ಪ್ರಶ್ನೆ
ಮರಣದ ನಂತರ ಜೀವಿತವುಂಟೋ?
ಉತ್ತರ
ಮರಣದ ನಂತರ ಇರುವ ಜೀವಿತವು ಸರ್ವಸಾಮಾನ್ಯದ ಪ್ರಶ್ನೆಯಾಗಿದೆ. ಯೋಬನು ಹೀಗೆ ಹೇಳುವುದರ ಮೂಲಕ ನಮ್ಮೆಲ್ಲರಿಗೂ ಮಾತನಾಡಿದ್ದಾನೆ, “ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು. ಹೂವಿನ ಹಾಗೆ ಅರಳಿ ಬಾಡುವನು, ನೆರಳಿನಂತೆ ನಿಲ್ಲದೆ ಓಡಿಹೋಗುವನು….. ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?” (ಯೋಬ 14:1-2, 14). ಯೋಬನ ಹಾಗೆ, ಈ ಪ್ರಶ್ನೆಯಿಂದ ನಾವೆಲ್ಲರೂ ಸವಾಲಿಗೆ ಎದುರಾಗಿದ್ದೇವೆ. ನಾವು ಸತ್ತ ನಂತರ ನಿಜವಾಗಿ ನಮಗೆ ಏನಾಗುತ್ತದೆ? ನಾವು ಕೇವಲ ಅಸ್ತಿತ್ವದಲ್ಲಿರಲು ಕೊನೆಗೊಳ್ಳುತ್ತೇವೋ? ಕ್ರಮೇಣವಾಗಿ ವೈಯಕ್ತಿಕ ಶ್ರೇಷ್ಠತೆಯನ್ನು ಸಾಧಿಸುವುದಕ್ಕಾಗಿ ಜೀವಿತವು ಅಗಲುವ ಮತ್ತು ಭೂಮಿಗೆ ಹಿಂದುರಿಗಿ ಬರುವ ಸುತ್ತುವ ಬಾಗಿಲಾಗಿದೆಯೋ? ಪ್ರತಿಯೊಬ್ಬರೂ ಅದೇ ಸ್ಥಳಕ್ಕೆ ಹೋಗುತ್ತಾರೋ, ಅಥವಾ ನಾವು ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೋ? ನಿಜವಾಗಿ ಪರಲೋಕ ಮತ್ತು ನರಕವಿದೆಯಾ?
ಮರಣದ ನಂತರ ಜೀವಿತವಿರುವದು ಮಾತ್ರವಲ್ಲದೆ, ಮಹಿಮೆಯುಳ್ಳ ನಿತ್ಯಜೀವವಿದೆ ಎಂದು ಸತ್ಯವೇದವು ನಮಗೆ ಹೇಳುತ್ತದೆ, “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ” (1 ಕೊರಿಂಥ 2:9) ದೇವರು ಯೇಸು ಕ್ರಿಸ್ತನಲ್ಲಿ ಶರೀರಧಾರೆಯಾಗಿ, ಈ ನಿತ್ಯಜೀವದ ವರವನ್ನು ನಮಗೆ ಕೊಡಲು ಭೂಮಿಗೆ ಬಂದನು. “ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು; ನಮಗೆ ಸುಕ್ಷೇಮವನ್ನುಂಟುಮಾಡುವ ದಂಡನೆಯನ್ನು ಅವನು ಅನುಭವಿಸಿದನು; ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು” (ಯೆಶಾಯ 53:5). ನಾವೆಲ್ಲರೂ ಹೊರಬೇಕಾದ ಶಿಕ್ಷೆಯನ್ನು ಯೇಸು ಹೊತ್ತುಕೊಂಡನು ಮತ್ತು ನಮ್ಮ ಪಾಪಗಳಿಗಾಗಿ ದಂಡವನ್ನು ತೆರಲು ತನ್ನ ಜೀವವನ್ನು ಯಜ್ಞವಾಗಿ ಅರ್ಪಿಸಿದನು. ಮೂರು ದಿನಗಳ ನಂತರ, ಸಮಾಧಿಯಿಂದ ಎದ್ದೇಳುವುದರ ಮೂಲಕ ಮರಣದ ಮೇಲೆ ತನ್ನ ಜಯವನ್ನು ಸಾಧಿಸಿದನು. ಆತನು ಭೂಮಿಯ ಮೇಲೆ ನಾಲ್ವತ್ತು ದಿವಸಗಳು ಇದ್ದನು ಮತ್ತು ಪರಲೋಕಕ್ಕೆ ಏರಿ ಹೋಗುವುದಕ್ಕೆ ಮೊದಲು ಸಾವಿರಾರು ಜನರಿಗೆ ಕಾಣಿಸಿಕೊಂಡನು. ರೋಮಾ 4:25 ಹೀಗೆ ಹೇಳುತ್ತದೆ, “ದೇವರು ಆತನನ್ನು ನಮ್ಮ ಅಪರಾಧಗಳ ನಿಮಿತ್ತ ಮರಣಕ್ಕೆ ಒಪ್ಪಿಸಿಕೊಟ್ಟು ನಮಗೆ ನೀತಿವಂತರೆಂಬ ನಿರ್ಣಯವು ಉಂಟಾಗುವ ನಿಮಿತ್ತ ಜೀವದಿಂದ ಎಬ್ಬಿಸಿದನು.” ಕ್ರಿಸ್ತನ ಪುನರುತ್ಥಾನವು ಚೆನ್ನಾಗಿ ದಾಖಲಾದ ಘಟನೆಯಾಗಿದೆ. ಅಪೊಸ್ತಲನಾದ ಪೌಲನು ಅದರ ಅಂಗೀಕಾರಾರ್ಹತೆಗೆ ಪ್ರತ್ಯಕ್ಷದರ್ಶಿಗಳನ್ನು ಪ್ರಶ್ನಿಸಲು ಜನರಿಗೆ ಸವಾಲು ಹಾಕಿದನು, ಮತ್ತು ಇದರ ಸತ್ಯದೊಂದಿಗೆ ಸ್ಪರ್ಧಿಸಲು ಯಾರೂ ಶಕ್ತರಾಗಲಿಲ್ಲ. ಪುನರುತ್ಥಾನವು ಕ್ರೈಸ್ತ ನಂಬಿಕೆಗೆ ಮೂಲೆಗಲ್ಲಾಗಿದೆ. ಕ್ರಿಸ್ತನು ಮರಣದಿಂದ ಎಬ್ಬಿಸಲ್ಪಟ್ಟದ್ದರಿಂದ, ನಾವು ಸಹ ಪುನರುತ್ಥಾನವಾಗುತ್ತೇವೆ ಎಂಬ ನಂಬಿಕೆಯನ್ನು ಹೊಂದಿಕೊಳ್ಳಬಹುದು. ಯೇಸು ಕ್ರಿಸ್ತನ ಪುನರುತ್ಥಾನವು ಮರಣದ ನಂತರ ಜೀವಿತ ಇದೆ ಎಂಬುದಕ್ಕೆ ಅಂತಿಮ ರುಜವಾತಾಗಿದೆ. ತಿರಿಗಿ ಜೀವಕ್ಕೆ ಎಬ್ಬಿಸಲ್ಪಡುವವರ ಶ್ರೇಷ್ಠವಾದ ಸುಗ್ಗಿಗೆ ಕ್ರಿಸ್ತನೊಬ್ಬನೇ ಮೊದಲನೆಯವನಾಗಿದ್ದನು. ಅವನಿಗೆ ನಾವೆಲ್ಲರೂ ಸಂಬಂಧಪಟ್ಟಿರುವ, ಆದಾಮನೆಂಬ ಒಬ್ಬ ಮನುಷ್ಯನ ಮೂಲಕ ಶಾರೀರಿಕ ಮರಣವು ಬಂತು. ಆದರೆ ಯೇಸು ಕ್ರಿಸ್ತನಲ್ಲಿಟ್ಟಿರುವ ನಂಬಿಕೆಯ ಮೂಲಕ ದೇವರ ಕುಟುಂಬದೊಳಕ್ಕೆ ಅಂಗೀಕರಿಸಲ್ಪಟ್ಟಿರುವ ಎಲ್ಲರಿಗೂ ಹೊಸ ಜೀವಿತ ಕೊಡಲಾಗುತ್ತದೆ (1 ಕೊರಿಂಥ 15:20-22). ದೇವರು ಯೇಸುವಿನ ದೇಹವನ್ನು ಎಬ್ಬಿಸಿದಂತೆಯೇ, ಯೇಸು ಹಿಂದಿರುಗಿ ಬರುವಾಗ ನಮ್ಮ ದೇಹಗಳು ಪುನರುತ್ಥಾನವಾಗುತ್ತವೆ (1 ಕೊರಿಂಥ 6:14).
