜೀವದ ವರಕ್ಕಾಗಿ ನಿನಗೆ ವಂದನೆ! ಆಮೇನ್!”

ನೀವು ಇಲ್ಲಿ ಓದಿದವುಗಳ ನಿಮಿತ್ತ ಕ್ರಿಸ್ತನಿಗಾಗಿ ತೀರ್ಮಾನ ಮಾಡಿಕೊಂಡಿದ್ದೀರಾ? ಹಾಗಾದರೆ, “ನಾನು ಇಂದು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿರಿ.
English



ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ನಾಲ್ಕು ಆತ್ಮೀಕ ನಿಯಮಗಳು ಯಾವುವು?
Facebook icon Twitter icon Pinterest icon Email icon
© Copyright Got Questions Ministries