settings icon
share icon
ಪ್ರಶ್ನೆ

ನಾನು ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬಾರದು?

ಉತ್ತರ


ಆತ್ಮಹತ್ಯೆಯ ಮೂಲಕ ತಮ್ಮ ಜೀವಿತವನ್ನು ಕೊನೆಗೊಳಿಸಲು ಆಲೋಚಿಸುವವರಿಗೆ ನಮ್ಮ ಹೃದಯಗಳು ಸಂಧಿಸುತ್ತವೆ. ಒಂದು ವೇಳೆ ಅದು ನೀವೇ ಆಗಿದ್ದರೆ, ಅದು ಅನೇಕ ಭಾವನೆಗಳನ್ನು ಹೇಳಬಹುದು, ಅವು ನಿರೀಕ್ಷೆಯಿಲ್ಲದ ಮತ್ತು ಹಾತಾಶೆಯ ಭಾವನೆಗಳು. ನೀವು ಆಳವಾದ ಹಳ್ಳದಲ್ಲಿದ್ದೀರೆಂದು ಭಾವಿಸಬಹುದು, ಮತ್ತು ಸಂಗತಿಗಳು ಉತ್ತಮವಾಗಲು ಏನಾದರು ನಿರೀಕ್ಷೆ ಇದೆಯಾ ಎಂದು ಸಂದೇಹಪಡಬಹುದು. ನೀವು ಎಲ್ಲಿಂದ ಬರುತ್ತಿದ್ದೀರೆಂದು ಯಾರೂ ಚಿಂತಿಸುವಂತೆ ಅಥವಾ ಅರ್ಥಮಾಡಿಕೊಳ್ಳುವಂತೆ ಕಾಣುವದಿಲ್ಲ. ಜೀವಿತವು ಕೇವಲ ಬದುಕಲು ಯೋಗ್ಯವಲ್ಲ….ಅಥವಾ ಯೋಗ್ಯವೋ?

ಈಗಲೇ ನಿಮ್ಮ ಜೀವಿತದಲ್ಲಿ ದೇವರು ನಿಜವಾಗಿ ದೇವರಾಗಿರಲು ನೀವು ಅನುಮತಿಸಲು ಪರಿಗಣಿಸಲು ಕೆಲವು ಕ್ಷಣಗಳನ್ನು ತೆಗೆದುಕೊಳ್ಳುವುದಾದರೆ, ಆತನು ನಿಜವಾಗಿ ಎಷ್ಟು ದೊಡ್ಡವನೆಂದು ನಿಮಗೆ ಸಾಭೀತುಪಡಿಸುವನು, “ದೇವರಿಂದ ಬರುವ ಯಾವ ಮಾತಾದರೂ ನಿಷ್ಪಲವಾಗುವದಿಲ್ಲ” (ಲೂಕ 1:37). ಬಹುಶಃ ಹಳೆಯ ನೋವಿನ ಗಾಯಗಳು ತಿರಸ್ಕಾರ ಅಥವಾ ಪರಿತ್ಯಾಗದ ಅಗಾಧವಾಗಿ ಪರಿಣಮಿಸಿರುತ್ತವೆ. ಅವು ಸ್ವಾನುಕಂಪ, ಕೋಪ, ಕಟುತ್ವ, ಪ್ರತೀಕಾರ ಸ್ವಭಾವದ ಆಲೋಚನೆಗಳು, ಅಥವಾ ಅನಾರೋಗ್ಯಕರ ಹೆದರಿಕೆಗಳಿಗೆ ನಡೆಸಿ ನಿಮ್ಮ ಬಹುಪ್ರಾಮುಖ್ಯವಾದ ಸಂಬಂಧಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡಿರುತ್ತವೆ.

