settings icon
share icon
ಪ್ರಶ್ನೆ

ಕ್ರೈಸ್ತನು ಎಂದರೇನು?

ಉತ್ತರ


ಕ್ರೈಸ್ತನು ಎಂಬುದರ ನಿಘಂಟಿನ ನಿರೂಪಣೆ ಹೀಗಿರಬಹುದು, “ಒಬ್ಬ ವ್ಯಕ್ತಿಯು ಯೇಸುವಿನ ಬೋಧನೆಗಳ ಮೇಲೆ ಆಧಾರಗೊಂಡು ಯೇಸುವನ್ನು ಕ್ರಿಸ್ತನೆಂದು ಅಥವಾ ಧರ್ಮದಲ್ಲಿ ತನ್ನ ನಂಬಿಕೆಯನ್ನು ಅರಿಕೆ ಮಾಡುವುದಾಗಿದೆ.” ಆದರೆ ಇದು ಒಂದು ಒಳ್ಳೆಯ ಆರಂಭದ ಅಂಶವಾಗಿದ್ದು, ಅನೇಕ ನಿಘಂಟುಗಳ ನಿರೂಪಣೆಗಳಂತೆ, ಕ್ರೈಸ್ತನಾಗಿರುವುದು ಎಂದರೆ ಏನೆಂದು ಸತ್ಯವೇದದ ಸತ್ಯವನ್ನು ನಿಜವಾಗಿ ತಿಳಿಯಪಡಿಸಲು ಇದು ತಪ್ಪಿಹೋಗಿದೆ. “ಕ್ರೈಸ್ತರು” ಎಂಬ ಪದವನ್ನು ಹೊಸ ಒಡಂಬಡಿಕೆಯಲ್ಲಿ ಮೂರು ಸಾರಿ ಉಪಯೋಗಿಸಲಾಗಿದೆ (ಅಪೊಸ್ತಲರ ಕೃತ್ಯಗಳು 11:26; 26:28; 1 ಪೇತ್ರ 4:16). ಯೇಸು ಕ್ರಿಸ್ತನನ್ನು ಹಿಂಬಾಲಿಸುವವರಿಗೆ ಅಂತಿಯೋಕ್ಯದಲ್ಲಿ ಮೊದಲು “ಕ್ರೈಸ್ತರು” ಎಂದು ಕರೆಯಲಾಯಿತು (ಅಪೊಸ್ತಲರ ಕೃತ್ಯಗಳು 11:26) ಯಾಕೆಂದರೆ ಅವರ ನಡತೆ, ಚಟುವಟಿಕೆ ಮತ್ತು ಮಾತುಗಳು ಕ್ರಿಸ್ತನ ಹಾಗೆ ಇದ್ದವು. ಅಕ್ಷರಾರ್ಥವಾಗಿ “ಕ್ರೈಸ್ತರು” ಎಂಬ ಪದದ ಅರ್ಥ, “ಕ್ರಿಸ್ತನ ಪಕ್ಷಕ್ಕೆ ಸೇರುವುದು” ಅಥವಾ “ಕ್ರಿಸ್ತನ ಹಿಂಬಾಲಕನು.”

