ಪ್ರಶ್ನೆ
ಸಲಿಂಗಕಾಮವನ್ನು ಕುರಿತು ಸತ್ಯವೇದವು ಏನು ಹೇಳುತ್ತದೆ? ಸಲಿಂಗಕಾಮವು ಪಾಪವಾಗಿದೆಯಾ?
ಉತ್ತರ
ಸಲಿಂಗಕಾಮದ ಚಟುವಟಿಕೆಯು ಪಾಪವೆಂದು ಸತ್ಯವೇದವು ನಮಗೆ ಸತತವಾಗಿ ಹೇಳುತ್ತಿದೆ (ಆದಿಕಾಂಡ 19:1-13; ಯಾಜಕಕಾಂಡ 18:22; ರೋಮಾ 1:26-27; 1 ಕೊರಿಂಥ 6:9). ಸಲಿಂಗಕಾಮವು ದೇವರನ್ನು ನಿರಾಕರಿಸುವುದು ಮತ್ತು ಅವಿಧೇಯರಾಗುವುದಾಗಿದೆ ಎಂದು ರೋಮಾ 1:26-27 ನಿರ್ಧಿಷ್ಟವಾಗಿ ಬೋಧಿಸುತ್ತದೆ. ಜನರು ಪಾಪ ಮಾಡಿ ಅವಿಶ್ವಾಸದಲ್ಲಿ ಮುಂದುವರೆದಾಗ, ದೇವರಿಂದ ದೂರವಾಗಿರುವ ಜೀವಿತದಿಂದ ಉಂಟಾಗುವ ನಿಷ್ಪಲತೆ ಮತ್ತು ನಿರಾಶೆಯನ್ನು ತೋರಿಸಲು ದೇವರು ಅವರಿಗೆ ಇನ್ನು ಹೆಚ್ಚು ದುಷ್ಟತನದ ಮತ್ತು ನೀತಿಭ್ರಷ್ಠತನದ ಪಾಪವನ್ನು “ಅವರಿಗೆ ಒಪ್ಪಿಸುವನು.” 1 ಕೊರಿಂಥ 6:9ರಲ್ಲಿ ಸಲಿಂಗಕಾಮ “ಅಪರಾಧಿಗಳು” ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ ಎಂದು ಹೇಳುತ್ತದೆ.
ದೇವರು ಒಬ್ಬ ವ್ಯಕ್ತಿಯನ್ನು ಸಲಿಂಗಕಾಮ ಆಶೆಗಳಿಂದ ಉಂಟುಮಾಡುವದಿಲ್ಲ. ಜನರು ಪಾಪದ ನಿಮಿತ್ತ (ರೋಮಾ 1:24-27) ಮತ್ತು ಅಂತಿಮವಾಗಿ ಅವರ ಸ್ವಂತ ಆಯ್ಕೆಯ ನಿಮಿತ್ತ ಸಲಿಂಗಕಾಮಿಗಳಾಗುವರೆಂದು ಸತ್ಯವೇದವು ನಮಗೆ ಹೇಳುತ್ತದೆ. ಕೆಲವು ಜನರು ಗಲಬೆ ಮತ್ತು ಇತರೆ ಪಾಪಗಳ ಪ್ರವೃತ್ತಿಯಿಂದ ಹುಟ್ಟಿದಂತೆಯೇ, ಒಬ್ಬ ವ್ಯಕ್ತಿಯು ಸಲಿಂಗಕಾಮದ ಹೆಚ್ಚಿನ ಭಾವನೆಗಳಿಂದ ಹುಟ್ಟಿರಬಹುದು. ಇದು ಪಾಪಮಯ ಆಶೆಗಳಿಗೆ ಒಪ್ಪಿಸಿಕೊಡುವುದರ ಮೂಲಕ ಒಬ್ಬ ವ್ಯಕ್ತಿಯು ಪಾಪ ಮಾಡಲು ಆಯ್ಕೆಮಾಡಿಕೊಳ್ಳುವದನ್ನು ಕ್ಷಮಿಸುವದಿಲ್ಲ. ಒಬ್ಬ ವ್ಯಕ್ತಿಯು ಕೋಪ/ಕ್ರೋಧಕ್ಕೆ ಹೆಚ್ಚಿನ ಭಾವನೆಗಳಿಂದ ಹುಟ್ಟಿರುವುದಾದರೆ, ಆ ಆಶೆಗಳಿಗೆ ಒಪ್ಪಿಸಿಕೊಡುವುದು ಅವನಿಗೆ ಸರಿಯಾಗಿರುತ್ತದೋ? ಖಂಡಿತವಾಗಿ ಇಲ್ಲ! ಸಲಿಂಗಕಾಮದೊಂದಿಗೂ ಇದು ಸತ್ಯವಾಗಿರುತ್ತದೆ.
ಹೇಗಾದರೂ, ಸತ್ಯವೇದವು ಸಲಿಂಗಕಾಮವನ್ನು ಬೇರೆಯವುಗಳಿಗಿಂತ “ದೊಡ್ಡ” ಪಾಪವೆಂದು ವಿವರಿಸುವದಿಲ್ಲ. ಎಲ್ಲಾ ಪಾಪಗಳು ದೇವರ ಮುಂದೆ ಅಪರಾಧವಾಗಿದೆ. 1 ಕೊರಿಂಥ 6:9-10ರಲ್ಲಿ ಪಟ್ಟಿಮಾಡಿರುವ ಅನೇಕವುಗಳಲ್ಲಿ ಒಂದು ಸಂಗತಿ ಸಲಿಂಗಕಾಮವು ಸಹ ಆಗಿದೆ, ಇದು ಒಬ್ಬ ವ್ಯಕ್ತಿಯನ್ನು ದೇವರ ರಾಜ್ಯದಿಂದ ದೂರವಿಡುತ್ತದೆ. ಸತ್ಯವೇದದ ಪ್ರಕಾರ, ವ್ಯಭಿಚಾರರು, ವಿಗ್ರಹಾರಾಧಕರು, ಕೊಲೆಗಾರರು, ಕದಿಯುವವರು ಮುಂತಾದವರಿಗೆ ಇದ್ದಂತೆಯೇ ಸಲಿಂಗಕಾಮಿಗಳಿಗೂ ದೇವರ ಕ್ಷಮಾಪಣೆಯು ದೊರಕುತ್ತದೆ. ಸಲಿಂಗಕಾಮಿಗಳನ್ನು ಒಳಗೊಂಡು ತಮ್ಮ ರಕ್ಷಣೆಗಾಗಿ ಯೇಸುಕ್ರಿಸ್ತನಲ್ಲಿ ನಂಬಿಕೆಯಿಡುವ ಎಲ್ಲರಿಗೂ ಪಾಪದ ಮೇಲೆ ಜಯಿಸಲು ಶಕ್ತಿಯನ್ನು ಸಹ ದೇವರು ವಾಗ್ಧಾನಮಾಡಿದ್ದಾರೆ (1 ಕೊರಿಂಥ 6:11; 2 ಕೊರಿಂಥ 5:17; ಫಿಲಿಪ್ಪಿ 4:13).
English
ಸಲಿಂಗಕಾಮವನ್ನು ಕುರಿತು ಸತ್ಯವೇದವು ಏನು ಹೇಳುತ್ತದೆ? ಸಲಿಂಗಕಾಮವು ಪಾಪವಾಗಿದೆಯಾ?