ನೀವು ಆತ್ಮಹತ್ಯೆ ಮಾಡಿಕೊಳ್ಳಬಾರದು ಯಾಕೆ? ಸ್ನೇಹಿತರೇ, ನಿಮ್ಮ ಜೀವನದಲ್ಲಿ ಸಂಗತಿಗಳು ಎಷ್ಟೇ ಕೆಟ್ಟದಾಗಿದ್ದರೂ, ನಿಮ್ಮ ಹತಾಶೆಯ ಸುರಂಗದ ಮೂಲಕ ನಿಮ್ಮನ್ನು ಮಾರ್ಗದರ್ಶಿಸಿ ಹೊರಕ್ಕೆ ಆತನ ಆಶ್ಚರ್ಯಕರ ಬೆಳಕಿಗೆ ನಡೆಸಲು ನಿಮಗಾಗಿ ಕಾಯುತ್ತಿರುವ ಒಬ್ಬ ಪ್ರೀತಿಯ ದೇವರು ಇದ್ದಾನೆ. ಆತನು ನಿಮ್ಮ ಖಚಿತವಾದ ನಿರೀಕ್ಷೆಯಾಗಿದ್ದಾನೆ. ಆತನ ಹೆಸರು ಯೇಸು. ಈ ಯೇಸು, ಪಾಪವಿಲ್ಲದ ದೇವಕುಮಾರನು, ನಿಮ್ಮ ತಿರಸ್ಕಾರದ ಮತ್ತು ಅವಮಾನದ ಸಮಯದಲ್ಲಿ ನಿಮ್ಮನ್ನು ಗುರುತಿಸುತ್ತಾನೆ. ಯೆಶಾಯ 53:2-6ರಲ್ಲಿ, ಪ್ರವಾದಿಯಾದ ಯೆಶಾಯನು ತನ್ನ ಬಗ್ಗೆ ವಿವರಿಸುತ್ತಾ ಪ್ರತಿಯೊಬ್ಬರಿಂದ “ಧಿಕ್ಕರಿಸಲ್ಪಟ್ಟವರೂ ತಿರಸ್ಕರಿಸಲ್ಪಟ್ಟವರೂ” ಆಗಿರುವ ಮನುಷ್ಯನು ಎಂದು ಬರೆದನು. ಅವನ ಜೀವಿತವು ದುಃಖ ಮತ್ತು ಬಾಧೆಗಳಿಂದ ತುಂಬಿತ್ತು. ಆದರೆ ಅವನು ಹೊತ್ತ ದುಃಖಗಳು ತನ್ನ ಸ್ವಂತವುಗಳಾಗಿರಲಿಲ್ಲ; ಅವು ನಮ್ಮವಾಗಿದ್ದವು. ಆತನಿಗೆ ತಿವಿಯಲಾಯಿತು, ಗಾಯಪಡಿಸಿದರು ಮತ್ತು ಜಜ್ಜಿದರು, ಇದೆಲ್ಲಾ ನಮ್ಮ ಪಾಪದ ನಿಮಿತ್ತವಾಗಿತ್ತು. ಆತನ ಬಾಧೆಗಳ ಮೂಲಕ ನಮ್ಮ ಜೀವಿತಗಳು ವಿಮೋಚಿಸಲ್ಪಟ್ಟವು ಮತ್ತು ಪೂರ್ಣವಾಗಿ ಮಾಡಲ್ಪಟ್ಟವು.

ಸ್ನೇಹಿತರೇ, ಈ ಎಲ್ಲವನ್ನು ಯೇಸು ಕ್ರಿಸ್ತನು ಸಹಿಸಿಕೊಂಡನು ಇದರಿಂದ ನಿಮ್ಮ ಎಲ್ಲಾ ಪಾಪಗಳು ಕ್ಷಮಿಸಲ್ಪಡಬಹುದಾಗಿತ್ತು. ನೀವು ಹೊತ್ತುಕೊಂಡು ಹೋಗುವ ಅಪರಾಧದ ತೂಕವು ಏನೇ ಆಗಿದ್ದರೂ, ನಿಮ್ಮ ರಕ್ಷಕನೆಂದು ಆತನನ್ನು ದೀನತೆಯಿಂದ ಅಂಗೀಕರಿಸಿಕೊಳ್ಳುವದಾದರೆ, ಆತನು ನಿಮ್ಮನ್ನು ಕ್ಷಮಿಸುತ್ತಾನೆ ಎಂದು ತಿಳಿದುಕೊಳ್ಳಿರಿ. “ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ; ಬಿಡಿಸುವೆನು; ಆಗ ನನ್ನನ್ನು ಕೊಂಡಾಡುವಿರಿ.” (ಕೀರ್ತನೆ 50:15). ನೀವು ಮಾಡಿದವುಗಳನ್ನು ಕ್ಷಮಿಸಲು ಯೇಸುವಿಗೆ ಎಷ್ಟು ಮಾತ್ರಕ್ಕೂ ಕಷ್ಟವಲ್ಲಾ. ಆತನು ಆರಿಸಿಕೊಂಡ ಸೇವಕರಲ್ಲಿ, ಕೊಲೆಗಾರರು (ಮೋಶೆ), ಕೊಲೆಗಾರನು ಮತ್ತು ವ್ಯಭಿಚಾರನು (ಅರಸನಾದ ದಾವೀದನು), ಮತ್ತು ದೈಹಿಕ ಮತ್ತು ಭಾವನಾತ್ಮಕವಾಗಿ ಹಿಂಸಿಸಿದವನು (ಅಪೊಸ್ತಲನಾದ ಪೌಲನು) ಇಂಥ ಕೆಲವರು ದೊಡ್ಡ ಪಾಪಗಳನ್ನು ಮಾಡಿದರು. ಆದರೂ ಅವರು ಕ್ಷಮಾಪಣೆಯನ್ನು ಮತ್ತು ಕರ್ತನಲ್ಲಿ ಸಮೃದ್ಧಿಯಾದ ಹೊಸ ಜೀವನವನ್ನು ಹೊಂದಿಕೊಂಡರು. “ಹೀಗಿರಲಾಗಿ, ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾದನು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು!” (2 ಕೊರಿಂಥ 5:17).