ಅನಾದೃಷ್ಟವಾಗಿ ಕೆಲವು ಕಾಲದಿಂದ, “ಕ್ರೈಸ್ತನು” ಎಂಬ ಪದವು ಹೆಚ್ಚಿನ ಮಹತ್ವವನ್ನು ಕಳೆದುಕೊಂಡಿದೆ ಮತ್ತು ಅನೇಕವೇಳೆ ಇದನ್ನು ಕೇವಲ ಧಾರ್ಮಿಕರಿಗೆ ಅಥವಾ ಹೆಚ್ಚಿನ ನೈತಿಕ ಮೌಲ್ಯಗಳನ್ನು ಹೊಂದಿರುವವರಿಗೆ ಉಪಯೋಗಿಸಲಾಗಿದೆ, ಆದರೆ ಅವರು ನಿಜವಾಗಿ ಯೇಸು ಕ್ರಿಸ್ತನನ್ನು ಹಿಂಬಾಲಿಸುವವರು ಅಥವಾ ಹಿಂಬಾಲಿಸದೆ ಇರುವವರು ಆಗಿರಬಹುದು. ಯೇಸು ಕ್ರಿಸ್ತನಲ್ಲಿ ವಿಶ್ವಾಸ ಮತ್ತು ಭರವಸೆಯಿಡದೆ ಕೇವಲ ಅವರು ಸಭೆಗೆ ಹೋಗುವುದರಿಂದ ಅಥವಾ ಅವರು “ಕ್ರೈಸ್ತ” ದೇಶದಲ್ಲಿ ವಾಸಿಸುವುದರಿಂದ ಅನೇಕ ಜನರು ತಮ್ಮನ್ನು ತಾವು ಕ್ರೈಸ್ತರು ಎಂದು ಪರಿಗಣಿಸುತ್ತಾರೆ. ಆದರೆ ಸಭೆಗೆ ಹೋಗುವುದು, ನಿಮಗಿಂತ ಕಡಿಮೆ ಭಾಗ್ಯಶಾಲಿಯಾಗಿರುವವರ ಸೇವೆಮಾಡುವುದು, ಅಥವಾ ಒಳ್ಳೆಯ ವ್ಯಕ್ತಿಯಾಗಿರುವುದು ಇವು ನಿಮ್ಮನ್ನು ಕ್ರೈಸ್ತರನ್ನಾಗಿ ಮಾಡುವುದಿಲ್ಲ. ನೀವು ಗ್ಯಾರೆಜಿಗೆ ಹೋಗುವುದರಿಂದ ಅದು ನಿಮ್ಮನ್ನು ಅಟೋಮೊಬೈಲನ್ನಾಗಿ ಮಾಡದೆ ಇರುವಂತೆಯೇ ಕೇವಲ ಸಭೆಗೆ ಹೋಗುವುದು ನಿಮ್ಮನ್ನು ಎಷ್ಟು ಮಾತ್ರಕ್ಕೂ ಕ್ರೈಸ್ತರನ್ನಾಗಿ ಮಾಡುವುದಿಲ್ಲ. ಸಭೆಯ ಸದಸ್ಯರಾಗಿರುವುದು, ಕ್ರಮವಾಗಿ ಆರಾಧನೆಗಳಿಗೆ ಹಾಜರಾಗುವುದು, ಮತ್ತು ಸಭಾ ಕಾರ್ಯಕ್ಕೆ ಹಣ ಕೊಡುವುದು ಇವು ನಿಮ್ಮನ್ನು ಕ್ರೈಸ್ತರನ್ನಾಗಿ ಮಾಡುವುದಿಲ್ಲ.

