settings icon
share icon
ಪ್ರಶ್ನೆ

ದೇವರು ವಾಸ್ತವವೋ? ದೇವರು ವಾಸ್ತವವೆಂದು ನಾನು ಖಚಿತವಾಗಿ ತಿಳಿದುಕೊಳ್ಳುವದು ಹೇಗೆ?

ಉತ್ತರ


ದೇವರು ವಾಸ್ತವವೆಂದು ನಮಗೆ ಗೊತ್ತು ಯಾಕೆಂದರೆ ಆತನು ತನ್ನನ್ನು ತಾನೇ ನಮಗೆ ಮೂರು ವಿಧಗಳಲ್ಲಿ ವ್ಯಕ್ತಪಡಿಸಿಕೊಂಡಿದ್ದಾನೆ: ಸೃಷ್ಟಿಯಲ್ಲಿ, ತನ್ನ ವಾಕ್ಯದಲ್ಲಿ ಮತ್ತು ತನ್ನ ಮಗನಾದ ಯೇಸು ಕ್ರಿಸ್ತನಲ್ಲಿ.

ದೇವರ ಅಸ್ತಿತ್ವಕ್ಕೆ ಆಧಾರ ಆತನ ಸೃಷ್ಟಿಯಾಗಿರುತ್ತದೆ. "ಹೇಗೆಂದರೆ ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತದೆ" (ರೋಮಾ 1:20). "ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ ಗಗನವು ಆತನ ಕೈ ಕೆಲಸವನ್ನು ತಿಳಿಸುತ್ತದೆ" (ಕೀರ್ತನೆ 19:1).

ಒಂದು ಹೊಲದ ಮಧ್ಯದಲ್ಲಿ ಒಂದು ಕೈ ಗಡಿಯಾರ ನಿಮಗೆ ಸಿಗುವದಾದರೆ ಅದು ಅಸ್ತಿತ್ವದಲ್ಲಿ ಇಲ್ಲದೆ ನಿಮಗೆ ಸುಮ್ಮನೇ "ಕಾಣಿಸಿಕೊಂಡಿತೆಂದು" ನೀವು ಭಾವಿಸದೆ ಅದು ಎಂದಿನಿಂದಲೋ ಅಸ್ತಿತ್ವದಲ್ಲಿತ್ತೆಂದು ಭಾವಿಸುತ್ತೀರಿ. ಆ ಗಡಿಯಾರದ ರಚನೆಯ ಆಧಾರದ ಮೆರೆಗೆ ಅದಕ್ಕೊಬ್ಬ ರಚನೆಗಾರನು ಇದ್ದಾನೆಂತಲೂ ಭಾವಿಸುತ್ತೀರಿ. ಆದರೆ ನಮ್ಮ ಸುತ್ತಲೂ ಇರುವ ಲೋಕದಲ್ಲಿ ಎಷ್ಟೋ ಶ್ರೇಷ್ಠ ರಚನೆ ಮತ್ತು ನಿಖರತೆ ಇರುವಂತದ್ದಾಗಿದೆ. ನಮ್ಮ ಸಮಯದ ಅಳತೆ ಕೈಗಡಿಯಾದ ಮೇಲೆ ಆಧಾರವಾಗುವದಿಲ್ಲ ಹೊರತು ದೇವರ ಕೈಕೆಲಸದ ಮೇಲೆ ಆಧಾರವಾಗಿದೆ - ಸತತವಾಗಿ ಭೂಮಿ ತಿರುಗಾಡುವುದು (ಮತ್ತು ಸೀಸಿಯಮ್ - 133 ಪರಮಾಣುವಿನ ವಿಕರಣಶೀಲ ಗುಣಗಳು). ಶ್ರೇಷ್ಠ ರಚನೆಯನ್ನು ಜಗತ್ತು ತೋರ್ಪಡಿಸುತ್ತದೆ ಹಾಗೂ ಇದು ಒಬ್ಬ ಶ್ರೇಷ್ಠ ರಚನೆಗಾರನಿಗಾಗಿ ವಾದಿಸುತ್ತದೆ.

ನೀವು ಒಂದು ಗುಟ್ಟಿನ ಸಂದೇಶವನ್ನು ಪಡೆದುಕೊಳ್ಳುವದಾದರೆ, ಆ ಗುಟ್ಟನ್ನು ರಟ್ಟುಮಾಡಲು ನೀವು ಪ್ರಯತ್ನಿಸುತ್ತೀರಿ. ಒಬ್ಬ ಬುದ್ಧಿವಂತ ಆ ಸಂದೇಶವನ್ನು ಒಂದು ಗುಟ್ಟನ್ನಾಗಿ ರಚಿಸಿ ಕಳುಹಿಸಿದನೆಂಬ ಪರಿಕಲ್ಪನೆ ನಿಮಗಿರುತ್ತದೆ. ನಮ್ಮ ದೇಹದ ಪ್ರತಿಯೊಂದುಕೋಶದಲ್ಲಿ ನಮಗಿರುವ ಡಿ.ಎನ್.ಎ "ಕೋಡ್" ಎಷ್ಟು ಸಂಕೀರ್ಣವಾಗಿವೆ? ಆ ಸಂಕೀರ್ಣತೆ ಹಾಗೂ ಡಿ.ಎನ್.ಎ ಉದ್ದೇಶವು ಕೋಡ್ ಬರೆದಿರುವ ಒಬ್ಬ ಬುದ್ಧಿವಂತನನ್ನು ವಾದಿಸುವುದಿಲ್ಲವೋ?

ದೇವರು ಒಂದು ಸಂಕೀರ್ಣತೆಯನ್ನುಂಟುಮಾಡಿ ಸ್ವಾಭಾವಿಕವಾದ ಲೋಕವನ್ನು ಅಂದವಾಗಿ ತಿರುಗಿಸುವದು ಮಾತ್ರವಲ್ಲ; ಆತನು ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿ ನಿತ್ಯತ್ವದ ಒಂದು ಪರಿಜ್ಞಾನವನ್ನೂ ಸಹ ಸ್ಥಾಪಿಸಿದ್ದಾನೆ (ಪ್ರಸಂಗಿ 3:1). ಮನುಷ್ಯ ಜಾತಿಗೆ ಜೀವನವು ಕಣ್ಣೆದುರಿಗೆ ಕಾಣುವದಕ್ಕಿಂತಲೂ ಹೆಚ್ಚಾಗಿ ಉಂಟೆಂಬುದು ಹಾಗೂ ಭೂಲೋಕದ ದಿನಚರಿಗಿಂತಲೂ ಒಂದು ಉನ್ನತವಾದ ಅಸ್ತಿತ್ವ ಉಂಟೆಂಬ ಒಂದು ಸಹಜವಾದ ಗ್ರಹಿಕೆಯಿದೆ. ನಿತ್ಯತ್ವದ ನಮ್ಮ ಪರಿಜ್ಞಾನ ಕನಿಷ್ಠ ಪಕ್ಷ ಎರಡು ರೀತಿಯಲ್ಲಿ ತೋರ್ಪಡಿಸುತ್ತದೆ: ಅವು ಯಾವವೆಂದರೆ, ನ್ಯಾಯಪ್ರಮಾಣ-ಉಂಟಾದದ್ದು ಮತ್ತು ಆರಾಧನೆ.

ಇಡೀ ಚರಿತ್ರೆಯಲ್ಲಿ ಪ್ರತಿಯೊಂದು ನಾಗರಿಕತೆಯು ಕೆಲವೊಂದು ನಿರ್ಧಿಷ್ಟ ನೈತಿಕ ನ್ಯಾಯಪ್ರಮಾಣಗಳಿಗೆ ಬೆಲೆಕೊಟ್ಟಿದೆ, ಅವು ಅಶ್ಚರ್ಯಕರವಾಗಿ ಒಂದು ಸಂಸ್ಕೃತಿ ನಂತರ ಇನ್ನೊಂದು ಸಂಸ್ಕೃತಿಗೆ ಹೊಂದಾಣಿಕೆಯಾಗಿದ್ದವು. ಉದಾಹರಣೆಗೆ, ಪ್ರೀತಿಯು ಆದರ್ಶ ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದಿದೆ, ಆದರೆ ಜೊತೆಗೆ ಮಲಗುವುದನ್ನು ವಿಶ್ವಮಟ್ಟದಲ್ಲಿ ಖಂಡಿಸಲಾಗಿದೆ. ಈ ಸರಳವಾದ ನೈತಿಕತೆಯು - ಹೀಗೆ ತಪ್ಪು ಸರಿ ಎಂಬ ವಿಶ್ವಮಟ್ಟದ ತಿಳುವಳಿಕೆಯು - ಇಂಥಾ ವಿವೇಚನೆ ಕೊಟ್ಟ ಆ ಪ್ರಧಾನ ನೀತಿವಂತನಿಗೆ ಇದು ಸೂಚಿಸುತ್ತದೆ.