ನೀವು ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬಾರದು? ಸ್ನೇಹಿತರೇ, “ಮುರಿದು ಹೋದದ್ದನ್ನು” ಸರಿಪಡಿಸಲು ದೇವರು ಸಿದ್ಧನಾಗಿ ನಿಂತಿದ್ದಾನೆ, ಅಂದರೆ ಈಗ ನೀವು ಹೊಂದಿರುವ ಜೀವನ, ಆತ್ಮಹತ್ಯೆಯ ಮೂಲಕ ನೀವು ಕೊನೆಗೊಳಿಸಬೇಕೆಂದು ಬಯಸುವ ಜೀವನ. ಯೆಶಾಯ 61:1-3ರಲ್ಲಿ ಪ್ರವಾದಿಯು ಹೀಗೆ ಬರೆದನು, “ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವದಕ್ಕೂ ಸೆರೆಯವರಿಗೆ ಬಿಡುಗಡೆಯಾಗುವದನ್ನು, ಬಂದಿಗಳಿಗೆ [ಕದ] ತೆರೆಯುವದನ್ನು ಪ್ರಸಿದ್ಧಿಪಡಿಸುವದಕ್ಕೂ ಯೆಹೋವನು ನೇಮಿಸಿರುವ ಶುಭವರುಷ, ನಮ್ಮ ದೇವರು ಮುಯ್ಯಿ ತೀರಿಸುವ ದಿನ, ಇವುಗಳನ್ನು ಪ್ರಚುರಗೊಳಿಸುವದಕ್ಕೂ ದುಃಖಿತರೆಲ್ಲರನ್ನು ಸಂತೈಸುವದಕ್ಕೂ … ಬೂದಿಗೆ ಬದಲಾಗಿ ಶಿರೋಭೂಷಣ, ದುಃಖವಿದ್ದಲ್ಲಿ ಆನಂದತೈಲ, ಕುಂದಿದ ಮನಕ್ಕೆ ಪ್ರತಿಯಾಗಿ ಉತ್ಸಾಹಸ್ತೋತ್ರದ ವಸ್ತ್ರ ಇವುಗಳನ್ನು ಒದಗಿಸಿಕೊಡುವದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ. ಯೆಹೋವನು ತನ್ನ ಪ್ರಭಾವಕ್ಕೋಸ್ಕರ ಹಾಕಿದ ನೀತಿವೃಕ್ಷಗಳು ಎಂಬ ಬಿರುದು ಇವರಿಗಾಗುವದು.”

ಯೇಸುವಿನ ಬಳಿಗೆ ಬನ್ನಿರಿ, ಮತ್ತು ನಿಮ್ಮ ಜೀವನದಲ್ಲಿ ಹೊಸ ಕಾರ್ಯವನ್ನು ಆರಂಭಿಸುವುದಕ್ಕಾಗಿ ಆತನಲ್ಲಿ ನೀವು ಭರವಸೆಯಿಡುವಾಗ ಆತನು ನಿಮ್ಮ ಸಂತೋಷ ಮತ್ತು ಉಪಯುಕ್ತತೆಯನ್ನು ಪುನರ್ ಸ್ಥಾಪಿಸಲಿ. ನೀವು ಕಳೆದುಕೊಂಡ ಸಂತೋಷವನ್ನು ಮರುಕೊಡಲು ಮತ್ತು ನಿಮ್ಮನ್ನು ಉಳಿಸಿಕೊಳ್ಳಲು ಹೊಸ ಆತ್ಮವನ್ನು ಕೊಡಲು ಆತನು ವಾಗ್ಧಾನಮಾಡುತ್ತಿದ್ದಾನೆ. ನಿಮ್ಮ ಮುರಿದ ಮನವು ಆತನಿಗೆ ಅಮೂಲ್ಯವಾಗಿದೆ: “ಕುಗ್ಗಿದ ಮನಸ್ಸೇ ದೇವರಿಗೆ ಇಷ್ಟಯಜ್ಞ; ದೇವರೇ, ಪಶ್ಚಾತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ” (ಕೀರ್ತನೆ 51:12, 15-17).