ನಾವೆಲ್ಲರೂ ಕ್ರಮೇಣವಾಗಿ ಪುನರುತ್ಥಾನವಾದರೂ ಸಹ, ಪ್ರತಿಯೊಬ್ಬರೂ ಪರಲೋಕಕ್ಕೆ ಹೋಗುವದಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ಈ ಜೀವಿತದಲ್ಲಿ ಒಂದು ಆಯ್ಕೆಯನ್ನು ಮಾಡಬೇಕಾಗಿದೆ, ಮತ್ತು ಈ ಆಯ್ಕೆಯು ಒಬ್ಬರ ನಿತ್ಯತ್ವದ ನಿರ್ಧಿಷ್ಟ ಸ್ಥಳವನ್ನು ನಿರ್ಧರಿಸುತ್ತದೆ. ಸತ್ಯವೇದವು ಹೇಳುವದೇನಂದರೆ ಒಂದೇ ಸಾರಿ ಸಾಯುವುದು ಆಮೇಲೆ ನ್ಯಾಯತೀರ್ಪು ನೇಮಕವಾಗಿದೆ (ಇಬ್ರಿಯ 9:27). ಕ್ರಿಸ್ತನಲ್ಲಿರುವ ನಂಬಿಕೆಯ ಮೂಲಕ ನೀತಿವಂತರಾಗಿರುವವರು ಪರಲೋಕದಲ್ಲಿರುವ ನಿತ್ಯಜೀವವನ್ನು ಹೊಂದಿಕೊಳ್ಳುವರು, ಆದರೆ ಕ್ರಿಸ್ತನನ್ನು ರಕ್ಷಕನೆಂದು ನಿರಾಕರಿಸುವವರನ್ನು ನರಕದ ನಿತ್ಯ ಶಿಕ್ಷೆಗೆ ಒಪ್ಪಿಸಲಾಗುತ್ತದೆ (ಮತ್ತಾಯ 25:46). ಪರಲೋಕದಂತೆ ನರಕವು ಕೇವಲ ಅಸ್ತಿತ್ವದಲ್ಲಿರುವ ಸ್ಥಿತಿಯಲ್ಲ, ಆದರೆ ಅಕ್ಷರಾರ್ಥವಾಗಿ ಇರುವ ಸ್ಥಳವಾಗಿದೆ. ಇದು ಅನೀತಿವಂತರಿಗೆ ಎಂದಿಗೂ ಕೊನೆಗೊಳ್ಳದ ದೇವರ ನಿತ್ಯ ಶಾಪವನ್ನು ಅನುಭವಿಸುವ ಸ್ಥಳವಾಗಿದೆ. ನರಕವನ್ನು ತಳವಿಲ್ಲದ ಹಳ್ಳವೆಂದು ವಿವರಿಸಲಾಗಿದೆ (ಲೂಕ 8:31; ಪ್ರಕಟನೆ 9:1) ಮತ್ತು ಗಂಧಕಗಳಿಂದ ಉರಿಯುವ ಬೆಂಕಿಯ ಕೆರೆಯಾಗಿದೆ, ಇಲ್ಲಿನ ನಿವಾಸಿಗಳಿಗೆ ಹಗಲೂ ರಾತ್ರಿ ಎಂದೆಂದಿಗೂ ಪೀಡಿಸಲಾಗುತ್ತದೆ (ಪ್ರಕಟನೆ 20:10). ನರಕದಲ್ಲಿ ತೀವ್ರ ದುಃಖ ಮತ್ತು ಕೋಪವನ್ನು ಸೂಚಿಸುವ ಗೋಳಾಟವೂ ಹಲ್ಲು ಕಡಿಯೋಣವೂ ಇರುತ್ತವೆ (ಮತ್ತಾಯ 13:42).
ದುಷ್ಟರ ಮರಣದಲ್ಲಿ ದೇವರು ಆನಂದಿಸುವುದಿಲ್ಲ, ಆದರೆ ಅವರು ತಮ್ಮ ದುಷ್ಟತ್ವದ ಮಾರ್ಗಗಳಿಂದ ತಿರುಗಿಕೊಳ್ಳಬೇಕೆಂದು ಆಶಿಸುತ್ತಾನೆ, ಇದರಿಂದ ಅವರು ಬದುಕಬಹುದು (ಯೆಹೆಜ್ಕೇಲ 33:11). ಆದರೆ ಆತನು ನಮ್ಮನ್ನು ಅಧೀನರಾಗಲು ಒತ್ತಾಯಿಸುವುದಿಲ್ಲ; ಒಂದು ವೇಳೆ ನಾವು ಆತನನ್ನು ತಿರಸ್ಕರಿಸಲು ಆಯ್ಕೆಮಾಡಿಕೊಂಡರೆ, ನಾವು ಆತನನ್ನು ಬಿಟ್ಟು ಸದಾಕಾಲ ಜೀವಿಸಬೇಕೆಂಬ ನಮ್ಮ ನಿರ್ಧಾರವನ್ನು ಆತನು ಅಂಗೀಕರಿಸುತ್ತಾನೆ. ಭೂಮಿಯ ಮೇಲಿನ ಜೀವಿತವು ಒಂದು ಪರೀಕ್ಷೆಯಾಗಿದೆ, ಮುಂದೆ ಬರಬೇಕಾದವುಗಳಿಗೆ ಸಿದ್ಧತೆಯಾಗಿದೆ. ವಿಶ್ವಾಸಿಗಳಿಗೆ ಮರಣ ನಂತರದ ಜೀವಿತವು ದೇವರೊಂದಿಗೆ ಪರಲೋಕದಲ್ಲಿರುವ ನಿತ್ಯಜೀವವಾಗಿದೆ. ಅವಿಶ್ವಾಸಿಗಳಿಗೆ, ಮರಣ ನಂತರದ ಜೀವಿತವು ಬೆಂಕಿಯ ಕೆರೆಯ ನಿತ್ಯತ್ವವಾಗಿದೆ. ಮರಣದ ನಂತರ ನಾವು ನಿತ್ಯಜೀವವನ್ನು ಪಡೆದುಕೊಂಡು, ಬೆಂಕಿ ಕೆರೆಯ ನಿತ್ಯತ್ವದಿಂದ ತಪ್ಪಿಸಿಕೊಳ್ಳುವುದು ಹೇಗೆ? ಯೇಸು ಕ್ರಿಸ್ತನಲ್ಲಿ ನಂಬಿಕೆ ಮತ್ತು ಭರವಸೆಯ ಮೂಲಕ – ಒಂದೇ ಒಂದು ಮಾರ್ಗವುಂಟು. ಯೇಸು ಹೇಳಿದ್ದು, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು; ಮತ್ತು ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವದಿಲ್ಲ….” (ಯೋಹಾನ 11:25-26).
ನಿತ್ಯಜೀವದ ಉಚಿತ ವರವು ಎಲ್ಲರಿಗೂ ಲಭ್ಯವಾಗಿದೆ. “ಆತನ ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು; ಮಗನಿಗೆ ಒಳಗಾಗದವನು ಜೀವವನ್ನು ಕಾಣುವದೇ ಇಲ್ಲ; ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವದು” (ಯೋಹಾನ 3:36). ಮರಣದ ನಂತರ ದೇವರ ರಕ್ಷಣೆಯ ವರವನ್ನು ಅಂಗೀಕರಿಸಲು ನಮಗೆ ಅವಕಾಶವು ಕೊಡಲ್ಪಡುವದಿಲ್ಲ. ಯೇಸು ಕ್ರಿಸ್ತನನ್ನು ಅಂಗೀಕರಿಸುವುದು ಅಥವಾ ತಿರಸ್ಕರಿಸುವುದರ ಮೂಲಕ ನಮ್ಮ ನಿತ್ಯತ್ವದ ನಿರ್ಧಿಷ್ಟ ಸ್ಥಳವನ್ನು ಭೂಮಿಯ ಮೇಲಿನ ನಮ್ಮ ಜೀವಿತದ ಸಮಯದಲ್ಲಿ ನಿರ್ಧರಿಸಲಾಗುತ್ತದೆ. “…ಈಗಲೇ ಆ ಸುಪ್ರಸನ್ನತೆಯಕಾಲ; ಇದೇ ಆ ರಕ್ಷಣೆಯ ದಿನ” (2 ಕೊರಿಂಥ 6:2). ನಾವು ದೇವರಿಗೆ ವಿರುದ್ಧವಾಗಿ ಮಾಡಿದ ನಮ್ಮ ಪಾಪಕ್ಕಾಗಿ ಪೂರ್ತಿ ಕ್ರಯವನ್ನು ಕೊಟ್ಟ ಯೇಸು ಕ್ರಿಸ್ತನ ಮರಣದಲ್ಲಿ ಭರವಸೆಯಿಡುವುದಾದರೆ, ನಮಗೆ ಈ ಭೂಮಿಯ ಮೇಲೆ ಅರ್ಥಭರಿತವಾದ ಜೀವಿತವು ಕೊಡಲಾಗುತ್ತದೆ, ಅಷ್ಟೇ ಅಲ್ಲದೆ ಮರಣದ ನಂತರ ಕ್ರಿಸ್ತನ ಮಹಿಮೆಯುಳ್ಳ ಪ್ರಸನ್ನತೆಯಲ್ಲಿ ನಿತ್ಯಜೀವವೂ ಸಹ ಕೊಡಲ್ಪಡುತ್ತದೆ.
ನೀವು ಇಲ್ಲಿ ಓದಿದವುಗಳ ನಿಮಿತ್ತ ಕ್ರಿಸ್ತನಿಗಾಗಿ ತೀರ್ಮಾನ ಮಾಡಿಕೊಂಡಿದ್ದೀರಾ? ಹಾಗಾದರೆ, “ನಾನು ಇಂದು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿರಿ.
English
ಮರಣದ ನಂತರ ಜೀವಿತವುಂಟೋ?