ಅದೇ ರೀತಿಯಲ್ಲಿ, ಪ್ರಪಂಚದಾದ್ಯಂತ ಜನರು ಯಾವುದೇ ಸಂಸ್ಕೃತಿಯವರಾಗಲಿ, ಆರಾಧನೆ ಎಂಬ ಒಂದು ಪದ್ದತಿಯನ್ನು ಬೆಳೆಸಿಕೊಂಡಿದ್ದಾರೆ. ಆರಾಧನೆಯ ಉದ್ದೇಶ ಬೇರೆ ಇರಬಹುದು, ಆದರೆ ಒಂದು "ಉನ್ನತ ಬಲವು" ಹೇಳಲಾಗದಂತಹ ಮನುಷ್ಯನ ಒಂದು ಭಾಗವಾಗಿದೆ. ನಮ್ಮ ಆರಾಧನೆಯ ಒಲವು ದೇವರು ನಮ್ಮನ್ನು "ತನ್ನ ಸ್ವಂತ ಸ್ವರೂಪದಲ್ಲಿ" (ಆದಿಕಾಂಡ 1:27) ಸೃಷ್ಟಿಮಾಡಿದ್ದಾನೆಂಬ ಸತ್ಯದೊಂದಿಗೆ ಒಡಂಬಡುತ್ತದೆ.

ದೇವರು ತನ್ನ ವಾಕ್ಯದಿಂದಲೂ ಸಹ ನಮಗೆ ವ್ಯಕ್ತಪಡಿಸಿಕೊಂಡಿದ್ದಾನೆ, ಅದಕ್ಕೆ ಸತ್ಯವೇದ ಎಂದು ಕರೆಯಲಾಗುತ್ತದೆ. ಸತ್ಯವೇದದ ಎಲ್ಲಾ ವಚನಗಳಲ್ಲಿ ದೇವರ ಅಸ್ತಿತ್ವವು ಸ್ವ-ಆಧಾರಿತ ಕಾರ್ಯ ಎಂಬಂತೆ ಪರಿಗಣಿಸಲಾಗಿದೆ (ಆದಿಕಾಂಡ 1:1; ವಿಮೋಚನಕಾಂಡ 3:14). ಒಬ್ಬ ವ್ಯಕ್ತಿ ಒಂದು ಆತ್ಮ ಚರಿತ್ರೆ ಬೆರೆಯುವಾಗ, ತನ್ನ ಸ್ವಂತ ಅಸ್ತಿತ್ವವನ್ನು ಸಾಭೀತುಪಡಿಸುವ ಪ್ರಯತ್ನದಲ್ಲಿ ಸಮಯವನ್ನು ವ್ಯರ್ಥಮಾಡುವದಿಲ್ಲ. ಹಾಗೆಯೇ ದೇವರು ಸಹ ತನ್ನ ಪುಸ್ತಕದಲ್ಲಿ ತನ್ನ ಅಸ್ತಿತ್ವವನ್ನು ಸಾಭೀತುಪಡಿಸಲು ಸಮಯವನ್ನು ವ್ಯರ್ಥಮಾಡುವದಲ್ಲ. ಜೀವಿತವನ್ನು-ಬದಲಾಯಿಸುವ ಸಹಜಗುಣ ಹೊಂದಿರುವ ಸತ್ಯವೇದವು, ಅದರ ಪ್ರಮಾಣಿಕತೆ ಅದರ ಬರವಣಿಗೆಯಲ್ಲಿನ ಮಹಾತ್ಕಾರ್ಯಗಳು ಅದನ್ನು ಬಹುನಿಕಟತೆಯಿಂದ ಪರಿಶೀಲಿಸುವ ಹಾಗೆ ದೃಢಪಡಿಸುತ್ತವೆ.

ಮೂರನೇ ವಿಧದಲ್ಲಿ ದೇವರು ತನ್ನ ಮಗನಾದ ಯೇಸು ಕ್ರಿಸ್ತನ ಮುಖಾಂತರ ವ್ಯಕ್ತಪಡಿಸಿಕೊಂಡನು (ಯೋಹಾನ 14:6-11). "ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರ ಬಳಿಯಲ್ಲಿತ್ತು; ಆ ವಾಕ್ಯವು ದೇವರಾಗಿತ್ತು. ಆ ವಾಕ್ಯವೆಂಬವನು ಆದಿಯಲ್ಲಿ ದೇವರ ಬಳಿಯಲ್ಲಿದ್ದನು. ಆ ವಾಕ್ಯವೆಂಬವನು ನರಾವತಾರ ಎತ್ತಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು; ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು" (ಯೋಹಾನ 1:1,14; ಕೊಲೊಸ್ಸೆ 2:9ನ್ನು ಸಹ ನೋಡಿರಿ).