ಕರ್ತನನ್ನು ನಿಮ್ಮ ರಕ್ಷಕನು ಮತ್ತು ಕುರುಬನು ಎಂದು ಅಂಗೀಕರಿಸುವಿರಾ? ಆತನ ವಾಕ್ಯವಾಗಿರುವ ಸತ್ಯವೇದದ ಮೂಲಕ - ಒಂದು ದಿನ ಒಂದು ಸಮಯದಲ್ಲಿ - ಆತನು ನಿಮ್ಮ ಆಲೋಚನೆಗಳನ್ನು ಮತ್ತು ಹೆಜ್ಜೆಗಳನ್ನು ಮಾರ್ಗದರ್ಶಿಸುವನು. “[ಯೆಹೋವನು] – ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು [ಅನ್ನುತ್ತಾನಲ್ಲಾ]” (ಕೀರ್ತನೆಗಳು 32:8). “ಜ್ಞಾನವೂ ತಿಳುವಳಿಕೆಯೂ ರಕ್ಷಣಕಾರ್ಯ ಸಮೃದ್ಧಿಯೂ ಇರುವದರಿಂದ ನಿನ್ನ ಕಾಲದಲ್ಲಿ ಸ್ಥೈರ್ಯವಿರುವದು; ಯೆಹೋವನ ಮೇಲಣ ಭಯಭಕ್ತಿಯು ನಿನಗೆ ನಿಧಿಯಾಗುವದು” (ಯೆಶಾಯ 33:6). ಕ್ರಿಸ್ತನಲ್ಲಿ ನಿಮಗೆ ಇನ್ನೂ ಹೋರಾಟಗಳು ಇರುತ್ತವೆ, ಆದರೆ ನಿಮಗೆ ಈಗ ನಿರೀಕ್ಷೆಯಿರುತ್ತದೆ. ಆತನು “…ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು” (ಜ್ಞಾನೋಕ್ತಿಗಳು 18:24). ನಿಮ್ಮ ತೀರ್ಮಾನದ ಸಮಯದಲ್ಲಿ ಕರ್ತನಾದ ಯೇಸವಿನ ಕೃಪೆಯು ನಿಮ್ಮೊಂದಿಗಿರಲಿ.

ಯೇಸು ಕ್ರಿಸ್ತನು ನಿಮ್ಮ ರಕ್ಷಕನೆಂದು ನೀವು ಭರವಸೆಯಿಡಲು ಆಶಿಸುವುದಾದರೆ, ನಿಮ್ಮ ಹೃದಯದಲ್ಲಿ ದೇವರಿಗೆ ಈ ಮಾತುಗಳನ್ನು ಹೇಳಿರಿ: “ದೇವರೇ, ನನ್ನ ಜೀವಿತದಲ್ಲಿ ನೀನು ಬೇಕು. ನಾನು ಮಾಡಿದ ಎಲ್ಲವುಗಳಿಗಾಗಿ ನನ್ನನ್ನು ದಯವಿಟ್ಟು ಕ್ಷಮಿಸು. ಯೇಸು ಕ್ರಿಸ್ತನಲ್ಲಿ ನನ್ನ ನಂಬಿಕೆಯನ್ನು ಇಡುತ್ತೇನೆ ಮತ್ತು ಆತನು ನನ್ನ ರಕ್ಷಕನೆಂದು ವಿಶ್ವಾಸವಿಡುತ್ತೇನೆ. ದಯವಿಟ್ಟು ನನ್ನನ್ನು ಶುದ್ಧೀಕರಿಸು, ಗುಣಪಡಿಸು ಮತ್ತು ಜೀವನದಲ್ಲಿ ನನ್ನ ಆನಂದವನ್ನು ತಿರಿಗಿ ಬರಮಾಡು. ನಿನ್ನ ಪ್ರೀತಿಗಾಗಿ ಮತ್ತು ನನ್ನ ಪರವಾಗಿ ಯೇಸುವಿನ ಮರಣಕ್ಕಾಗಿ ವಂದನೆಗಳು.”

ನೀವು ಇಲ್ಲಿ ಓದಿದವುಗಳ ನಿಮಿತ್ತ ಕ್ರಿಸ್ತನಿಗಾಗಿ ತೀರ್ಮಾನ ಮಾಡಿಕೊಂಡಿದ್ದೀರಾ? ಹಾಗಾದರೆ, “ನಾನು ಇಂದು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿರಿ.
English



ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ನಾನು ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬಾರದು?
Facebook icon Twitter icon Pinterest icon Email icon
© Copyright Got Questions Ministries