ನಾವು ಮಾಡುವ ಒಳ್ಳೆಯ ಕಾರ್ಯಗಳ ನಿಮಿತ್ತ ದೇವರು ನಮ್ಮನ್ನು ಅಂಗೀಕರಿಸಿಕೊಳ್ಳುವದಿಲ್ಲವೆಂದು ಸತ್ಯವೇದವು ಬೋಧಿಸುತ್ತದೆ. ತೀತ 3:5 ಹೀಗೆ ಹೇಳುತ್ತದೆ, “ನಾವು ಮಾಡಿದ ಪುಣ್ಯಕ್ರಿಯೆಗಳ ನಿಮಿತ್ತದಿಂದಲ್ಲ ಆತನ ಕರುಣೆಯಲ್ಲಿಯೇ ಪುನರ್ಜನ್ಮವನ್ನು ಸೂಚಿಸುವ ಸ್ನಾನದ ಮೂಲಕವಾಗಿ ಪವಿತ್ರಾತ್ಮನು ನಮ್ಮಲ್ಲಿ ನೂತನ ಸ್ವಭಾವವನ್ನು ಉಂಟುಮಾಡುವದರ ಮೂಲಕವಾಗಿ ಆತನು ನಮ್ಮನ್ನು ರಕ್ಷಿಸಿದನು.” ಆದುದರಿಂದ, ಒಬ್ಬ ಕ್ರೈಸ್ತನು ಅಂದರೆ ಅವನು ದೇವರಿಂದ ತಿರಿಗಿ ಹುಟ್ಟಿದವನು (ಯೋಹಾನ 3:3; ಯೋಹಾನ 3:7; 1 ಪೇತ್ರ 1:23) ಮತ್ತು ಯೇಸು ಕ್ರಿಸ್ತನಲ್ಲಿ ನಂಬಿಕೆ ಮತ್ತು ಭರವಸೆಯಿಟ್ಟವನು ಆಗಿದ್ದಾನೆ. ಎಫೆಸ 2:8 ನಮಗೆ ಹೀಗೆ ಹೇಳುತ್ತದೆ, “ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ವರವೇ.”

ಯೇಸು ಕ್ರಿಸ್ತನಲ್ಲಿ ಮತ್ತು ಆತನ ಕಾರ್ಯದಲ್ಲಿ, ಹಾಗೂ ತನ್ನ ಪಾಪಗಳ ಕ್ರಯಕ್ಕಾಗಿ ಆತನು ಶಿಲುಬೆಯ ಮೇಲೆ ಹೊಂದಿದ ಮರಣದಲ್ಲಿ ಮತ್ತು ಮೂರನೆಯ ದಿನದ ಆತನ ಪುನರುತ್ಥಾನದಲ್ಲಿ ನಂಬಿಕೆ ಮತ್ತು ಭರವಸೆಯಿಟ್ಟ ವ್ಯಕ್ತಿಯು ಒಬ್ಬ ನಿಜವಾದ ಕ್ರೈಸ್ತನಾಗಿದ್ದಾನೆ, ಯೋಹಾನ 1:12 ನಮಗೆ ಹೀಗೆ ಹೇಳುತ್ತದೆ, “ಯಾರಾರು ಆತನನ್ನು ಅಂಗೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ ಅವರಿಗೆ ದೇವರ ಮಕ್ಕಳಾಗುವ ಅಧಿಕಾರಕೊಟ್ಟನು.” ಬೇರೆಯವರಿಗೆ ಪ್ರೀತಿ ತೋರಿಸುವುದು ಮತ್ತು ದೇವರ ವಾಕ್ಯಕ್ಕೆ ವಿಧೇಯರಾಗುವುದು ನಿಜವಾದ ಕ್ರೈಸ್ತರಿಗೆ ಗುರುತಾಗಿದೆ (ಯೋಹಾನ 2:4,10). ನಿಜವಾದ ಕ್ರೈಸ್ತನು ದೇವರ ಮಗನಾಗಿದ್ದಾನೆ, ದೇವರ ನಿಜವಾದ ಕುಟುಂಬದ ಭಾಗವಾಗಿದ್ದಾನೆ, ಮತ್ತು ಯೇಸು ಕ್ರಿಸ್ತನಲ್ಲಿ ಹೊಸ ಜೀವನ ಹೊಂದಿಕೊಂಡವನಾಗಿದ್ದಾನೆ.

ನೀವು ಇಲ್ಲಿ ಓದಿದವುಗಳ ನಿಮಿತ್ತ ಕ್ರಿಸ್ತನಿಗಾಗಿ ತೀರ್ಮಾನ ಮಾಡಿಕೊಂಡಿದ್ದೀರಾ? ಹಾಗಾದರೆ, “ನಾನು ಇಂದು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿರಿ.
English



ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ಕ್ರೈಸ್ತನು ಎಂದರೇನು?
Facebook icon Twitter icon Pinterest icon Email icon
© Copyright Got Questions Ministries