ಯೇಸು ತನ್ನ ಅದ್ಭುತವಾದ ಜೀವಿತದಲ್ಲಿ, ಆತನು ಹಳೆ ಒಡಂಬಡಿಕೆಯ ಎಲ್ಲಾ ನ್ಯಾಯಪ್ರಮಾಣವನ್ನು ಕೈಕೊಂಡನು ಹಾಗೂ ಮೆಸ್ಸಿಯನ್ನು ಕುರಿತಾದ ಎಲ್ಲಾ ಪ್ರವಾದನೆಗಳನ್ನೂ ಸಹ ನೆರವೇರಿಸಿದನು (ಮತ್ತಾಯ 5:17). ಆತನು ಅಸಂಖ್ಯಾತ ದಯೆಯ ಕಾರ್ಯಗಳನ್ನು ಮಾಡಿದನು ಹಾಗೂ ಆತನ ಸಂದೇಶಗಳಿಗೆ ಬಹಿರಂಗ ಮಹಾತ್ಕಾರ್ಯಗಳು ಹಿಂಬಾಲಿಸಿದವು ಮತ್ತು ತನ್ನ ದೈವತ್ವದ ಬಗ್ಗೆ ಸಾಕ್ಷಿಯನ್ನು ಸಹ ಕೊಟ್ಟನು (ಯೋಹಾನ 21:24-25). ಅನಂತರ ಆತನ ಶಿಲುಬೆಯ ಮರಣದ ಮೂರು ದಿನಗಳ ನಂತರ ಆತನು ಸತ್ತವರೊಳಗಿಂದ ಜೀವಂತನಾಗಿ ಎದ್ದು ಬಂದನು, ಇದು ನೂರಾರು ಪ್ರತ್ಯಕ್ಷದರ್ಶಿಗಳಿಂದ ದೃಢಿಕರಿಸಿದ ಒಂದು ಕಾರ್ಯವಾಗಿತ್ತು (1 ಕೊರಿಂಥ 15:6). ಯೇಸು ಯಾರು ಎಂಬುದನ್ನು ಕುರಿತು ಐತಿಹಾಸಿಕ ದಾಖಲೆಗಳು ಸಮೃದ್ಧಿಯಾದ ಸಾಕ್ಷಾಧಾರಗಳಿಂದ ತುಂಬಿಕೊಂಡಿವೆ. ಪೌಲನು ಹೇಳಿದ ಹಾಗೆ, "ಇದು ಮೂಲೆಯಲ್ಲಿ ನಡೆದ ಕಾರ್ಯವಲ್ಲ" (ಅಪೊಸ್ತಲರ ಕೃತ್ಯಗಳು 26:26).

ದೇವರನ್ನು ಕುರಿತು ತಮ್ಮ ಸ್ವಂತ ವಿಚಾರಗಳಿರುವ ಸಂದೇಹವಾದಿಗಳು ಯಾವಾಗಲೂ ಇದ್ದೇ ಇರುತ್ತಾರೆ ಹಾಗೂ ಅದಕ್ಕೆ ತಕ್ಕ ಸಾಕ್ಷ್ಯಾಧಾರಗಳನ್ನೂ ಸಹ ಅವರು ಓದುತ್ತಾರೆಂದು ನಾವು ಗ್ರಹಿಸಿಕೊಳ್ಳುತ್ತೇವೆ. ಕೆಲವರಿಗೆ ಯಾವ ಸಾಕ್ಷಿಗಳು ಸಹ ಮನವರಿಕೆಯನ್ನುಂಟುಮಾಡುವದಿಲ್ಲ (ಕೀರ್ತನೆ 14:1). ಇದೆಲ್ಲವು ನಂಬಿಕೆಗೆ ಅಗತ್ಯವಿರುತ್ತದೆ (ಇಬ್ರಿಯರಿಗೆ 11:6).

English



ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ದೇವರು ವಾಸ್ತವವೋ? ದೇವರು ವಾಸ್ತವವೆಂದು ನಾನು ಖಚಿತವಾಗಿ ತಿಳಿದುಕೊಳ್ಳುವದು ಹೇಗೆ?
Facebook icon Twitter icon Pinterest icon Email icon
© Copyright Got Questions Ministries